ಭಾನುವಾರ, ಅಕ್ಟೋಬರ್ 24, 2021
28 °C

ಒಳ ಉಡುಪಿನ ಜಾಹೀರಾತಿನಲ್ಲಿ ವಿಕ್ಕಿ ಕೌಶಲ್ ಜೊತೆ ರಶ್ಮಿಕಾ ಮಂದಣ್ಣ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಹುಭಾಷಾ ನಟಿ  ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಬಾಲಿವುಡ್ ನಟ ವಿಕ್ಕಿ ಕೌಶಲ್ ಅವರೊಂದಿಗೆ ಒಳ ಉಡುಪಿನ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಈ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ಚರ್ಚಾ ವಸ್ತುವಾಗಿದೆ. ಅಲ್ಲದೇ ರಶ್ಮಿಕಾ ಮಂದಣ್ಣ ಅವರನ್ನು ಅನೇಕರು ಇದೇ ವಿಚಾರವಾಗಿ ಟ್ರೋಲ್ ಮಾಡುತ್ತಿದ್ದಾರೆ.

ಒಳ ಉಡುಪು ತಯಾರಿಸುವ ‘ಅಮುಲ್ ಮ್ಯಾಚೊ‘ ಕಂಪನಿಯ ಒಳ ಉಡುಪಿನ ಒಂದು ಜಾಹೀರಾತಿನಲ್ಲಿ ರಶ್ಮಿಕಾ ಯೋಗ ಹೇಳಿ ಕೊಡುತ್ತಿರುತ್ತಾರೆ. ಈ ವೇಳೆ ಯೋಗ ಪಟುಗಳಿಗೆ ಕೈ ಎತ್ತಲು ಹೇಳುತ್ತಾರೆ. ಆಗ ಅಲ್ಲಿದ್ದ ವಿಕ್ಕಿ ಕೌಶಲ್ ಕೈ ಎತ್ತಿದಾಗ ಅವರ ಒಳ ಉಡುಪು ಕಂಡು ರಶ್ಮಿಕಾ ಮಂದಣ್ಣ ಒಂದು ಕ್ಷಣ ಮೈ ಮರೆತು ನಿಲ್ಲುತ್ತಾರೆ.

 

ಇನ್ನೊಂದು ಜಾಹೀರಾತಿನಲ್ಲಿ ಯೋಗ ಕೋಣೆಗೆ ಮೊದಲೇ ರಶ್ಮಿಕಾ ಬಂದಿರುತ್ತಾರೆ. ನಂತರ ಬರುವ ವಿಕ್ಕಿ ಕೌಶಲ್‌ಗೆ ಬೇಕಂತಲೆ ರಾಕ್‌ನಲ್ಲಿಟ್ಟಿರುವ ಯೋಗಾ ಮ್ಯಾಟ್ ತೆಗೆಯಲು ಹೇಳುತ್ತಾರೆ. ಈ ವೇಳೆ ವಿಕ್ಕಿ ಕೌಶಲ್ ಅವರ ಒಳ ಉಡುಪು ಕಂಡು ಮುಗುಳ್ನಗೆ ಬೀರುತ್ತಾರೆ.

 

ಇವೆರಡು ವಿಡಿಯೊ ಅಮುಲ್ ಮ್ಯಾಚೊ ಸ್ಪೋರ್ಟ್ಸ್ ಎಂಬ ಯೂಟ್ಯೂಬ್ ತಾಣದಲ್ಲಿ ಇವೆ.

ಸದ್ಯ ರಶ್ಮಿಕಾ ಬಾಲಿವುಡ್‌ನ ‘ಮಿಷನ್ ಮಜ್ನು‘ ಹಾಗೂ ‘ಗುಡ್ ಬೈ‘ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಪ್ಯಾನ್ ಇಂಡಿಯಾ ಸಿನಿಮಾವಾದ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಕ್ರಿಸ್‌ಮಸ್ ವೇಳೆಗೆ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು