ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿವುಡ್ ನಟ ರಣಬೀರ್ ಕಪೂರ್ ಅವರಿಗೆ ಕೋವಿಡ್ ಪಾಸಿಟಿವ್

Last Updated 9 ಮಾರ್ಚ್ 2021, 8:48 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್ ನಟ ರಣಬೀರ್ ಕಪೂರ್ ಅವರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಹೀಗಾಗಿ, ಅವರು ಕ್ವಾರಂಟೈನ್ ಅಗಿದ್ದಾರೆ ಎಂದು ಅವರ ತಾಯಿ ನೀತು ಕಪೂರ್ ಮಂಗಳವಾರ ಹೇಳಿದ್ದಾರೆ.

ಸದ್ಯ, ರಣಬೀರ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಇನ್‌ಸ್ಟಾಗ್ರಾಮ್‌ ಪೋಸ್ಟ್ ಮೂಲಕ ಹಿರಿಯ ನಟಿ ಮಾಹಿತಿ ನೀಡಿದ್ದಾರೆ.

"ನಿಮ್ಮ ಕಾಳಜಿ ಮತ್ತು ಆರೈಕೆಗೆ ಧನ್ಯವಾದ. ಕೋವಿಡ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ರಣಬೀರ್ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಬೇರೆಯವರಿಗೆ ಸೋಂಕು ಹರಡದಂತೆ ಮನೆಯಲ್ಲೇ ಕ್ವಾರಂಟೈನ್ ಆಗಿ ರಣಬೀರ್ ಎಚ್ಚರಿಕೆ ವಹಿಸಿದ್ದಾರೆ ಎಂದು ನೀತು ಕಪೂರ್ ಹೇಳಿದ್ದಾರೆ.

38 ವರ್ಷದ ರಣಬೀರ್ ಕಳೆದ ತಿಂಗಳು ತಮ್ಮ ಮುಂಬರುವ "ಬ್ರಹ್ಮಾಸ್ತ್ರ" ಚಿತ್ರಕ್ಕಾಗಿ ಸಹ ನಟಿ ಆಲಿಯಾ ಭಟ್ ಜೊತೆ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

62 ವರ್ಷದ ನೀತು ಅವರಿಗೆ ಕಳೆದ ವರ್ಷ ಚಂಡೀಗಡದಲ್ಲಿ ನಡೆದ "ಜಗ್ ಜಗ್ ಜೀಯೋ" ಚಿತ್ರದ ಚಿತ್ರೀಕರಣದ ಸಮಯದಲ್ಲಿ ಕೋವಿಡ್ ಪಾಸಿಟಿವ್ ಕಂಡು ಬಂದಿತ್ತು.

ಮುಂಬೈನಲ್ಲಿ ಸೋಮವಾರವೂ ಕೋವಿಡ್ ಸೋಂಕಿತರ ಸಂಖ್ಯೆ 1,000 ಕ್ಕಿಂತ ಹೆಚ್ಚಾಗಿದೆ. ಹೀಗಾಗಿ, ಒಟ್ಟು ಸೋಂಕಿತರ ಸಂಖ್ಯೆ 3,34,572ಕ್ಕೆ ತಲುಪಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT