ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನಲ್ಲಿ ‘ಪೆಂಗ್ವಿನ್‌’ ನೋಡಿ ಥ್ರಿಲ್‌ ಆದ ರಶ್ಮಿಕಾ!

Last Updated 28 ಜೂನ್ 2020, 6:55 IST
ಅಕ್ಷರ ಗಾತ್ರ

ಟಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ನಟಿರಶ್ಮಿಕಾ ಮಂದಣ್ಣ ಕೊಡಗಿನ ತಮ್ಮ ಮನೆಯಲ್ಲಿ ಲಾಕ್‌ಡೌನ್ ಅವಧಿಯನ್ನು‌ ಕಳೆಯುತ್ತಿದ್ದಾರೆ. ಕಾಲ ಕಳೆಯಲುಇನ್‌ಸ್ಟಾಗ್ರಾಮ್‌, ಟ್ವಿಟರ್‌ನಲ್ಲಿ ಆ್ಯಕ್ಟಿವ್‌ ಆಗಿರುವ ಅವರು ತಾವು ಕಂಡ, ಅನುಭವಕ್ಕೆ ಬಂದ ಹೊಸ ಸಂಗತಿಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದಾರೆ.

ಹೊಸ ಸಿನಿಮಾ ಹಾಗೂ ಷೊಗಳನ್ನು ವೀಕ್ಷಿಸುತ್ತ ಮನೆಯಲ್ಲಿ ಕಾಲ ಕಳೆಯುತ್ತಿರುವ ಅವರು, ಈಚೆಗೆ ತಾವು ನೋಡಿದ ‘ಪೆಂಗ್ವಿನ್‌’ ಸಿನಿಮಾ ಮತ್ತು ಅದರಲ್ಲಿ ನಟಿ ಕೀರ್ತಿ ಸುರೇಶ್‌ ಅಭಿನಯದಿಂದ ಪ್ರಭಾವಿತರಾಗಿದ್ದಾರೆ.

‘ಪೆಂಗ್ವಿನ್‌’ ವೀಕ್ಷಿಸಿದ ಬಳಿಕ ತಮಗಾದ ಖುಷಿಯನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಚಿತ್ರ ತಂಡವನ್ನು ಬಾಯ್ತುಂಬಾ ಹೊಗಳಿದ್ದಾರೆ. ಅದರಲ್ಲೂ ನಟಿ ಕೀರ್ತಿ ಸುರೇಶ್‌ ಅಭಿನಯದ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಈ ಚಿತ್ರದಲ್ಲಿ ಕೀರ್ತಿ ಅಭಿನಯ ಕಂಡು ಪ್ರೇರಿತಳಾಗಿದ್ದೇನೆ. ಆಕೆಯ ನಟನೆ ಅದ್ಭುತ. ಕುಟುಂಬದ ರಕ್ಷಣೆಗೆ ಸದಾ ಕಾವಲಾಗಿರುವ ‘ಸೈರಸ್‌’ (ನಾಯಿ) ನಟನೆ ತುಂಬಾ ಇಷ್ಟವಾಯಿತು. ಇದು ಎಲ್ಲಾ ತಾಯಂದಿರ ಸಿನಿಮಾ’ ಎಂದು ರಶ್ಮಿಕಾ ಹಾಡಿ ಹೊಗಳಿದ್ದಾರೆ. ನಿರ್ದೇಶಕ ಈಶ್ವರ್‌ ಕಾರ್ತಿಕ್‌ ಹಾಗೂ ನಿರ್ಮಾಪಕ ಕೆ ಸುಬ್ಬರಾಜ್‌ ಅವರ ಪ್ರಯತ್ನವನ್ನೂ ಅವರು ಶ್ಲಾಘಿಸಿದ್ದಾರೆ.

ರಶ್ಮಿಕಾ ಕೈಯಲ್ಲಿ ಅನೇಕ ಸಿನಿಮಾಗಳಿವೆ. ಧ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರಕ್ಕೆ ರಶ್ಮಿಕಾ ಅವರೇ ನಾಯಕಿ. ಈ ಚಿತ್ರದ ಕೆಲ ಹಾಡುಗಳ ಚಿತ್ರೀಕರಣ ಬಾಕಿಯಿದೆ. ತೆಲುಗು ಸ್ಟೈಲಿಶ್‌ ನಟ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಚಿತ್ರದಲ್ಲೂ ರಶ್ಮಿಕಾ ನಾಯಕಿ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ. ಕಾರ್ತಿ ಅಭಿನಯದ ಸಿನಿಮಾ ಮೂಲಕ ಕಾಲಿವುಡ್‌ಗೂ ಹೆಜ್ಜೆ ಇಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT