ಶನಿವಾರ, ಜನವರಿ 16, 2021
24 °C

ರಾನಾ ಅಭಿನಯದ ‘ಹಾಥಿ ಮೇರೆ ಸಾಥಿ’ ಮಾರ್ಚ್ 26ಕ್ಕೆ ಥಿಯೇಟರ್‌ನಲ್ಲಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾನಾ ದಗ್ಗುಬಾಟಿ ಅಭಿನಯದ ಬಹುನಿರೀಕ್ಷಿತ ‘ಹಾಥಿ ಮೇರೆ ಸಾಥಿ’ ಸಿನಿಮಾ ಮಾರ್ಚ್‌ 26ಕ್ಕೆ ವಿಶ್ವದಾದ್ಯಂತ ಥಿಯೇಟರ್‌ನಲ್ಲಿ ತೆರೆ ಕಾಣುತ್ತಿದೆ. ಮೂರು ಭಾಷೆಗಳಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ತೆಲುಗಿನಲ್ಲಿ ಆರಣ್ಯ ಹಾಗೂ ತಮಿಳಿನಲ್ಲಿ ಕಾಡನ್ ಎಂದು ಹೆಸರಿಡಲಾಗಿದೆ. ಚಿತ್ರದ ಬಿಡುಗಡೆ ದಿನಾಂಕವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ ರಾನಾ. ‘ಹೊಸ ವರ್ಷ ಹಾಗೂ ನ್ಯೂ ನಾರ್ಮಲ್‌ಗೆ ಸ್ವಾಗತ. ಹಾಥಿ ಮೇರೆ ಸಾಥಿ, ಅರಣ್ಯ ಹಾಗೂ ಕಾಡನ್‌ ಅನ್ನು ಮಾರ್ಚ್ 26ಕ್ಕೆ ತೆರೆ ಮೇಲೆ ತರಲು ಉತ್ಸುಕರಾಗಿದ್ದೇವೆ. ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ’ ಎಂದು ರಾನಾ ಬರೆದುಕೊಂಡಿದ್ದಾರೆ.

ಕಾಡಿನಲ್ಲಿ ಆನೆಗಳೊಂದಿಗೆ ವಾಸಿಸುವ ಬನ್‌ದೇವ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ ರಾನಾ. ತಮಿಳಿನ ಖ್ಯಾತ ನಿರ್ದೇಶಕ ಪ್ರಭು ಸೋಲೊಮನ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅಸ್ಸಾಂ ಹಾಗೂ ಕಾಜಿರಂಗದಲ್ಲಿ ಆನೆ ಕಾರಿಡಾರ್‌ ಅನ್ನು ಮಾನವರು ಅತಿಕ್ರಮಿಸುವ ನೈಜ ಘಟನೆಗಳಿಂದ ಪ್ರೇರಿತವಾದ ಕಥಾವಸ್ತುವನ್ನು ಹೊಂದಿದೆ ಕಾಡನ್‌. ಈ ಚಿತ್ರದಲ್ಲಿ ವಿಷ್ಣು ವಿಶಾಲ್‌, ಝೋಯಾ ಹುಸೈನ್‌ ಹಾಗೂ ಶ್ರೀಯಾ ಪಿಲ್ಗಾಂಕರ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್‌ನಲ್ಲಿ ವಿಶಾಲ್‌ ಜಾಗದಲ್ಲಿ ಪುಲ್ಕಿತ್ ಸಾಮ್ರಾಟ್ ನಟಿಸುತ್ತಿದ್ದಾರೆ.

2020ರ ಏಪ್ರಿಲ್‌ನಲ್ಲಿ ಸಿನಿಮಾ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿತ್ತು ಚಿತ್ರತಂಡ. ಆದರೆ ಕೊರೊನಾ ಕಾರಣದಿಂದ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಲಾಗಿತ್ತು. ಎರೋಸ್‌ ಇಂಟರ್‌ನ್ಯಾಷನಲ್‌ ಸಂಸ್ಥೆ ಸಿನಿಮಾಕ್ಕೆ ಹಣ ಹೂಡಿಕೆ ಮಾಡಿದೆ. ಎಆರ್‌ ಅಶೋಕ್ ಕುಮಾರ್ ಸಿನಿಮಾಟೊಗ್ರಫಿ ಚಿತ್ರಕ್ಕಿದ್ದು ಶಂತನು ಮೊಯಿತ್ರ ಸಂಗೀತ ನಿರ್ದೇಶನವಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು