ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ 2.0 ವರ್ಷನ್ ಹೊರಬರಲಿ!

ರಮೇಶ್ ಅರವಿಂದ್ ಕ್ವಾರಂಟೈನ್ ಟಿಪ್ಸ್
Last Updated 30 ಮಾರ್ಚ್ 2020, 19:30 IST
ಅಕ್ಷರ ಗಾತ್ರ

‘ಅಯ್ಯೋ.. ಮಾಡೋಕೆ ಕೆಲಸ ಇಲ್ಲ; ಹೊರಗೆ ಹೋಗೋಕಾಗಲ್ಲ..’ ಎಂದು ಕೊರಗೋದನ್ನು ಬಿಟ್ಟು ಬಿಡಿ. ನೀವು ಪ್ಲಾನ್ ಮಾಡಿದ್ರೆ ಎಷ್ಟೊಂದು ಕೆಲಸ ಇದೆ ಗೊತ್ತಾ? ಈ 21 ದಿನಗಳ ಕ್ವಾರಂಟೈನ್ ನಿರ್ಬಂಧಗಳನ್ನು ಪಾಸಿಟಿವ್ ಆಗಿ ಸ್ವೀಕರಿಸಿ. 21 ದಿನಗಳ ನಂತರ ನೀವು ಮನೆಯಿಂದ ಹೊರಗೆ ಬಂದಾಗ,ನಿಮ್ಮಸ್ನೇಹಿತರು ‘ಅರೆ... ಇವನು ಗ್ರೇಟ್ ಕಣಯ್ಯ..! ಇಂಥದ್ದೊಂದು ಹೊಸತನ್ನು ಕಲಿತುಕೊಂಡಿದ್ದಾನೆ!’ ಅಂದುಕೊಳ್ಳಬೇಕು. ಹಾಗೆ ಮಾಡಿ. 21 ದಿನಗಳ ಬಳಿಕ ಹೊರಗೆ ಬಂದಾಗ,ನಿಮ್ಮ2.0ಹೊಸವರ್ಷನ್ಹೊರಬರಲಿ!

ನಿಜ, ಎಲ್ಲರೂ ‘ಮನೆಯೇ ಮಂತ್ರಾಲಯ’ ಅಂತ ಮನೆಯೊಳಗೇ ಕುಳಿತಿದ್ದೀರಿ. ಇಷ್ಟು ದಿನ ನಿಮಗೆ ಪುರುಸೊತ್ತೇ ಇರಲಿಲ್ಲ. ಬೆಳಿಗ್ಗೆ ಕೆಲಸಕ್ಕೆ ಹೊರಡೋದು, ದಿನವಿಡೀ ಹೊರಗೆ, ಒಳಗೆ ಸುತ್ತಾಡೋದು, ರಾತ್ರಿಯಾದರೆ ಮನೆಗೆ ಬಂದು ಉಸ್ಸಪ್ಪಾ ಅನ್ನೋದು. ನೀವು ಆಟೊ ಡ್ರೈವರ್, ಟೀಚರ್, ಕ್ಲರ್ಕ್, ಆಫೀಸರ್, ಹೋಟೆಲಿಯರ್, ವ್ಯಾಪಾರಿ ಏನಾದರೂ ಆಗಿರಬಹುದು. ಈವರೆಗೆ ನೀವು ಮಾಡುತ್ತಿದ್ದ ಕೆಲಸ, ಇಡೀ ದಿನನಿಮ್ಮ8ರಿಂದ 10 ಗಂಟೆ ನುಂಗಿಬಿಡೋದು. ಈಗ ನೋಡಿ, ದಿಢೀರ್ ಅಂತ..ನಿಮ್ಮಕೈಯಲ್ಲಿ 8ರಿಂದ 10 ಗಂಟೆಗಳ ಅವಧಿ ಎಕ್ಸ್‌ಟ್ರಾ ಸಿಕ್ಕಿದೆ! ಈ ತರಹ ಅವಕಾಶ ಜೀವನದಲ್ಲಿ ಯಾವತ್ತೂ ಬಂದಿರಲ್ಲ, ಇನ್ನು ಮುಂದೆ ಬರಲಿಕ್ಕೂ ಇಲ್ಲ. ಈ ಅವಧಿಯನ್ನು ಸದುಪಯೋಗ ಪಡಿಸಿಕೊಳ್ಳಿ. ದಿನಕ್ಕೆ 10 ಗಂಟೆ ಅಂತ ಲೆಕ್ಕ ಹಿಡಿದರೆ 210 ಗಂಟೆಗಳ ಅವಧಿ ನಿಮಗೆ ಮುಫತ್ತಾಗಿ ಸಿಕ್ಕಿದೆ! ಇದು ಎಕ್ಸ್‌ಟ್ರಾ ಲೈಫ್!

1ಕುಟುಂಬದೊಳಗೆ ಇರುವ ಸಂಬಂಧಗಳನ್ನು ಬಲಪಡಿಸಿ.

ಅಪ್ಪ, ಅಮ್ಮ, ಮಡದಿ, ತಮ್ಮ, ತಂಗಿ, ಮಕ್ಕಳು ಎಲ್ಲರ ಜೊತೆಗಿನ ಸಂಬಂಧಗಳನ್ನು ಬಲಪಡಿಸಲು/ ಸುಧಾರಿಸಲು ಇದು ಸದವಕಾಶ. ಕುಟುಂಬ ಎಂದ ಮೇಲೆ ಸಣ್ಣಪುಟ್ಟ ಜಗಳ, ವಿರಸ, ತಪ್ಪುತಿಳಿವಳಿಕೆ ಎಲ್ಲವೂ ಸಹಜ. ಅದರ ಕಡೆಗೆ ಗಮನ ಹರಿಸಲು ನಿಮಗೆ ಸಮಯವೇ ಸಿಕ್ಕಿಲ್ಲ. ಈಗ ಅವರ ಜೊತೆಗೆ ಮಾತನಾಡಿ. ಸಮಾಧಾನದಿಂದ ಕಷ್ಟ ಸುಖ ಹಂಚಿಕೊಳ್ಳಿ. ಇದು ಅದ್ಭುತ ಸಮಯ.

2ಮನೆಕೆಲಸದಲ್ಲಿ ನೀವೂ ತೊಡಗಿಕೊಳ್ಳಿ

ಜೀವನಪೂರ್ತಿನಿಮ್ಮಪತ್ನಿಯ ಜೊತೆಗೆ ಇರ್ತೀರಿ ನಿಜ. ಆದರೆನಿಮ್ಮಹೊರಗಿನ ಕೆಲಸ ಕಾರ್ಯಗಳ ಒತ್ತಡದಿಂದ ನಿಜಕ್ಕೂ ಅವರ ಜೊತೆಗೆ ನೀವು ಇದ್ದ ಸಮಯವೆಷ್ಟು? ಈಗ ಒಂದು ಅವಕಾಶ ಸಿಕ್ಕಿದೆ. ಅವರ ಕೆಲಸದಲ್ಲಿ ಸಹಾಯ ಮಾಡಿ. ಸಣ್ಣ ಪುಟ್ಟದಾದರೂ ಪರವಾಗಿಲ್ಲ, ಅವರ ಕೆಲಸವನ್ನು ಹಂಚಿಕೊಳ್ಳಿ.

3ಹೊಸದನ್ನು ಕಲಿಯಿರಿ

ಕೆಲಸದ ಒತ್ತಡದಲ್ಲಿ ನೀವೇ ಮಾಡಬಹುದಾದ, ಮಾಡಲು ಆಸೆಪಟ್ಟ ಹಲವು ವಿಷಯಗಳಿವೆ. ಮನೇಲೇ ಕುಳಿತು ಮಾಡಬಹುದಾದ ವಿಷಯಗಳು. ಯಾವುದೋ ಒಂದು ಪುಸ್ತಕ ಓದಲು ಟೈಮೇ ಸಿಕ್ಕಿಲ್ಲ. ಹಾಡು ಕಲೀಬೇಕು ಅನ್ಸಿರುತ್ತೆ, ಟೈಮೇ ಸಿಕ್ಕಿಲ್ಲ. ಪೇಂಟಿಂಗ್ ಮಾಡಬೇಕಿತ್ತು. ಯೂಟ್ಯೂಬ್‍ನಲ್ಲಿ ಹೋಗಿ ಏನನ್ನೆಲ್ಲ ಕಲಿಯಬಹುದು ನೋಡಿ!ನಿಮ್ಮಹಿಡನ್ ಡ್ರೀಮ್ಸ್‌ಗಳನ್ನು, ಒಳಗಿರುವ ಪ್ರತಿಭೆಯನ್ನು ಶೋಧಿಸಿ. ಹೊಸದನ್ನು ಕಲಿಯಿರಿ. ಇದು ಸಕಾಲ!

4 ಸ್ವಯಂವಿಮರ್ಶೆ ಮಾಡಿಕೊಳ್ಳಿ

ನಿಮ್ಮಬಗ್ಗೆ ನೀವೇ ಆಲೋಚಿಸಿ.ನಿಮ್ಮಒಳ್ಳೆಯ, ಕೆಟ್ಟ ಗುಣಗಳು ಯಾವುದು ಪಟ್ಟಿ ಮಾಡಿ. ಸೆಲ್ಫ್ ಅನಾಲಿಸಿಸ್ ಮಾಡೋದಕ್ಕೆ ಇದು ಅದ್ಭುತ ಸಮಯ. ನಾನು ಇಲ್ಲಿಯವರೆಗೆ ಜೀವನದಲ್ಲಿ ಏನು ಮಾಡ್ದೆ..? ಇಲ್ಲಿಗೆ ಬಂದು ನಿಂತಿದೆ ಜೀವನ, ಇನ್ನು ಏನೇನು ಮಾಡಬಹುದು... ಯೋಚಿಸಿ.ನಿಮ್ಮತಲೆಯೊಳಗೇ ಉತ್ತರ ಇದೆ. ಏನೇನು ಮಾಡಿದರೆ ನನ್ನ ಜೀವನ ಇನ್ನಷ್ಟು ಉತ್ತಮವಾಗುತ್ತದೆ?ನಿಮ್ಮವ್ಯಕ್ತಿತ್ವವನ್ನು ಸಬಲಗೊಳಿಸಲು ಇದು ಅದ್ಭುತ ಸಮಯ.

21 ದಿನಗಳ ಬಳಿಕ ಮನೆಯಿಂದ ಹೊರಬರುವ ವ್ಯಕ್ತಿನಿಮ್ಮಅಪ್‍ಡೇಟೆಡ್2.0ವರ್ಷನ್ಆಗಿರಲಿ. ಹಾಂ.. ಸರ್ಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ. ಅಗತ್ಯವಸ್ತುಗಳಿಗಾಗಿ ಶಾಪಿಂಗ್ ಹೋದರೆ ಆರು ಅಡಿ ಅಂತರ ಕಾಯ್ದುಕೊಳ್ಳಿ. ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಿ. ಮನೆಗೆ ಬಂದಾಗ ಕನಿಷ್ಟ 20 ಸೆಕೆಂಡುಗಳ ಕಾಲ ಕೈಗಳನ್ನು ಸೋಪು ಹಾಕಿ ಚೆನ್ನಾಗಿ ತೊಳೆದುಕೊಳ್ಳಿ. ಕೊರೊನಾ ವಿರುದ್ಧ ದೇಶದ ಹೋರಾಟದಲ್ಲಿ ಕೈಜೋಡಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT