ಆಧಿತ್ಯ ಧರ್ ನಿರ್ದೇಶನದ ರಣವೀರ್ ಸಿಂಗ್ ನಟನೆ ಬಹು ಯಶಸ್ವಿ ಚಿತ್ರ ‘ಧುರಂಧರ್ 2’ ವಿಶ್ವದಾದ್ಯಂತ ಹಲವು ದಾಖಲೆಗಳನ್ನು ಬರೆದಿದೆ. ಇದೀಗ ಈ ಸಿನಿಮಾವು ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗಲು ಸಿದ್ದವಾಗಿದೆ ಎಂದು ವರದಿಯಾಗಿದೆ.

‘ಧುರಂಧರ್ ದಿ ರಿವೆಂಜ್’ ಸಿನಿಮಾದ ಕಥೆ, ಪಾತ್ರಗಳು, ಸ್ಟಂಟ್ ಸೀಕ್ವೆನ್ಸ್ ಹಾಗೂ ಸಂಭಾಷಣೆ ಪ್ರೇಕ್ಷಕರ ಮನ ಗೆದ್ದಿದೆ. ಸಿನಿಮಾವು ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನದ ಬಳಿಕ ಒಟಿಟಿ ವೇದಿಕೆಗೆ ಯಾವಾಗ ಎಂಬ ಕುತೂಹಲ ಮನೆ ಮಾಡಿದೆ. ಜಿಯೋಹಾಟ್ಸ್ಟಾರ್ನಲ್ಲಿ ಸಿನಿಮಾ ಪ್ರಸಾರ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಹೀಗಾಗಿ ಜಿಯೋಹಾಟ್ಸ್ಟಾರ್ನೊಂದಿಗೆ ₹155 ಕೋಟಿಗಳ ಒಪ್ಪಂದ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಈ ಮೂಲಕ ಹಿಂದಿ ಸಿನಿಮಾವೊಂದು ಒಟಿಟಿಗೆ ವೇದಿಕೆಗೆ ಅತೀ ಹೆಚ್ಚು ಬೆಲೆಗೆ ಮಾರಾಟವಾದ ಚಿತ್ರ ಎಂಬ ದಾಖಲೆ ಬರೆಯಲಿದೆ.

ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ಸಾಧ್ಯವಾಗದವರು ಮನೆಯಲ್ಲಿ ಕುಳಿತು ಧುರಂಧರ್ –2 ವೀಕ್ಷಿಸಲು ಉತ್ಸುಕರಾಗಿದ್ದಾರೆ. ಆದರೆ ಸ್ವಲ್ಪ ಸಮಯ ಕಾಯಬೇಕು. ಸದ್ಯ ನಡೆಯುತ್ತಿರುವ ಐಪಿಎಲ್ ಆವೃತಿ ಮುಕ್ತಾಯವಾದ ಬಳಿಕ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಮೇ ಅಂತ್ಯಕ್ಕೆ ಅಥವಾ ಜೂನ್ನಲ್ಲಿ ತೆರೆಕಾಣುವ ಸಾಧ್ಯತೆಗಳಿವೆ.

'ಧುರಂಧರ್ 1' ಮತ್ತು 'ಧುರಂಧರ್ 2' ಚಿತ್ರಗಳ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಅಸಾಧಾರಣ ಪ್ರದರ್ಶನವು ಒಟ್ಟಾರೆಯಾಗಿ ₹3000 ಕೋಟಿ ಗಡಿ ದಾಟಿದೆ ಎಂದು ವರದಿಯಾಗಿದೆ.

ಆದಿತ್ಯ ಧರ್ ನಿರ್ದೇಶನದ 'ಧುರಂಧರ್' ಸರಣಿಯು ಭಾರತೀಯ ಚಿತ್ರರಂಗದ ದಿಕ್ಕನೇ ಬದಲಿಸಿದೆ ಮತ್ತು ಆ್ಯಕ್ಷನ್ ದೃಶ್ಯಗಳ ಗುಣಮಟ್ಟವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ. ದೇಶಭಕ್ತಿ ಮತ್ತು ಕುತೂಹಲಕಾರಿ ಕಥಾಹಂದರವನ್ನು ಹೊಂದಿರುವ ಈ ಚಿತ್ರವು ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿಯೂ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.