ರಣ್ವೀರ್ ಸಿಂಗ್ ನಟನೆಯ ‘ಧುರಂಧರ್–ದಿ ರಿವೇಂಜ್’ ಸಿನಿಮಾ ಮಾರ್ಚ್ 19ರಂದು ತೆರೆಕಾಣುತ್ತಿದ್ದು, ಮಾರ್ಚ್ 18ಕ್ಕೆ ಸಿನಿಮಾದ ಪ್ರೀಮಿಯರ್ ಪ್ರದರ್ಶನ ಆರಂಭವಾಗಲಿವೆ.

ಈ ಸಿನಿಮಾದ ಅವಧಿ 3 ಗಂಟೆ 55 ನಿಮಿಷವಿದ್ದು, ಬೆಂಗಳೂರಿನಲ್ಲೇ ಮಾರ್ಚ್ 18ರಂದು 45ಕ್ಕೂ ಅಧಿಕ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್ಗಳಲ್ಲಿ ಸಂಜೆ 5ರಿಂದಲೇ ಶೋಗಳು ಆರಂಭವಾಗಲಿವೆ. ಕಳೆದ ಶನಿವಾರ (ಮಾರ್ಚ್ 7) ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸೀಕ್ವೆಲ್ ಮೇಲೆ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.

ಸಿನಿಮಾದಲ್ಲಿ ‘ಜಸ್ಕಿರತ್ ಸಿಂಗ್ ರಂಗಿ’ ಹಾಗೂ ‘ಹಮ್ಜ ಅಲಿ ಮಜಾರಿ’ ಎಂಬ ಪಾತ್ರದಲ್ಲಿ ರಣ್ವೀರ್ ಕಾಣಿಸಿಕೊಳ್ಳುತ್ತಿದ್ದು, ಲಿಯಾರಿ ಎನ್ನುವ ನಗರದಲ್ಲಿ ತನ್ನ ಅಧಿಕಾರವನ್ನು ಸ್ಥಾಪಿಸುವಲ್ಲಿಂದ ಕಥೆ ಆರಂಭವಾಗಲಿದೆ. 2025ರಲ್ಲಿ ತೆರೆಕಂಡ ‘ಧುರಂಧರ್’ನ ಮುಂದುವರಿದ ಕಥೆ ಇದಾಗಿದೆ. ಮೊದಲನೇ ಭಾಗ ಬಾಕ್ಸ್ ಆಫೀಸ್ನಲ್ಲಿ ₹1000 ಕೋಟಿಗೂ ಅಧಿಕ ಗಳಿಸಿತ್ತು. ಚಿತ್ರದಲ್ಲಿ ಆರ್.ಮಾಧವನ್, ಅರ್ಜುನ್ ರಾಮ್ಪಾಲ್, ಸಂಜಯ್ ದತ್ ನಟಿಸಿದ್ದಾರೆ. ಸಿನಿಮಾವನ್ನು ಬಿ62 ಸ್ಟುಡಿಯೊಸ್ ನಿರ್ಮಾಣ ಮಾಡಿದ್ದು, ಹಿಂದಿ, ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ತೆರೆಕಾಣುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.