ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಲುಕ್‌ನಲ್ಲಿ ರಣವೀರ್‌ ಸಿಂಗ್‌: ಅಭಿಮಾನಿಗಳಲ್ಲಿ ಮೂಡಿದ ಪ್ರಶ್ನೆ

Last Updated 29 ಅಕ್ಟೋಬರ್ 2019, 6:43 IST
ಅಕ್ಷರ ಗಾತ್ರ

ಪಟ ಪಟ ಮಾತು ಹಾಗೂ ವಿಚಿತ್ರ ಸ್ಟೈಲ್‌ನಿಂದಾಗಿ ಗುರುತಿಸಿಕೊಳ್ಳುವ ಬಾಲಿವುಡ್‌ನ ‘ಸಿಂಬಾ’ ಎಂದೇ ಕರೆಸಿಕೊಳ್ಳುವ ನಟ ರಣವೀರ್‌ ಸಿಂಗ್‌ ಈಗ ಹೊಸ ಅವತಾರದಲ್ಲಿ ಅಭಿಮಾನಗಳ ಎದುರು ಬಂದಿದ್ದಾರೆ.

ತಮ್ಮ ಹೊಸ ಅವತಾರವನ್ನು ರಣವೀರ್‌ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಹೊಸ ಹೈರ್‌ಸ್ಟೈಲ್‌ನಿಂದ ಇನ್ನಷ್ಟು ಯಂಗ್‌ ಆಗಿ ಕಾಣುತ್ತಿರುವುದು ಅವರ ಅಭಿಮಾನಿಗಳಲ್ಲಿ ಖುಷಿ ತಂದಿದೆ.ರಣವೀರ್‌ ಅವರ ಈ ಚಿತ್ರಕ್ಕೆ 6ಸಾವಿರ ಮಂದಿ ಲೈಕ್‌ ಮಾಡಿದ್ದು, 215 ಮಂದಿ ಪ್ರತಿಕ್ರಿಯಿಸಿದ್ದಾರೆ.

‘ವಾವ್‌! ನಿಮ್ಮ ಹೊಸ ಲುಕ್‌ ಇಷ್ಟವಾಯಿತು. ಚಿರ ಯುವಕ! ವಯಸ್ಸಾಗದ ಯಾವುದಾದರು ಪೇಯವನ್ನು ಕುಡಿದಿದ್ದೀರಾ?’ ಎಂದು ಅಭಿಮಾನಿಯೊಬ್ಬರು ಟ್ಟಿಟ್ಟರ್‌ನಲ್ಲಿ ಶ್ಲಾಘಿಸಿದ್ದಾರೆ.

‘ಪದ್ಮಾವತ್‌’ ಸಿನಿಮಾದ ಅಲ್ಲಾವುದ್ದೀನ್‌ ಖಿಲ್ಜಿ ಪಾತ್ರಕ್ಕಾಗಿ ಕಟ್ಟುಮಸ್ತಾಗಿದ್ದ ರಣವೀರ್‌ ಸಿಂಗ್‌, ಗಲ್ಲಿ ಬಾಯ್‌ಗಾಗಿ ಸಿಕ್ಕಾಪಟ್ಟೆ ತೆಳ್ಳಗಾಗಿದ್ದರು.‘ರಣವೀರ್‌ ಪಾತ್ರಕ್ಕೆ ನ್ಯಾಯ ಒದಗಿಸಿಕೊಡಲು ಏನು ಬೇಕಾದರೂ ಮಾಡುತ್ತಾರೆ. ಒಂದು ಚಿತ್ರಕ್ಕಾಗಿ ದೇಹ ಬೆಳೆಸಿಕೊಂಡಿದ್ದು, ಆ ನಂತರದ ಸಿನಿಮಾಗಾಗಿ ಸಣ್ಣಗಾಗಬೇಕಾದಾಗ ಮೂಳೆ ಚರ್ಮದ ಸಣ್ಣನೆಯ ದೇಹಧಾರಿಯಾಗಲು ಅವರು ಸಿದ್ಧರಿಸುತ್ತಾರೆ’ ಎಂದು ಬಾಲಿವುಡ್‌ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಿನಿಮಾಗಳಲ್ಲಿನ ಪಾತ್ರಕ್ಕೆ ತಕ್ಕಂತೆ ಸ್ಟೈಲ್‌ ಮಾಡಿಕೊಳ್ಳುವ ರಣವೀರ್‌, ಆ ಸಿನಿಮಾ ಮುಗಿಯುವವರೆಗೂ ಅದೇ ರೀತಿ ಕಾಣಿಸಿಕೊಳ್ಳುತ್ತಾರೆ. ಆದರೆ, ಈಗ ಈ ಹೊಸ ಲುಕ್‌ ಯಾಕೆ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT