ರಣವೀರ್‌ ವಿಡಿಯೊದಲ್ಲಿ ಏನಿದೆ ಗೊತ್ತಾ?

7

ರಣವೀರ್‌ ವಿಡಿಯೊದಲ್ಲಿ ಏನಿದೆ ಗೊತ್ತಾ?

Published:
Updated:
Deccan Herald

‘ಬೇರೆ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯವನ್ನು ನಾವು ಸಹಿಸಿಕೊಂಡರೆ ನಾಳೆ ನಮ್ಮ ಮನೆಯ ಹೆಣ್ಣುಮಕ್ಕಳ ಸರದಿ ಬಂದೀತು’ ಎಂಬ ಹೇಳಿಕೆ ಪರದೆಯ ಮೇಲೆ ಅರೆಕ್ಷಣ ನಿಲ್ಲುತ್ತದೆ. ಆದರೆ ಮನಸ್ಸಿನ ಮೇಲೆ ದೊಡ್ಡ ಪರಿಣಾಮವನ್ನೇ ಬೀರುತ್ತದೆ.

ಯಾವುದೋ ಹೆಣ್ಣು ಮಗಳ ಜೊತೆ ಅಮಾನವೀಯವಾಗಿ ನಡೆದುಕೊಂಡ ಯುವಕನ ಬೆನ್ನುಮೂಳೆ ಮುರಿಯುವಂತೆ ಆ ಪೊಲೀಸ್‌ ಅಧಿಕಾರಿ ದೊಣ್ಣೆಯಲ್ಲಿ ಹೊಡೆಯುತ್ತಾನೆ. ‘ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಎಸಗಿದವರನ್ನು ಹೀಗೇ ಶಿಕ್ಷಿಸಲಾಗುವುದು’ ಎಂಬ ಎರಡನೇ ಹೇಳಿಕೆ ಪರದೆಯಲ್ಲಿ ಮೂಡುತ್ತದೆ.

ಮಧ್ಯೆ ಮಧ್ಯೆ ‘ಸಂಗ್ರಾಮ್‌ ಭಾಳೇರಾವ್‌’ ಎಂಬ ಹೆಸರಿನ ಬಿಲ್ಲೆ ಹೊಳೆಯುತ್ತದೆ. ನಿಮ್ಮ ಊಹೆ ನಿಜ. ‘ಸಿಂಬಾ’ ಸಿನಿಮಾದ ಚಿತ್ರೀಕರಣದ ವಿಡಿಯೊ ತುಣುಕುಗಳಿವು. ಖಡಕ್‌ ಪೊಲೀಸ್‌ ಅಧಿಕಾರಿಯಾಗಿ ನಟಿಸುತ್ತಿರುವ ರಣವೀರ್‌ ಸಿಂಗ್‌ ಅಭಿನಯದ ಇಂತಹ ವಿಡಿಯೊ ತುಣುಕುಗಳನ್ನು ಆಗಾಗ ಅಪ್‌ಲೋಡ್‌ ಮಾಡುತ್ತಾ ಇರುತ್ತಾರೆ. ಈ ಮೂಲಕ ‘ಸಿಂಬಾ’ ಚರ್ಚೆಯಲ್ಲಿರುವಂತೆ ಮಾಡುವ ಜಾಣ್ಮೆ ಅವರದು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !