ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಶ್ಮಿಕಾ ಮೇಲೆ ‘ಸುಲ್ತಾನ್‌’ ತಂಡ ಮುನಿಸು

Last Updated 26 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ತಮಿಳು ನಟ ಕಾರ್ತಿ ಅಭಿನಯದ ‘ಸುಲ್ತಾನ್‌’ ಸಿನಿಮಾ ತಂಡದ ಸದಸ್ಯರು ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಅಸಮಾಧಾನಗೊಂಡಿದ್ದಾರೆ.

ಇತ್ತೀಚೆಗೆ ತಮಿಳು ಚಿತ್ರರಂಗದಲ್ಲಿ ತಾವು ನಟಿಸುತ್ತಿರುವ ಹೊಸ ಚಿತ್ರದ ಹೆಸರನ್ನು ರಶ್ಮಿಕಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಕಾರ್ತಿ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ರಶ್ಮಿಕಾ ನಾಯಕಿ. ಕಾಲಿವುಡ್‌ನಲ್ಲಿ ಇದು ಅವರ ಚೊಚ್ಚಲ ಚಿತ್ರ. ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಚಿತ್ರದ ಹೆಸರನ್ನು ಬಹಿರಂಗ ಮಾಡಿದ್ದು ಚಿತ್ರತಂಡದ ಅಸಮಾಧಾನಕ್ಕೆ ಕಾರಣ.

ಈ ಚಿತ್ರದ ಹೆಸರನ್ನು ಅಧಿಕೃತ ಘೋಷಣೆ ಮಾಡಲು ಉತ್ತಮ ಸಂದರ್ಭಕ್ಕಾಗಿ ಚಿತ್ರತಂಡ ಕಾಯುತ್ತಿತ್ತು.ಸಾಮಾನ್ಯವಾಗಿ ಕಾಲಿವುಡ್‌ನಲ್ಲಿ ಖ್ಯಾತ ನಟರ ಸಿನಿಮಾಗಳ ಹೆಸರನ್ನು ವಿಶೇಷ ದಿನಗಳಂದು ಘೋಷಿಸಲಾಗುತ್ತದೆ. ಪೋಸ್ಟರ್‌ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಅದರ ಬಗ್ಗೆ ತೀವ್ರ ಕುತೂಹಲ ಮೂಡಿಸಿದ ಬಳಿಕ ಹೆಸರುಗಳ ಘೋಷಣೆ ಮಾಡುವುದು ಅಲ್ಲಿನ ರೀತಿ.

‘ಸುಲ್ತಾನ್‌’ ಸಿನಿಮಾ ತಂಡವು ಇಂತಹದ್ದೇ ಯೋಚನೆಯನ್ನು ಹೊಂದಿತ್ತು. ಆದರೆ ಅಷ್ಟರಲ್ಲಾಗಲೇ ಸಿನಿಮಾ ತಂಡದಲ್ಲಿ ಚರ್ಚೆ ಮಾಡದೇ ‘ಸುಲ್ತಾನ್‌’ ಎಂಬ ಸಿನಿಮಾ ಹೆಸರನ್ನು ರಶ್ಮಿಕಾ ಬಹಿರಂಗ ಮಾಡಿದ್ದಾರೆ.

ರಶ್ಮಿಕಾ ಮಂದಣ್ಣ ತಾವು ಮಾಡಿದ ತಪ್ಪಿಗೆ ಸಿನಿಮಾ ತಂಡದ ಕ್ಷಮೆ ಕೇಳಿದ್ದಾರೆ.ತಾವು ಆಕಸ್ಮಿಕವಾಗಿ ಸಿನಿಮಾ ಹೆಸರನ್ನು ಬಹಿರಂಗಪಡಿಸಿದ್ದಾಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT