ಬುಧವಾರ, ಸೆಪ್ಟೆಂಬರ್ 29, 2021
20 °C

ಬಿರುಸಿನ ಚಿತ್ರೀಕರಣದಲ್ಲಿ ‘ರಣವ್ಯೂಹ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀಶಿರಡಿ ಸಾಯಿ ಮೂವೀಸ್ ಲಾಂಛನದಲ್ಲಿ ಮೂಡಿಬರುತ್ತಿದೆ ‘ರಣವ್ಯೂಹ’. ಈ ಚಿತ್ರದ ಶೇ 75ರಷ್ಟು ಭಾಗ ಚಿತ್ರೀಕರಣ ಈಗಾಗಲೇ ಮುಗಿದಿದೆ. ಚಿಕ್ಕಬಳ್ಳಾಪುರ, ದೇವನಹಳ್ಳಿ, ವಿಜಯಪುರ, ಜಂಗಮಕೋಟೆಯಲ್ಲಿ ಎರಡು ಹಂತಗಳಲ್ಲಿ ಚಿತ್ರೀಕರಣ ನಡೆದಿದೆ ಎಂದಿದೆ ಚಿತ್ರತಂಡ. ವರ್ತೂರಿನ ಸರ್ಕಾರಿ ಕಾಲೇಜು ಮೈದಾನದಲ್ಲಿ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಯಿತು.

ದೇಶದ ಅರ್ಥಿಕ ಪರಿಸ್ಥಿತಿಯನ್ನೇ ಬುಡಮೇಲು ಮಾಡುವ, ಬಹಿರಂಗವಾಗದ ಸಮಾಜ ವಿದ್ರೋಹಕ ಚಟುವಟಿಕೆಗಳ ಸುತ್ತ ಕಥೆ ಇದೆ.

ಎಂ.ಜಿ.ವೇಣುಕುಮಾರ್ ಚಿತ್ರದ ನಿರ್ಮಾಪಕ. ಎಸ್.ಶಂಕರ್ ನಿರ್ದೇಶಕ. ಸಂಗೀತ ಕಾರ್ತಿಕ್‌ ವೆಂಕಟೇಶ್, ಛಾಯಾಗ್ರಹಣ ಕೃಷ್ಣನಾಯ್ಕರ್, ಕತೆ ವಿನಯ್‌ಕುಮಾರ್, ಸಂಕಲನ ನಾಗರಾಜ ಹುಣಸೂರು, ಸಾಹಸ ಮಂಜುನಾಗಪ್ಪ ಅವರದ್ದು. ಮಜಾಭಾರತ ಸೀಸನ್-3ಯಲ್ಲಿ ಜ್ಯೂನಿಯರ್‌ ದರ್ಶನ್‌ ಎಂದೇ ಖ್ಯಾತಿ ಪಡೆದ ಅವಿನಾಶ್ ನಾಯಕ. ಬಹುಭಾಷಾ ತಾರೆ ಬೆಂಗಳೂರಿನ ಯಶ ನಾಯಕಿ. ರಾಜುಮಂಜು, ಸ್ಮಿತಾ, ವಿಸ್ಮಿತ್, ಅಕ್ಷತ್, ಅವಿನ್, ರಾಜಪ್ರತೀಕ್, ಗಣೇಶ್, ಶ್ರೀಕಾಂತ್‌ರೆಡ್ಡಿ, ಆನಂದ್, ಜಿಮ್‌ರವಿ, ಚಿಣ್ಣರಾದ ಯುವರಾಜ್, ಪ್ರಜೋತ್, ಆಕರ್ಷ್, ಚೈತನ್ಯ, ಪೂರ್ವಿಕಾ ತಾರಾಗಣದಲ್ಲಿ ಇದ್ದಾರೆ. 

ಕೊನೆಯ ಹಂತದ ಚಿತ್ರೀಕರಣ ಮಂಗಳೂರು, ಬೆಂಗಳೂರಿನಲ್ಲಿ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು