ನಟ, ನಿರ್ದೇಶಕ ರಮೇಶ್ ಅರವಿಂದ್ ಅವರು ಇತ್ತೀಚೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಲಾವಿದರ ಸಂಘದ ವತಿಯಿಂದ ಆಯೋಜಿಸಿದ್ದ ‘ಚಂದನವನ – ಅಂದು ಇಂದು ಮುಂದು’ ಎಂಬ ವಿಚಾರಗೋಷ್ಠಿಯಲ್ಲಿ ಸಿನಿಮಾ ಕ್ಷೇತ್ರದಲ್ಲಿನ ಎಐ ಬಳಕೆಯ ಕುರಿತು ಮಾತನಾಡಿದ್ದಾರೆ.

ರಮೇಶ್ ಅರವಿಂದ್ ಅವರು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ನಲ್ಲಿ ಎಐ ಕುರಿತು ಮಾತನಾಡಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೊದಲ್ಲಿ ಕನ್ನಡ ಚಲನಚಿತ್ರೋದ್ಯಮವು ಬೆಳೆದು ಬಂದ ಹಾದಿ ಹಾಗೂ ಎಐ ಅನ್ನು ಸಿನಿಮಾ ಕ್ಷೇತ್ರದಲ್ಲಿ ಹೇಗೆಲ್ಲಾ ಬಳಸಿಕೊಳ್ಳಬಹುದು ಎಂಬುದನ್ನು ಹೇಳಿದ್ದಾರೆ.

ಎಐ ಅನ್ನು ಲಾರಿಗೆ ಹೋಲಿಕೆ ಮಾಡಿ ಮಾತನಾಡಿರುವ ರಮೇಶ್ ಅರವಿಂದ್ ಅವರು ‘ಎಐ ಎಂಬ ದೊಡ್ಡದೊಂದು ಲಾರಿ ನಮ್ಮ ಕಡೆಗೆ ಧಾವಿಸಿ ವೇಗವಾಗಿ ಬರುತ್ತಿದೆ. ನಾವು ಅದರ ಎದುರು ನಿಲ್ಲುವುದು ಅಪ್ರಸ್ತುತ. ಹೀಗಾಗಿ ಬುದ್ದಿವಂತಿಕೆಯಿಂದ ಚಾಲಕನ ಸೀಟ್ ಮೇಲೆ ಕುಳಿತು ನಮಗೆ ಬೇಕಾದಂತೆ ಬಳಸಿಕೊಳ್ಳುವುದು ಉತ್ತಮ’ ಎಂದಿದ್ದಾರೆ.

ಕನ್ನಡ ಚಲನಚಿತ್ರೋದ್ಯಮದ ಹಾದಿಯ ಬಗ್ಗೆ ಮಾತನಾಡಿ ‘ ಇಂದು ನಮ್ಮ ಮುಂದೆ ಎಐ ಇದೆ. ಚಿತ್ರರಂಗವು ಮೂಕಿ ಚಿತ್ರದಿಂದ ಹಿಡಿದು 70 ಎಂ.ಎಂ ಸಿನಿಮಾ ಸ್ಕೋಪ್ವರೆಗೆ ಹಂತ ಹಂತವಾಗಿ ಬೆಳೆದು ಬಂದಿದೆ. ಇದೆಲ್ಲದಕ್ಕಿಂತ ದೊಡ್ಡ ಆವಿಷ್ಕಾರ ಎಐ. ಇಂದು ಎಐ ಮೂಲಕ ಸಿನಿಮಾಗೆ ಬೇಕಾದ ಶಾರ್ಟ್ ಡಿವಿಷನ್, ಸ್ಟೋರಿ ಬೋರ್ಡ್ ಹಾಗೂ ಸಂಭಾಷಣೆಯನ್ನು ರಚಿಸಬಹುದಾಗಿದೆ. ಮಾತ್ರವಲ್ಲದೆ, ಕೆಲ ನಿಮಿಷಗಳಲ್ಲಿ ವ್ಯಕ್ತಿಯೊಬ್ಬನನ್ನು 40 ವರ್ಷದಂತೆ ಅಥವಾ 20 ವರ್ಷದವನಂತೆ ಬಿಂಬಿಸಬಹುದು’ ಎಂದು ಹೇಳಿದ್ದಾರೆ.

ರಮೇಶ್ ಅರವಿಂದ್ ಅವರ ಮುಂಬರುವ ಸಿನಿಮಾ ‘ದೈಜಿ’ಯಾಗಿದೆ. ಈಗಾಗಲೇ ಈ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು ಅಭಿಮಾನಿಗಳಿಂದ ಮೆಚ್ಚುಗೆ ಪಡೆದುಕೊಂಡಿದೆ. ‘ಯುವರ್ಸ್ ಸಿನ್ಸಿಯರ್ಲಿ ರಾಮ್’ ಸಿನಿಮಾದಲ್ಲಿಯೂ ನಟಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.