ಆದಿತ್ಯ ಧಾರ್ ನಿರ್ದೇಶನದ, ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಸಿನಿಮಾ ಭರ್ಜರಿ ಯಶಸ್ಸು ಗಳಿಸಿದೆ. ಬಿಡುಗಡೆಯಾದ ಕೇವಲ ನಾಲ್ಕು ದಿನಗಳಲ್ಲಿ ₹450 ಕೋಟಿ ಗಳಿಸಿ, ಹಲವು ದಾಖಲೆಗಳನ್ನು ಮುರಿದಿದೆ. ಹಮ್ಜಾ ಮತ್ತು ಸಿಂಗ್ ರಂಗಿ ಎಂಬ ಎರಡು ಪಾತ್ರಗಳಲ್ಲಿ ರಣವೀರ್ ಸಿಂಗ್ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದಾರೆ.
.ತುಂಬಾ ನಿರಾಸೆ ಮೂಡಿಸಿದ ರಣವೀರ್ ಸಿಂಗ್ ನಟನೆಯ ‘ಧುರಂಧರ್2’ : ನಟಿ ರಮ್ಯಾ.ಧುರಂಧರ್–2 ಸಿನಿಮಾವನ್ನು ಮುಕ್ತಕಂಠದಿಂದ ಹೊಗಳಿದ ರಿಷಬ್ ಶೆಟ್ಟಿ.
ಇದೀಗ ನಟ ರಣವೀರ್ ಸಿಂಗ್ ಅವರ ತೆರೆ ಹಿಂದಿನ ಮೇಕಪ್ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಸೆಲೆಬ್ರಿಟಿ ಮೇಕಪ್ ಕಲಾವಿದೆಯಾದ ಪ್ರೀತಿಶೀಲ್ ಸಿಂಗ್ ಅವರು ಇನ್ಸ್ಟಾಗ್ರಾಂನಲ್ಲಿ ರಣವೀರ್ ಅವರಿಗೆ ಮೇಕಪ್ ಮಾಡುತ್ತಿರುವ ತುಣುಕನ್ನು ಹಂಚಿಕೊಂಡಿದ್ದಾರೆ.

ಅದರಲ್ಲಿ ರಣವೀರ್ ಸಿಂಗ್ ಅವರ ಮುಖವನ್ನು ಸಂಪೂರ್ಣವಾಗಿ ಭೂತದ ರೀತಿಯಲ್ಲಿ ಮೇಕಪ್ ಮಾಡಿದ್ದಾರೆ. ಅದನ್ನು ‘ನೆರಳುಗಳಿಂದ ಹುಟ್ಟಿದ ಭೂತ’ ಎಂದು ಅಡಿಬರಹ ಬರೆದುಕೊಂಡಿದ್ದಾರೆ. ಇದೇ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಇದನ್ನು ನೋಡಿದ ಅಭಿಮಾನಿಗಳು ಹಾಗೂ ನೆಟ್ಟಿಗರು ದಂಗಾಗಿದ್ದಾರೆ. ಅಲ್ಲದೇ ನಟನ ತಾಳ್ಮೆ ಹಾಗೂ ತಂಡದ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.