ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನ ಅಕ್ಕಿರೊಟ್ಟಿ ಹೇಳಿಕೊಟ್ಟ ರಶ್ಮಿಕಾ: ವೆಬ್ಸೈಟ್‌ಗೆ ಅತಿಥಿ ಸಂಪಾದಕಿಯಾದ ನಟಿ

Last Updated 6 ಡಿಸೆಂಬರ್ 2020, 14:42 IST
ಅಕ್ಷರ ಗಾತ್ರ

ತೆಲುಗು ನಟ ಚಿರಂಜೀವಿ ಅವರ ಸೊಸೆ, ರಾಮ್‌ಚರಣ್ ತೇಜ ಅವರ ಪತ್ನಿ ಉಪಾಸನಾ ಕಮಿನೇನಿ ಕೊನಿಡೇಲಾ ಅವರೀಗ ಆನ್‌ಲೈನ್‌ನಲ್ಲಿಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ಅವರ ಆ ಸಾಹಸಕ್ಕೆ ನಟಿ ರಶ್ಮಿಕಾ ಮಂದಣ್ಣ ಕೈ ಜೋಡಿಸಿದ್ದಾರೆ. ಈ ಹಿಂದೆ ಕೋಳಿಸಾರು ಮಾಡುವುದನ್ನು ಹೇಳಿಕೊಟ್ಟಿದ್ದ ರಶ್ಮಿಕಾ, ಈಬಾರಿಕೊಡಗು ಶೈಲಿಯ ಅಕ್ಕಿ ರೊಟ್ಟಿಯ ತಮಗೆಷ್ಟುಇಷ್ಟ ಎಂಬುದನ್ನು ಶೋದಲ್ಲಿ ಹೇಳಿಕೊಂಡಿದ್ದಾರೆ.

‘ನಮ್ಮ ಮನೆಯಲ್ಲಿ ಬೆಳಿಗ್ಗೆ ಅಕ್ಕಿ ರೊಟ್ಟಿ ಉಪಾಹಾರ. ನಮ್ಮ ಅಜ್ಜಿ ಆ ರೊಟ್ಟಿ ಮಾಡುವುದರಲ್ಲಿ ಎತ್ತಿದ ಕೈ. ಬೆಳಿಗ್ಗೆಯೂ ಅದೇ, ಮಧ್ಯಾಹ್ನ ಊಟಕ್ಕೂ ಅಕ್ಕಿರೊಟ್ಟಿ, ರಾತ್ರಿ ಊಟಕ್ಕೂ ಅಕ್ಕಿ ರೊಟ್ಟಿ. ನಾನೊಬ್ಬಳೇ ಅಲ್ಲ ಬಹುತೇಕ ಎಲ್ಲ ಕೊಡವರಿಗೆ ಅಕ್ಕಿರೊಟ್ಟಿ ಅಂದರೆ ಇಷ್ಟʼ ಎಂದಿದ್ದಾರೆ ರಶ್ಮಿಕಾ.

ಜೀವನ ಶೈಲಿ, ಮಾನಸಿಕ ಮತ್ತು ದೈಹಿಕ ಆರೋಗ್ಯ, ಪ್ರಸ್ತುತ ಟ್ರೆಂಡಿಂಗ್ ವಿಚಾರಗಳನ್ನುಯುಆರ್‌ಲೈಫ್‌ ಮೂಲಕ ಉಪಾಸನಾ ಹೇಳಹೊರಟಿದ್ದಾರೆ.

URLife.co.in.ಅನ್ನುವುದು ಉಪಾಸನಾ ಅವರ ಹೊಸ ವೆಬ್‌ಸೈಟ್‌.ಈ ತಾಣಕ್ಕೆ ಅವರು ಆಡಳಿತ ನಿರ್ದೇಶಕಿ. ರಶ್ಮಿಕಾ ಅತಿಥಿ ಸಂಪಾದಕಿ.

URLife.co.in. ಎಂಬುದು ಒಂದು ಆರೋಗ್ಯಕರ ವೇದಿಕೆ. ಇಲ್ಲಿ ಆಯ್ದ ಕೆಲ ಕ್ಷೇತ್ರಗಳ ನುರಿತ ಪರಿಣಿತರು, ವೈದ್ಯರು ಸದ್ಯದ ಜೀವನ ಶೈಲಿ, ತಂತ್ರಜ್ಞಾನದ ಬಗ್ಗೆ ಈ ವೇದಿಕೆ ಮೂಲಕ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಡಯೆಟ್ ಟಿಪ್ಸ್, ನುರಿತವರಿಂದ ಉಪಯುಕ್ತ ಮಾಹಿತಿ, ಉಚಿತ ತರಗತಿಗಳು, ವಿಡಿಯೋ ಮಾಹಿತಿ, ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಯೂ ಬೆರಳ ತುದಿಯಲ್ಲಿಯೇ URLife.co.in.ನಲ್ಲಿ ಲಭ್ಯವಾಗಲಿದೆ ಎಂದು ಉಪಾಸನಾ ಹೇಳಿದ್ದಾರೆ.

ಭಾರತೀಯ ಕಾರ್ಪೊರೇಟ್ ವಲಯದಲ್ಲಿ URLife.co.in, 14 ಮಿಲಿಯನ್ ಗೂ ಅಧಿಕ ಓದುಗರನ್ನು ಒಳಗೊಂಡ ಭಾರತದ ಅತಿದೊಡ್ಡ ಆರೋಗ್ಯ ಸೇವಾ ಪೂರೈಕೆದಾರ ಸಂಸ್ಥೆ. ತಜ್ಞರ ಸಲಹೆ, ಅತ್ಯಾವಶ್ಯಕ ಸಂಪಾದಕೀಯ ವಿಷಯ, ವಿವರವಾದ ಮಾಹಿತಿಯನ್ನು ಒದಗಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT