4

ರಣವೀರ್‌ಗೆ 33!

Published:
Updated:

‘ಪದ್ಮಾವತ್‌’ ಸಿನಿಮಾದ ಅಲ್ಲಾವುದ್ದೀನ್‌ ಖಿಲ್ಜಿ ಪಾತ್ರ ಮತ್ತು ದೀಪಿಕಾ ಪಡುಕೋಣೆ ಜೊತೆಗಿನ ಪ್ರೀತಿ ಪ್ರೇಮ ಪ್ರಣಯ ಮತ್ತು ಪರಿಣಯದ ಸುದ್ದಿಗಳಿಂದ ರಂಜಿಸುತ್ತಿರುವ ಬಾಲಿವುಡ್‌ ನಟ ರಣವೀರ್‌ ಸಿಂಗ್‌ಗೆ ಜುಲೈ ಆರರಂದು ಹುಟ್ಟುಹಬ್ಬದ ಸಂಭ್ರಮ.

2010ರಲ್ಲಿ ಚಿತ್ರರಂಗ ಪ್ರವೇಶಿಸಿದ ರಣವೀರ್‌ ಆರಂಭದಲ್ಲಿ ಹೆಚ್ಚು ಸುದ್ದಿ ಮಾಡದಿದ್ದರೂ ಈಗ ಅತ್ಯಧಿಕ ಸಂಭಾವನೆ ಪಡೆಯುತ್ತಿರುವ ಬಾಲಿವುಡ್‌ ನಟರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ.

2013ರಲ್ಲಿ ನಟಿಸಿದ ‘ಲುಟೇರಾ’ದ ಮೂಲಕ ಬಿ ಟೌನ್‌ ತಮ್ಮತ್ತ ತಿರುಗಿನೋಡುವಂತೆ ಮಾಡಿದರು. ಅಲ್ಲಿಂದೀಚೆ ಅವರ ಚಿತ್ರಗಳು ಗೆದ್ದರೂ, ಸೋತರೂ ಅವರ ತಾರಾ ವರ್ಚಸ್ಸು ಮಾತ್ರ ಕುಂದಲಿಲ್ಲ. ವಿಲಾಸಿ ಚಿತ್ರಗಳ ಸರದಾರ ಸಂಜಯ್ ಲೀಲಾ ಬನ್ಸಾಲಿ ಅವರ ಚಿತ್ರಗಳ ಕಾಯಂ ನಾಯಕ ಎಂದೇ ರಣವೀರ್‌ನನ್ನು ಗುರುತಿಸಲಾಗುತ್ತದೆ. ‘ಗೋಲಿಯೋಂ ಕಾ ರಾಸಲೀಲಾ ರಾಮ್‌ಲೀಲಾ’, ಬಾಜಿರಾವ್‌ ಮಸ್ತಾನಿ, ಪದ್ಮಾವತ್‌ ಸಂಜಯ್‌ಲೀಲಾ ಬನ್ಸಾಲಿ ಮತ್ತು ದೀಪಿಕಾ ಜೊತೆಗೂಡಿ ಮಾಡಿದರು. (2013), ‘ಗುಂಡೇ’ (2014, ‘ದಿಲ್‌ ಧಡಕನೆ ದೋ’ ಮತ್ತು ‘ಬೇಫಿಕ್ರೆ’ (2016) ಚಿತ್ರಗಳು ರಣವೀರ್‌ ಸಿಂಗ್‌ನನ್ನು ಮುಂಚೂಣಿಗೆ ತಂದು ನಿಲ್ಲಿಸಿದವು. 

ಚಿತ್ರಗಳಿಗಿಂತಲೂ ರಣವೀರ್‌ ಮಾಧ್ಯಮಗಳ ಮುದ್ದಿನಕೂಸು ಆಗಲು ಕಾರಣ ದೀಪಿಕಾ ಜೊತೆಗಿನ ಸಂಬಂಧ. ತಮ್ಮ ಬಗೆಗಿನ ರಂಗುರಂಗಿನ ಸುದ್ದಿಗಳನ್ನೂ, ಫೋಟೊಗಳನ್ನೂ ಎಗ್ಗಿಲ್ಲದೆ ಹಂಚಿಕೊಳ್ಳುವ ಈ ಜೋಡಿ, ಇಷ್ಟರಲ್ಲೇ ಇಟಲಿಯಲ್ಲಿ ಮದುವೆಯಾಗುತ್ತಾರೆ ಎನ್ನಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !