ಮಂಗಳವಾರ, ಸೆಪ್ಟೆಂಬರ್ 28, 2021
21 °C

ಅಪರೂಪದ ವಿಡಿಯೊ ನೋಡಿ: ಸಹೋದರರ ಜೊತೆ ಹೆಜ್ಜೆ ಹಾಕಿದ ಸಲ್ಮಾನ್‌ ಖಾನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್‌ನ ಸ್ಟಾರ್‌ ನಟ ಸಲ್ಮಾನ್‌ ಖಾನ್‌ ಈ ಲಾಕ್‌ಡೌನ್‌ ಸಮಯದಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದದ್ದು ಎಲ್ಲರಿಗೂ ತಿಳಿದೇ ಇದೆ. ಹಳೆಯ ಫೋಟೊಗಳು, ವಿಡಿಯೊಗಳನ್ನು ಮತ್ತೆ ಪೋಸ್ಟ್‌ ಮಾಡುವ ಮೂಲಕ ಸಲ್ಲು ಬಾಯ್‌, ನೆನಪುಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದು ವಿಶೇಷ.

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸಹೋದರರ ಜೊತೆ ಹೆಜ್ಜೆ ಹಾಕಿರುವ ಅಪರೂಪದ ವಿಡಿಯೊವನ್ನು ಸಲ್ಲು ಬಾಯ್‌ ಹಂಚಿಕೊಂಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ ಆಗಿದೆ.

2018ರಲ್ಲಿ ಸಲ್ಮಾನ್‌ ಖಾನ್‌ ಅವರು, ಸೊಹೈಲ್‌ ಹಾಗೂ ಅರ್ಬಾಜ್‌ ಖಾನ್‌ ಜೊತೆ ಕ್ರಿಸ್‌ಮಸ್‌ ಪಾರ್ಟಿಯೊಂದರಲ್ಲಿ ಹೆಜ್ಜೆ ಹಾಕಿರುವ ವಿಡಿಯೊ ಆದಾಗಿದೆ. ಆ ಪ್ಯಾಮಿಲಿ ಟೈಮ್‌ ವಿಡಿಯೊ ಸಲ್ಲು ಅಭಿಮಾನಿಗಳಿಗಂತೂ ಸಖತ್‌ ಖುಷಿಕೊಟ್ಟಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು