ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪಿಲ್ ಪಾತ್ರದಲ್ಲಿ ರಣವೀರ್

ranveer as kapil dev
Last Updated 28 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ಭಾರತಕ್ಕೆ ಕ್ರಿಕೆಟ್‌ನಲ್ಲಿ ಮೊದಲ ವಿಶ್ವಕಪ್ ತಂದುಕೊಟ್ಟ ನಾಯಕ ಕಪಿಲ್‌ದೇವ್‌ ಅವರ ಪಾತ್ರದಲ್ಲಿ ರಣವೀರ್ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ. ಮದುವೆಯ ನಂತರ ರಣವೀರ್ ಅಭಿನಯಿಸುತ್ತಿರುವ ಮೊದಲ ಚಿತ್ರವಿದು. ಕ್ರೀಡಾಪಟುವಾಗಿಯೂ ಇದೇ ಮೊದಲ ಬಾರಿಗೆ ಅವರು ನಟಿಸುತ್ತಿರುವ ಕಾರಣ ಈಗಾಗಲೇ ಸಿದ್ಧತೆಯಲ್ಲಿ ತೊಡಗಿದ್ದಾರೆ.‌

ಕಬೀರ್ ಖಾನ್ ನಿರ್ದೇಶಿಸಲಿರುವ ಈ ಚಿತ್ರಕ್ಕೆ ‘83’ ಎನ್ನುವ ಹೆಸರಿಟ್ಟಿದ್ದು, ಭಾರತ ಮೊದಲ ಬಾರಿಗೆ ವಿಶ್ವಕಪ್ ಗೆದ್ದ ಕತೆಯನ್ನು ನಿರೂಪಿಸಲಿದೆ. ‌‌

‘ಲಿವಿಂಗ್ ಲೆಜೆಂಡ್ ಕಪಿಲ್‌ದೇವ್ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲು ನಾನಂತೂ ಉತ್ಸುಕನಾಗಿದ್ದೇನೆ. ಇದಕ್ಕಾಗಿ ತಯಾರಿ ಆರಂಭಿಸಿದ್ದೇನೆ. ಕಪಿಲ್ ಅವರನ್ನು ಭೇಟಿಯಾಗಿ ಅಂದಿನ ವಿಶ್ವಕಪ್ ದಿನಗಳನ್ನು ಮೆಲುಕು ಹಾಕಿದ್ದೇನೆ. ಅವರ ಮಾರ್ಗದರ್ಶನದಲ್ಲಿಯೇ ಕ್ರಿಕೆಟ್ ಕುರಿತು ತರಬೇತಿ ಪಡೆಯುತ್ತಿದ್ದೇನೆ. ನನ್ನ ಮೇಲೆ ನಿಜಕ್ಕೂ ದೊಡ್ಡ ಜವಾಬ್ದಾರಿ ಇದೆ’ ಎಂದು ರಣವೀರ್ ಹೇಳಿದ್ದಾರೆ.

‘ಕಪಿಲ್ ತಮ್ಮದೇ ಅನನ್ಯ ಶೈಲಿಗೆ ಹೆಸರಾಗಿರುವವರು. ಅವರು ಚೆಂಡು ಎಸೆಯುತ್ತಿದ್ದ ಪರಿಯಂತೂ ಮನಮೋಹಕ. ಅದನ್ನು ಅನುಸುರಿಸುವುದು ಕಷ್ಟಕರ. ಆದರೂ ಪ್ರಯತ್ನಿಸುತ್ತಿದ್ದೇನೆ’ ಎಂದೂ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಸಾರಾ ಅಲಿ ಖಾನ್ ಜತೆ ನಟಿಸಿರುವ ‘ಸಿಂಬಾ‘ ಚಿತ್ರದಲ್ಲಿ ರಣವೀರ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರ ಇದೇ 28ರಂದು ತೆರೆ ಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT