ಭಾನುವಾರ, ನವೆಂಬರ್ 17, 2019
28 °C

ರಣಭೂಮಿ ಕಥನ

Published:
Updated:

ಮಾನಸಿ ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ ‘ರಣಭೂಮಿ’ ಸಿನಿಮಾ ನವೆಂಬರ್‌ನಲ್ಲಿ ತೆರೆಗೆ ಬರಲು ಸಿದ್ಧವಾಗಿದೆ.  ‘ಹುಟ್ಟು ಅನಿವಾರ್ಯ ಆದ್ರೆ ಸಾವು ಚರಿತ್ರೆ ಆಗಬೇಕು’ ಎಂಬ ಅಡಿಬರಹ ಈ ಚಿತ್ರಕ್ಕಿದೆ. 

ಚಿರಂಜೀವಿ ದೀಪಕ್ ನಿರ್ದೇಶನದ ಜೊತೆಗೆ ಬಂಡವಾಳ ಕೂಡ ಹೂಡಿದ್ದಾರೆ. ಈ ಹಿಂದೆ ಅವರು ‘ಜೋಕಾಲಿ’ ಚಿತ್ರ ನಿರ್ದೇಶಿಸಿದ್ದರು. ಮಂಜುನಾಥ್ ಪ್ರಭು ಮತ್ತು ಹೇಮಂತ್ ದೇಶಹಳ್ಳಿ ಸಹ ನಿರ್ಮಾಪಕರಾಗಿದ್ದಾರೆ. ಇದೊಂದು ಕ್ರೈಮ್‌, ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಸಾಹಸಮಯ ಚಿತ್ರ. ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಪ್ರದೀಪ್ ವರ್ಮಾ ಸಂಗೀತ ಸಂಯೋಜಿಸಿದ್ದಾರೆ. ವಿಜಯ್‌ ಭರಮಸಾಗರ ಸಾಹಿತ್ಯ ರಚಿಸಿದ್ದಾರೆ. ಛಾಯಾಗ್ರಹಣ ನಾಗಾರ್ಜುನ್ ಅವರದು. ‘ಕರ್ವ’ ವೆಂಕಿ ಅವರ ಸಂಕಲನವಿದೆ. ನಿರಂಜನ್ ಒಡೆಯರ್, ಕಾರುಣ್ಯ ರಾಮ್, ಶೀತಲ್ ಶೆಟ್ಟಿ, ಆರ್. ಭಟ್, ರಥಾವರ ಲೋಕಿ, ಡ್ಯಾನಿ ಕುಟ್ಟಪ್ಪ ಇದ್ದಾರೆ.
ಇದನ್ನೂ ಓದಿ: ಕಿರಗೂರಿನ ಸುಂದರಿಯರು!

ಪ್ರತಿಕ್ರಿಯಿಸಿ (+)