ಜೀವ ಈಗ ‘ಚೀಕ’

ಮಂಗಳವಾರ, ಏಪ್ರಿಲ್ 23, 2019
31 °C

ಜೀವ ಈಗ ‘ಚೀಕ’

Published:
Updated:
Prajavani

ತಮಿಳು ಚಿತ್ರರಂಗದ ಆ್ಯಕ್ಷನ್‌ ಹೀರೊ ಜೀವ, ಭಾರತ ಕ್ರಿಕೆಟ್ ತಂಡದಲ್ಲಿ ಆಲ್‌ರೌಂಡರ್‌ ಆಗಿದ್ದ ಶ್ರೀಕಾಂತ್ ಕೃಷ್ಣಮಾಚಾರಿ ಅವರಂತೆ ರೈಟ್‌ ಹ್ಯಾಂಡ್‌ ಬ್ಯಾಟ್ಸ್‌ಮನ್‌ ಆಗುತ್ತಿದ್ದಾರೆ. 1983ರ ವಿಶ್ವಕಪ್‌ ಕ್ರಿಕೆಟ್‌ ಪಂದ್ಯದಲ್ಲಿ ರೋಚಕವಾಗಿ ಆಡಿದ ‘ಚೀಕ’ನ ತದ್ರೂಪಿಯಂತೆ ಜೀವ ಆಡುತ್ತಿದ್ದಾರೆ. ‌

ರಣವೀರ್‌ ಸಿಂಗ್‌ ಅಭಿನಯದ ‘83’ ಚಿತ್ರಕ್ಕಾಗಿ ಜೀವ ಬಿರುಸಿನ ತರಬೇತಿಯಲ್ಲಿ ನಿರತರಾಗಿದ್ದಾರೆ. ಈ ಮೂಲಕ ಜೀವ ಬಾಲಿವುಡ್‌ ಜರ್ನಿ ಶುರುವಾಗಿದೆ. 

ಚೀಕ ಅವರ ಸ್ಟೈಲ್‌ನಲ್ಲಿ ಬೆಳೆಸಿದ ಹೋತ ಗಡ್ಡ ಜೀವ ಮುಖಕ್ಕೆ ಹೊಸ ಕಳೆ ನೀಡುತ್ತಿದೆ. ಸ್ವತಃ ಕ್ರಿಕೆಟರ್ ಆಗಿರುವುದರಿಂದ ಜೀವ ಅವರಿಗೆ ಚೀಕಾ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲು ಸುಲಭವಾಗಿದೆ. 

ಜೀವನಚರಿತ್ರೆಗಳು ಸಿನಿಮಾವಾಗಿ ತೆರೆಗೆ ಬರುತ್ತಿರುವ ಶಕೆ ಇದು. ಕ್ರೀಡಾ ಕ್ಷೇತ್ರದ ದಿಗ್ಗಜರ ಜೀವನಚರಿತ್ರೆಗಳೂ ಅದೇ ಭರದಲ್ಲಿ ಸಿನಿಮಾಗಳಾಗುತ್ತಿವೆ. ಮಿಲ್ಖಾ ಸಿಂಗ್‌, ಮೇರಿ ಕೋಮ್‌, ಮೊಹಮ್ಮದ್ ಅಜರುದ್ದೀನ್‌, ಎಂ.ಎಸ್.ಧೋನಿ ಮತ್ತು ಸಚಿನ್ ತೆಂಡೂಲ್ಕರ್‌ ಬಯೊಪಿಕ್ ಸರಣಿಗೆ ಹೊಸ ಸೇರ್ಪಡೆ ಕಪಿಲ್‌ದೇವ್‌ ಬಯೊಪಿಕ್. 

’ಭಜರಂಗಿ ಭಾಯ್‌ಜಾನ್‌‘ ಚಿತ್ರದ ನಿರ್ದೇಶಕರೂ ಆಗಿರುವ ಕಬೀರ್ ಖಾನ್‌ ನಿರ್ದೇಶನದ ’83‘ರಲ್ಲಿ ರಣವೀರ್ ಸಿಂಗ್, ಕಪಿಲ್‌ ದೇವ್‌ ಪಾತ್ರದಲ್ಲಿ ನಟಿಸಲಿದ್ದಾರೆ. ದೀಪಿಕಾ ಪಡುಕೋಣೆ, ಕಪಿಲ್‌ ಪತ್ನಿ ರೋಮಿಯಾಗಿಯೂ ನವಾಜುದ್ದೀನ್‌ ಸಿದ್ದಿಕಿ ಭಾರತ ಕ್ರಿಕೆಟ್‌ ತಂಡದ ಕೋಚ್‌ ಆಗಿಯೂ ಕಾಣಿಸಿಕೊಳ್ಳಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !