ರಣವೀರ್ ಸಿಂಗ್ ನಟನೆಯ, ಆಧಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ ಸಿನಿಮಾ ಭರ್ಜರಿ ಯಶಸ್ಸು ಗಳಿಸುತ್ತಿದೆ. ಈ ನಡುವೆ ರಣವೀರ್ ಸಿಂಗ್ ಹಾಗೂ ಪತ್ನಿ ದೀಪಿಕಾ ಪಡುಕೋಣೆ ಇಬ್ಬರೂ ಜೊತೆಯಾಗಿ ಮೀನು ಊಟಕ್ಕೆ ರೆಸ್ಟೋರೆಂಟ್ಗೆ ಭೇಟಿ ನೀಡಿದ್ದಾರೆ.

ವಿಶ್ವದಾದ್ಯಂತ ಬಿಡುಗಡೆಯಾಗಿರುವ ಧುರಂಧರ್–2 ಸಿನಿಮಾ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈವರೆಗೆ ವಿಶ್ವದಾದ್ಯಂತ ₹700 ಕೋಟಿ ಗಳಿಸಿರುವುದಾಗಿ ವರದಿಯಾಗಿದೆ. ರಣವೀರ್ ಸಿಂಗ್ ನಟನೆಯ ಬಗ್ಗೆಯೂ ಪ್ರಶಂಸೆಗಳು ವ್ಯಕ್ತವಾಗುತ್ತಿವೆ.

ದೀಪ್ವೀರ್ ಫ್ಯಾನ್ ಕ್ಲಬ್ ಎಂಬ ಖಾತೆಯಲ್ಲಿ ರಣವೀರ್ ಸಿಂಗ್ ಹಾಗೂ ಅವರ ಪತ್ನಿ ದೀಪಿಕ ಪಡಕೋಣೆ ಮುಂಬೈನ ರೆಸ್ಟೋರೆಂಟ್ಗೆ ಭೇಟಿ ನೀಡಿದ್ದಾರೆ. ಅವರು ಸಮುದ್ರದ ಆಹಾರ ದೊರೆಯುವಂತಹ ರೆಸ್ಟೋರೆಟ್ಗೆ ಹೋಗಿದ್ದಾರೆ. ಸಿನಿಮಾ ಬಿಡುಗಡೆಯಾದಾಗಿನಿಂದ ಈವರೆಗೆ ದೀಪಿಕಾ ಪಡಕೋಣೆ ಸಿನಿಮಾದ ಬಗ್ಗೆಯಾಗಲಿ ಅಥವಾ ಪತಿ ರಣವೀರ್ ಸಿಂಗ್ ಅವರ ಬಗ್ಗೆಯಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದೀಗ ಇಬ್ಬರೂ ಒಟ್ಟಿಗೆ ಊಟಕ್ಕೆ ಹೋಗಿರುವ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ವಿಡಿಯೊದಲ್ಲಿ ಇಬ್ಬರೂ ಊಟವನ್ನು ಸವಿದು ಹೊರಬರುತ್ತಿದ್ದಾರೆ. ಅವರು ಬರುವುದನ್ನೇ ಕಾದು ನಿಂತಿದ್ದ ಅಭಿಮಾನಿಗಳು ರಣವೀರ್ ಅವರನ್ನು ಮಾತನಾಡಿಸಲು ಪ್ರಯತ್ನಿಸಿದ್ದಾರೆ. ಆದರೆ, ರಣವೀರ್ ಯಾವುದೇ ಪ್ರತಿಕ್ರಿಯೆ ನೀಡದೆ ಅಲ್ಲಿಂದ ತೆರಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.