ಬುಧವಾರ, ನವೆಂಬರ್ 20, 2019
22 °C

ರಶ್ಮಿಕಾ ಮಂದಣ್ಣ ಬೋಲ್ಡ್‌ ಫೋಟೊ ಶೂಟ್‌

Published:
Updated:

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಕನ್ನಡ, ತೆಲುಗು ಮತ್ತು ತಮಿಳು ಚಿತ್ರರಂಗದ ಬಹುಬೇಡಿಕೆಯ ನಟಿ. ಏಕಕಾಲದಲ್ಲಿ ಈ ಮೂರೂ ಚಿತ್ರರಂಗದಲ್ಲಿ ಮಿಂಚುತ್ತಿರುವ ಏಕೈಕ ಕನ್ನಡತಿ. ಶೀಘ್ರವೇ ಅವರು ಬಾಲಿವುಡ್‌ ಅಂಗಳಕ್ಕೂ ಜಿಗಿಯುತ್ತಾರೆ ಎನ್ನುವ ಸುದ್ದಿ ಹೊರಬಿದ್ದಿದೆ. ಸದ್ಯಕ್ಕೆ ಅವರು ಟಾಲಿವುಡ್‌ ಪ್ರಿನ್ಸ್ ಮಹೇಶ್‌ ಬಾಬು ನಾಯಕ ನಟನಾಗಿರುವ ‘ಸರಿಲೇರು ನೀಕೆವ್ವರು’ ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ.

ವಿವಾದಗಳು ರಶ್ಮಿಕಾ ಅವರ ಹೆಗಲೇರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಆದರೆ, ಯಾವುದೇ ವಿವಾದಗಳಿಗೆ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ. ಈಗ ಅವರು ಮತ್ತೊಂದು ಬೋಲ್ಡ್‌ ಫೋಟೊಶೂಟ್ ಮಾಡಿಸಿದ್ದು, ಆಕೆಯ ಬ್ಯಾಕ್‌ ಲೆಸ್‌ ಟಾ‍ಪ್‌ನ ಫೋಟೊಗಳು ಸಾಮಾಜಿಕ ಜಾಲ ತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಈ ಹಿಂದೆಯೂ ಅವರು ಬೋಲ್ಡ್ ಅವತಾರದಲ್ಲಿ ಮಿಂಚಿದ್ದು ಉಂಟು.

 
 
 
 

 

 
 
 
 
 
 
 
 
 

Decide every morning that you are in a good mood. You’ll be surprised on how your day turns out to be. 😉🐒

A post shared by Rashmika Mandanna (@rashmika_mandanna) on

ರಶ್ಮಿಕಾ ಮಂದಣ್ಣ ತಾವು ಹೊಸದಾಗಿ ಕ್ಲಿಕ್ಕಿಸಿಕೊಂಡಿರುವ ಬೋಲ್ಡ್ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಅಪ್ ಲೋಡ್ ಮಾಡಿದ್ದಾರೆ. ಪಿಂಕ್ ಬಣ್ಣದ ಬ್ಯಾಕ್ ಲೆಸ್ ಟಾಪ್ ಧರಿಸಿರುವ ಅವರ ಫೋಟೊಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಜೊತೆಗೆ, ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಮೆಂಟ್ಸ್‌ಗಳೂ ಹರಿದು ಬರುತ್ತಿವೆ. ಕೆಲವರು ಆಕೆಯ ಕಾಲೆಯುವಲ್ಲಿಯೂ ಮಗ್ನರಾಗಿದ್ದಾರೆ.

ಪ್ರತಿಕ್ರಿಯಿಸಿ (+)