ಸಿನಿಮಾ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ರಣವೀರರ್ ಸಿಂಗ್ ನಟನೆಯ ಧುರಂಧರ್: ದಿ ರಿವೆಂಜ್ ಸಿನಿಮಾವು ಇಂದು (ಮಾರ್ಚ್ 19) ಬಿಡುಗಡೆಯಾಗಿದೆ.

ಈ ಸಿನಿಮಾ ವೀಕ್ಷಿಸಿದ ತಾರಾ ನಟ, ನಟಿಯರು ಸಿನಿಮಾದ ಕುರಿತು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲು ಅರ್ಜುನ್, ಪ್ರೀತಿ ಜಿಂಟಾ ಹಾಗೂ ಕಾರ್ತಿಕ್ ಆರ್ಯನ್ ಸಿನಿಮಾ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತೆಲುಗಿನ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಧುರಂಧರ್ ಸಿನಿಮಾವನ್ನು ʼದೇಶಭಕ್ತಿ ಮತ್ತು ಹೆಮ್ಮೆʼಯ ಪ್ರದರ್ಶನ ಎಂದು ಕರೆದಿದ್ದಾರೆ. ʼ ಧುರಂಧರ್ 2 ಚಿತ್ರವು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಕಥೆಯನ್ನು ಬಣ್ಣಿಸುತ್ತಿದೆ. ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವಂತಹ ಚಿತ್ರವಾಗಿದೆ. ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು. ನನ್ನ ಸಹೋದರ ರಣವೀರ್ ಅದ್ಭುತವಾಗಿ ನಟಿಸಿದ್ದಾರೆ.ʼ ಎಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.

ಧುರಂಧರ್ ಸಿನಿಮಾದ ಕುರಿತು ಕಾರ್ತಿಕ್ ಆರ್ಯನ್ ಮಾತನಾಡಿ. ʼಧುರಂಧರ್: ದಿ ರಿವೆಂಜ್ʼ ಅತ್ಯುತ್ತಮ ಸಿನಿಮಾವಾಗಿದೆ. ಆದಿತ್ಯ ಧರ್ ಅವರು ಪ್ರೇಕ್ಷಕರಿಗೆ ಮರೆಯಲಾಗದ ಸಿನಿಮೀಯ ಅನುಭವವನ್ನು ನೀಡಿದ್ದಾರೆ. ರಣವೀರ್ ನಟನೆಯೂ ಉತ್ತಮವಾಗಿದೆ. ಎಲ್ಲರೂ ನೋಡಲೇಬೇಕಾದ ಚಿತ್ರ!ʼ ಎಂದು ಬರೆದಿದ್ದಾರೆ.

ಪ್ರೀತಿ ಜಿಂಟಾ ಕೂಡ ಧುರಂಧರ್ ಸಿನಿಮಾದ ಬಗ್ಗೆ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ʼರಿವೆಂಜ್ ಹೋ ತೋ ಧುರಂಧರ್ ಜೈಸಾ ಹೋ ವಾರ್ನಾ ನ ಹೋ' ನಿರ್ದೇಶನ, ನಟನೆ, ಸಂಗೀತ, ಸಂಕಲನ, ಕಥೆ, ಪಾತ್ರವರ್ಗ ಮತ್ತು ಇತರ ಪ್ರತಿಯೊಂದು ವಿಭಾಗವು ಅಮೋಘವಾಗಿ ಮೂಡಿ ಬಂದಿದೆ. ನನ್ನ ತಾಯಿ ಧುರಂಧರ್ ಸಿನಿಮಾವನ್ನು ಮತ್ತೊಮ್ಮೆ ನೋಡಲು ಬಯಸಿದ್ದಾರೆ . ಇಡೀ ಚಿತ್ರತಂಡ್ಕಕೆ ಜೈಹಿಂದ್ ಹೇಳಲು ಬಯಸುತ್ತೇನೆ.ʼ ಎಂದು ಬರೆದಿದ್ದಾರೆ.

ಅನನ್ಯಾ ಪಾಂಡೆ ಕೂಡ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಧುರಂಧರ್ ಸಿನಿಮಾದ ಕುರಿತು ಪ್ರತಿಕ್ರಿಸಿದ್ದಾರೆ. ʼಅಧಿತ್ಯ ಧರ್ ಅದ್ಭುತ! ರಣವೀರ್ ಸಿಂಗ್ ನಟ ರಾಕ್ಷಸ' ಎಂದು ಬರೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.