ಮಂಗಳವಾರ, ನವೆಂಬರ್ 19, 2019
29 °C

ಅತಿಥಿ ಪಾತ್ರದಲ್ಲಿ ರಣವೀರ್‌

Published:
Updated:
Prajavani

ಸಂಜಯ್ ಲೀಲಾ ಬನ್ಸಾಲಿಯ ಮೂರು ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿರುವ ನಟ ರಣವೀರ್ ಸಿಂಗ್‌ ಈಗ ಮತ್ತೊಂದು ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಆಲಿಯಾ ಭಟ್ ಅಭಿನಯದ ಹೆಸರಿಡದ ಸಿನಿಮಾದಲ್ಲಿ ರಣವೀರ್‌ ಅತಿಥಿ ಪಾತ್ರ ಮಾಡಲಿದ್ದಾರೆ ಎಂದು ಸಿನಿ ತಂಡ ಘೋಷಿಸಿದೆ. ‘ಗಲ್ಲಿ ಬಾಯ್‌’ ಸಿನಿಮಾದಲ್ಲಿ ರಣವೀರ್ ಹಾಗೂ ಆಲಿಯಾ ಜೋಡಿ ಮೋಡಿ ಮಾಡಿತ್ತು. ಈಗ ಈ ಜೋಡಿಯನ್ನು ಒಟ್ಟಿಗೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಆದ್ದರಿಂದ ಒಂದೆರಡು ದೃಶ್ಯಗಳಲ್ಲಿ ರಣವೀರ್ ಸಿಂಗ್ ಅಭಿನಯಿಸಲು ಒಪ್ಪಿದ್ದಾರಂತೆ. ಸದ್ಯಕ್ಕೆ ನಾಯಕನ ಆಯ್ಕೆಯಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಸಂಜಯ್‌ ಲೀಲಾ ಬನ್ಸಾಲಿ ತಮ್ಮ ಕನಸಿನ ದೃಶ್ಯಗಳನ್ನು ಚಿತ್ರೀಕರಿಸುವ ಜಾಗಗಳಿಗಾಗಿ ಹುಡುಕಾಟ ನಡೆಸಿದ್ದಾರಂತೆ.

ಆರ್ಯನ್‌ ಮುಖರ್ಜಿ ಅವರ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ರಣಬೀರ್ ಕಪೂರ್ ಜೊತೆಗೆ ಆಲಿಯಾ ಭಟ್ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಪೂರ್ಣಗೊಂಡ ಬಳಿಕ ಬನ್ಸಾಲಿ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ಸದ್ಯಕ್ಕೆ ‘83’ ಸಿನಿಮಾದ ಶೂಟಿಂಗ್‌ನಲ್ಲಿ ರಣವೀರ್ ಸಿಂಗ್ ಕೂಡ ಬ್ಯುಸಿಯಾಗಿದ್ದಾರೆ.

ಪ್ರತಿಕ್ರಿಯಿಸಿ (+)