ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ ಗೋವಿಂದರ ಪಾದಕ್ಕೆ ಎರಗಿದ ರಣವೀರ್‌: ಭಾವುಕ ಘಟನೆಗೆ ಸಾಕ್ಷಿಯಾದ ರಿಯಾಲಿಟಿ ಶೋ

Last Updated 2 ಜನವರಿ 2022, 6:12 IST
ಅಕ್ಷರ ಗಾತ್ರ

‘83’ ಚಿತ್ರದ ನಾಯಕ ರಣವೀರ್‌ ಸಿಂಗ್‌ ಅವರು ನಟ ಗೋವಿಂದ ಅವರಪಾದಕ್ಕೆ ಎರಗಿನಮಸ್ಕರಿಸಿದ್ದಾರೆ.

ಕಲರ್ಸ್‌ ವಾಹಿನಿಯಲ್ಲಿ ಪ್ರಸಾರವಾಗುವರಿಯಾಲಿಟಿ ಶೋ ‘ಬಿಗ್‌ ಪಿಕ್ಚರ್ಸ್‌’ನಲ್ಲಿ ಈ ಭಾವುಕಘಟನೆ ನಡೆದಿದೆ.

ಕಲರ್ಸ್‌ ವಾಹಿನಿಯು ಈ ವಿಡಿಯೊ ತುಣುಕನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ.

ಈ ರಿಯಾಲಿಟಿ ಶೋನ ಹೋಸ್ಟ್‌ ಆಗಿರುವ ರಣವೀರ್‌ ಸಿಂಗ್‌ ಅವರು ಗೋವಿಂದರನ್ನು ಸ್ಟೇಜ್‌ ಮೇಲೆ ಕರೆಯುತ್ತಾರೆ. ತಮ್ಮ ನೆಚ್ಚಿನ ನಟನಿಗೆ‘ಭಗವಾನ್‌’ ಎಂದು ಹೇಳಿ ಭಾವುಕರಾಗುತ್ತಾರೆ. ಆ ನಂತರ ಅವರ ಎರಡು ಪಾದಗಳಿಗೆ ಎರಗುತ್ತಿರುವ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿವೆ.

ಇಬ್ಬರೂ ಒಟ್ಟಾಗಿ ಇಷ್ಕ್ ಹೈ ಸುಹಾನಾ, ಯುಪಿ ವಾಲಾ ತುಮ್ಕಾ ಹಾಡುಗಳಿಗೆನೃತ್ಯ ಮಾಡಿದ್ದಾರೆ. ಈ ದೃಶ್ಯಗಳು ಅಭಿಮಾನಿಗಳಮೆಚ್ಚುಗೆಗೆ ಪಾತ್ರವಾಗಿದೆ.

ಇತ್ತೀಚೆಗೆ ಬಿಡುಗಡೆಯಾದ '83' ಚಿತ್ರವುಭಾರತ ಕ್ರಿಕೆಟ್‌ ತಂಡವಿಶ್ವಕಪ್‌ ಗೆದ್ದಕತೆಯನ್ನು ಒಳಗೊಂಡಿದೆ. ರಣವೀರ್‌ ಸಿಂಗ್‌ ಅವರು ಕಪಿಲ್‌ ದೇವ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT