ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೆರ್ಸಿ’ ತಿರಸ್ಕರಿಸಿದ್ದಕ್ಕೆ ಕಾರಣ ಹೇಳಿದ ರಶ್ಮಿಕಾ

Last Updated 3 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಕಳೆದ ವರ್ಷ ಟಾಲಿವುಡ್‌ನಲ್ಲಿ ತೆರೆಕಂಡ ‘ಜೆರ್ಸಿ’ ಚಿತ್ರ ಹಿಂದಿಗೆ ರಿಮೇಕ್‌ ಆಗಿದೆ. ಶಾಹಿದ್‌ ಕಪೂರ್‌ ಈ ಚಿತ್ರದ ಹೀರೊ ಆಗಿ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ಶ್ರದ್ಧಾ ಶ್ರೀನಾಥ್‌ ನಟಿಸಿದ್ದ ಪಾತ್ರದಲ್ಲಿರಶ್ಮಿಕಾಮಂದಣ್ಣ ನಟಿಸಲಿದ್ದಾರೆ ಎಂಬ ಸುದ್ದಿ ಆಗ ಹರಿದಾಡಿತ್ತು. ಆ ಮೂಲಕರಶ್ಮಿಕಾಬಾಲಿವುಡ್‌ ಪ್ರವೇಶಿಸಲು ವೇದಿಕೆ ಸಿದ್ಧವಾಗಿದೆ ಎಂದು ಆಕೆಯ ಅಭಿಮಾನಿಗಳು ಖುಷಿಯಲ್ಲಿ ತೇಲುತ್ತಿದ್ದರು. ಕೊನೆ ಗಳಿಗೆಯಲ್ಲಿ ಆಕೆ ಈ ಚಿತ್ರದಿಂದ ಹೊರ ನಡೆದಿದ್ದು ಅಚ್ಚರಿ ಮೂಡಿಸಿತು. ಅವರ ಪಾತ್ರದಲ್ಲಿ ಈಗ ಮೃಣಾಲ್‌ ಟಾಕೂರ್‌ ನಟಿಸುತ್ತಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಾವು ‘ಜೆರ್ಸಿ’ ಚಿತ್ರದಿಂದ ಹೊರಬಂದಿದ್ದು ಏಕೆ ಎಂಬುದನ್ನುರಶ್ಮಿಕಾಬಹಿರಂಗಪಡಿಸಿದ್ದಾರೆ. ‘ಶ್ರದ್ಧಾ ಶ್ರೀನಾಥ್‌ ನಟಿಸಿದ ಪಾತ್ರ ನಿಭಾಯಿಸಲು ನನ್ನಿಂದ ಕಷ್ಟವಾಗಿದ್ದರಿಂದಲೇ ಹಿಂದೆ ಸರಿದೆ’ ಎಂದಿದ್ದಾರೆರಶ್ಮಿಕಾ.

‘ಸಿನಿಮಾದ ಪಾತ್ರವನ್ನು ನನ್ನಿಂದ ನಿಭಾಯಿಸಲು ಸಾಧ್ಯವಾಗದಿದ್ದರೆ ನಾನು ಅಂತಹ ಸಿನಿಮಾಗಳನ್ನು ಖಂಡಿತಾ ಒಪ್ಪಿಕೊಳ್ಳುವುದಿಲ್ಲ. ಜೆರ್ಸಿಯ ರಿಮೇಕ್‌ ಕೂಡ ಹೆಚ್ಚಿನದನ್ನು ನಿರೀಕ್ಷೆ ಮಾಡುತ್ತದೆ. ನಿರ್ಮಾಪಕರು ಮೂಲ ಚಿತ್ರಕ್ಕಿಂತಲೂ ಭಿನ್ನವಾದದ್ದನ್ನು ಅಪೇಕ್ಷಿಸುವುದು ಸಹಜ. ಅದನ್ನು ನಿಭಾಯಿಸುವವರು ಮಾತ್ರವೇ ಆ ಪಾತ್ರ ಒಪ್ಪಿಕೊಳ್ಳಲು ಸಾಧ್ಯ’ ಎಂದು ಹೇಳಿದ್ದಾರೆ.

ತೆಲುಗಿನಲ್ಲಿ ‘ಜೆರ್ಸಿ’ ನಿರ್ದೇಶಿಸಿದ್ದ ಗೌತಮ್‌ ತಿನ್ನನೂರಿ ಅವರೇ ಬಾಲಿವುಡ್‌ನಲ್ಲೂ ರಿಮೇಕ್‌ಗೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಇದರ ಚಿತ್ರೀಕರಣ ಆರಂಭವಾಗಿದೆ. ನಾನಿ ಮತ್ತು ಶ್ರದ್ಧಾ ಶ್ರೀನಾಥ್‌ ನಟಿಸಿದ್ದ ಈ ಸಿನಿಮಾದಲ್ಲಿ ಕ್ರಿಕೆಟರ್‌ ಅರ್ಜುನ್ ಸುತ್ತ ಕಥೆ ಹೆಣೆಯಲಾಗಿದೆ.ರಶ್ಮಿಕಾಅವರು ಈಗ ಸಿನಿಮಾಗಳ ನಿರ್ಮಾಣದತ್ತಲೂ ಮುಖ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT