ಆದಿತ್ಯ ಧರ್ ನಿರ್ದೇಶನ, ರಣವೀರ್ ಸಿಂಗ್ ನಟನೆಯ ‘ಧುರಂಧರ್: ದಿ ರಿವೆಂಜ್’ ಸಿನಿಮಾದ ಟ್ರೇಲರ್ ಇಂದು (ಮಾರ್ಚ್ 7) ಬಿಡುಗಡೆಯಾಗಿದೆ. ಟ್ರೇಲರ್ ಬಿಡುಗಡೆ ಬಗ್ಗೆ ನಟ ರಣವೀರ್ ಸಿಂಗ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಮಾರ್ಚ್ 19ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

ಇಂದು 11:01ಕ್ಕೆ ಜಿಯೊ ಸ್ಟುಡಿಯೋಸ್ ಯೂಟ್ಯೂಬ್ ಚಾನಲ್ನಲ್ಲಿ ಟ್ರೇಲರ್ ಬಿಡುಗಡೆಯಾಗಿದ್ದು, ಅದರಲ್ಲಿ ರಣವೀರ್ ಸಿಂಗ್ ಅವರು ರಕ್ತಸಿಕ್ತ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. 3 ನಿಮಿಷ 26 ಸೆಕೆಂಡ್ ಇರುವ ಟ್ರೇಲರ್ ನೋಡಿದ ಪ್ರೇಕ್ಷಕರಿಗೆ ಸಿನಿಮಾದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.
.‘ಧುರಂಧರ್ 2’ ಸಿನಿಮಾ ಟ್ರೇಲರ್ ಬಿಡುಗಡೆಗೆ ಮುಹೂರ್ತ ನಿಗದಿ.3 ಗಂಟೆ 55 ನಿಮಿಷಗಳ ಸುಧೀರ್ಘ ಪ್ರದರ್ಶನ ಕಾಣಲಿದೆ ರಣವೀರ್ ನಟನೆಯ ಧುರಂಧರ್–2.
ಈಗಾಗಲೇ ವಿದೇಶದಲ್ಲಿ ‘ಧುರಂಧರ್ 2’ ಸಿನಿಮಾದ ಬುಕ್ಕಿಂಗ್ ಆರಂಭವಾಗಿದೆ. ಭಾರತದಲ್ಲಿಯೂ ಒಳ್ಳೆಯ ಪ್ರತಿಕ್ರಿಯೆ ಸಿಗುವ ನಿರೀಕ್ಷೆ ಚಿತ್ರತಂಡಕ್ಕಿದೆ. ಈ ಬಾರಿ ‘ಧುರಂಧರ್ 2’ ಕೇವಲ ಹಿಂದಿ ಮಾತ್ರವಲ್ಲದೇ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳ ಭಾಷೆಗಳಲ್ಲಿಯೂ ಏಕಕಾಲಕ್ಕೆ ತೆರೆಕಾಣುತ್ತಿದೆ. ಸಿನಿಮಾ ಬಿಡುಗಡೆಗೂ ಒಂದು ದಿನದ ಮೊದಲೇ ಮಾರ್ಚ್ 18ಕ್ಕೆ ಧುರಂಧರ್ 2 ಪೇಡ್ ಪ್ರಿಮಿಯರ್ ಶೋ ಇರಲಿದೆ. ಈ ಬಗ್ಗೆ ಟ್ರೇಲರ್ ಕೊನೆಯಲ್ಲಿ ತೋರಿಸಲಾಗಿದೆ.

ಧುರಂಧರ್ ಮೊದಲ ಭಾಗವು 2025ರ ಡಿಸೆಂಬರ್ 5ರಂದು ತೆರೆಕಂಡಿತ್ತು. ವಿಶ್ವದಾದ್ಯಂತ ₹1300 ಕೋಟಿಗೂ ಅಧಿಕ ಗಳಿಕೆ ಮಾಡಿರುವ ಈ ಸಿನಿಮಾ ಇತ್ತೀಚೆಗಷ್ಟೇ ನೆಟ್ಪ್ಲಿಕ್ಸ್ನಲ್ಲಿ ಬಿಡುಗಡೆಗೊಂಡಿತ್ತು.

ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್, ಆರ್.ಮಾಧವನ್ ಮತ್ತು ರಾಕೇಶ್ ಬೇಡಿ ನಟಿಸಿರುವ ಈ ಸಿನಿಮಾದ ಮೊದಲ ಭಾಗ ಅಕ್ಷಯ್ ಖನ್ನಾ ಅವರು ನಿಭಾಯಿಸಿದ 'ರೆಹಮಾನ್ ಡಕಾಯತ್' ಪಾತ್ರದ ಸಾವಿನೊಂದಿಗೆ ಕೊನೆಗೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.