ಬುಧವಾರ, ಮೇ 18, 2022
28 °C

ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಶುರುವಾಗಲಿದೆ 'ರಮ್ಯಾ' ಚೈತ್ರ ಕಾಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿನಿಮಾ ರಂಗದಲ್ಲಿರುವವರೆಗೂ ನಂ.1 ನಟಿ ಎಂದೇ ಗುರುತಿಸಿಕೊಂಡಿದ್ದ ಮೋಹಕ ತಾರೆ ರಮ್ಯಾ ಈಗ ಮತ್ತೆ ಸ್ಯಾಂಡಲ್‌ವುಡ್‌ನಲ್ಲಿ ಮೋಡಿ ಮಾಡಲು ಸಿದ್ಧರಾಗಿದ್ದಾರೆ.

ಇದೇನಪ್ಪ ರಮ್ಯಾ ರಾಜಕೀಯ ಬಿಟ್ಟು ಮತ್ತೆ ಸಿನಿಮಾ ಮಾಡಿದ್ರಾ ಅಂತ ಯೋಚಿಸ್ತಿದ್ದೀರಾ? ಇಲ್ಲ, 2014ರಲ್ಲಿ ಚಿತ್ರೀಕರಣ ಪೂರ್ಣಗೊಂಡಿದ್ದ ರಮ್ಯಾ ಹಾಗೂ ಪ್ರಜ್ವಲ್‌ ದೇವರಾಜ್‌ ಅಭಿನಯದ ‘ದಿಲ್‌ ಕಾ ರಾಜ’ ಸಿನಿಮಾದ ಹಾಡಿನ ಸಾಹಿತ್ಯದ ವಿಡಿಯೊ ಪ್ರೋಮೊ ನಾಳೆ ಬಿಡುಗಡೆಯಾಗಲಿದೆ. ಆದರೆ, ಸಿನಿಮಾ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಇನ್ನೂ ತಿಳಿಸಿಲ್ಲ. ಬೆಳ್ಳಿ ಪರದೆಯ ಮೇಲೆ ಮೋಹಕ ತಾರೆಯನ್ನು ಕಣ್ತುಂಬಿಕೊಳ್ಳವುದಕ್ಕಂತು ಅವರ ಅಭಿಮಾನಿಗಳು ಕಾತರರಾಗಿದ್ದಾರೆ.

 

ಕೆಲ ದಿನಗಳ ಹಿಂದಷ್ಟೇ ಈ ಸಿನಿಮಾದ ಟೀಸರ್ ರಿಲೀಸ್ ಆಗಿತ್ತು. ಸೋಮನಾಥ್ ಪಿ ಪಾಟೀಲ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಟೀಸರಿನಲ್ಲಿ ಯಾವುದೇ ಡೈಲಾಗ್ ಇಲ್ಲ, ಕಥೆ ಏನೆಂಬುದರ ಸುಳಿವೂ ಕೂಡ ಇಲ್ಲ. ಆದರೆ ನಾಯಕ-ನಾಯಕಿ ನಡುವಿನ ಲವ್‍ಸ್ಟೋರಿ ಮತ್ತು ಕೊಂಚ ಆ್ಯಕ್ಷನ್ ಝುಲಕ್ ಮಾತ್ರ ಇದೆ.

2014ರಲ್ಲಿಯೇ ರಮ್ಯಾ ತಮ್ಮ ಸಿನಿಮಾ ಜೀವನಕ್ಕೆ ಫುಲ್‌ಸ್ಟಾಪ್‌ ಇಟ್ಟು ರಾಜಕೀಯ ಪೋಷಾಕು ತೊಟ್ಟರು. 2014ರಲ್ಲಿ ರಮ್ಯಾ ಅವರ ಎರಡು ಸಿನಿಮಾಗಳು ತೆರೆಕಂಡಿದ್ದವು. ದುನಿಯಾ ವಿಜಯ್‌ ಅಭಿನಯದ ಜಾನಿ, ಶಿವರಾಜ್‌ಕುಮಾರ್‌ ಅವರ ಆರ್ಯನ್‌ನಲ್ಲಿ ರಮ್ಯಾ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದರು. ಅದೇ ಸಮಯದಲ್ಲಿ ‘ದಿಲ್‌ ಕಾ ರಾಜ’ ಸಿನಿಮಾದ ಚಿತ್ರೀಕರಣವನ್ನು ರಮ್ಯಾ ಪೂರ್ಣಗೊಳಿಸಿದ್ದರು. ಆಗ ಚಿತ್ರರಂಗದಿಂದ ದೂರ ಸರಿಯುವ ಸೂಚನೆಯನ್ನು ರಮ್ಯಾ ನೀಡಿದ್ದರು.  

2003ರಲ್ಲಿ ಪುನೀತ್ ರಾಜ್‌ಕುಮಾರ್ ನಟನೆಯ 'ಅಭಿ' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ದಿವ್ಯ ಸ್ಪಂದನಾ ಒಂದರ ಮೇಲೊಂದು ಒಂದರಂತೆ ಹಿಟ್ ಚಿತ್ರ ನೀಡಿ ನಂ.1 ಸ್ಥಾನವನ್ನು ಕಾಯ್ದುಕೊಂಡಿದ್ದರು. ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂದೇ ಹೇಳಲಾಗಿತ್ತು. 

ರಮ್ಯಾ ಚಿತ್ರರಂಗದಿಂದ ದೂರವಾದ ನಂತರ 2016ರಲ್ಲಿ ನಾಗರಹಾವು ಸಿನಿಮಾ ತೆರೆ ಕಂಡಿತ್ತು. ಅದೂ ಬಹಳ ಹಿಂದೆ ಚಿತ್ರೀಕರಣಗೊಂಡಿದ್ದ ಸಿನಿಮಾವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು