ಬುಧವಾರ, ಜೂನ್ 3, 2020
27 °C

ಹೆಸರು ಬದಲಾಯಿಸಿಕೊಳ್ಳಲು ಇಚ್ಛಿಸಿದರೆ ರಶ್ಮಿಕಾ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಕುಮಾರ್ ನಿರ್ದೇಶನದ ಅಲ್ಲು ಅರ್ಜುನ್‌ ನಟನೆಯ ತೆಲುಗಿನ ‘ಪುಷ್ಪ’ ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ನಟಿಸುತ್ತಿರುವುದು ಎಲ್ಲರಿಗೂ ತಿಳಿದಿದೆ. ಈ ಚಿತ್ರದಲ್ಲಿ ಅವರದು ಚಿತ್ತೂರು ಹುಡುಗಿಯ ಪಾತ್ರ. ಪ್ರಸ್ತುತ ಟಾಲಿವುಡ್‌ನಲ್ಲಿ ರಶ್ಮಿಕಾ ನಟನೆಯ ಸಿನಿಮಾಗಳು ಬಾಕ್ಸ್‌ಆಫೀಸ್‌ನಲ್ಲಿ ಸೂಪರ್‌ ಹಿಟ್‌ ಆಗುತ್ತಿವೆ. ಹಾಗಾಗಿ, ಈ ಚಿತ್ರದ ಮೇಲೂ ಶೂಟಿಂಗ್‌ಗೂ ಮೊದಲ ನಿರೀಕ್ಷೆ ಹೆಚ್ಚಿರುವುದು ಸಹಜ.

ಲಾಕ್‌ಡೌನ್‌ ಪರಿಣಾಮ ರಶ್ಮಿಕಾ ಮನೆಯಲ್ಲಿಯೇ ಇದ್ದಾರೆ. ಟ್ವಿಟರ್‌, ಇನ್‌ಸ್ಟಾಗ್ರಾಮ್‌ ಮೂಲಕ ಅಭಿಮಾನಿಗಳೊಟ್ಟಿಗೆ ಅವರು ಸಂವಾದ ನಡೆಸುತ್ತಿದ್ದಾರೆ. ಬಾಲ್ಯದಲ್ಲಿ ತಾನು ಮಾವಿನ ಮರವೇರಿ ಹಣ್ಣುಗಳನ್ನು ಕೀಳುತ್ತಿದ್ದ ಅನುಭವಗಳನ್ನು ಅವರು ಇತ್ತೀಚೆಗೆ ಹಂಚಿಕೊಂಡಿದ್ದು ಉಂಟು. ಈಗ ಟ್ವಿಟರ್‌ನಲ್ಲಿ ಆಕೆ ಅಭಿಮಾನಿಗಳಿಗೆ ಕೇಳಿರುವ ಫನ್‌ ಕ್ವಶ್ಚನ್‌ವೊಂದು ವೈರಲ್ ಆಗಿದೆ. ‘ನಾನು ನನ್ನ ಹೆಸರು ಬದಲಾಯಿಸಿಕೊಳ್ಳಲು ಇಚ್ಛಿಸಿದರೆ ನೀವು ಯಾವ ಹೆಸರು ಸೂಚಿಸುತ್ತೀರಿ’ ಎಂಬುದೇ ಆ ಪ್ರಶ್ನೆ.

ರಾಜಕಾರಣಿಗಳು ಮತ್ತು ಸಿನಿಮಾ ಕಲಾವಿದರು ವೃತ್ತಿಬದುಕಿನಲ್ಲಿ ಯಶಸ್ಸು ಸಿಗದಿದ್ದಾಗ ಹೆಸರು ಬದಲಾಯಿಸಿಕೊಳ್ಳುವುದು ಹೊಸತೇನಲ್ಲ. ಪ್ರಸ್ತುತ ರಶ್ಮಿಕಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಹಾಗಿದ್ದರೂ, ಅವರ ಮನದಲ್ಲಿ ಇಂತಹ ಪ್ರಶ್ನೆ ಮೂಡಿದ್ದೇಕೆ ಎಂಬ ಹಲವು ಅಭಿಮಾನಿಗಳಿಗೆ ಕಾಡುತ್ತಿದೆಯಂತೆ. ಈ ನಡುವೆಯೇ ಆಕೆ ಟ್ವೀಟ್‌ಗೆ ಹಲವರು ಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.

‘ತಲಾಶ್ಮಿಕ ಮಂಕಥ’ ಎಂದು ಹೆಸರು ಬದಲಾಯಿಸಿಕೊಳ್ಳುವಂತೆ ಅಭಿಮಾನಿಯೊಬ್ಬರು ಸಲಹೆ ನೀಡಿದ್ದಾರೆ. ‘ರಶ್ಮಿಕಾ ನೀನು ನೋಡಲು ಸುಂದರವಾಗಿರುವೆ. ನಿನ್ನಂತಹ ಚೆಲುವೆ ಇಡೀ ವಿಶ್ವದಲ್ಲಿಯೇ ಇಲ್ಲ. ನಿನ್ನಂತಹ ಸುರಸುಂದರಿಯನ್ನು ನಾನು ನೋಡಿಯೇ ಇಲ್ಲ. ಹಾಗಾಗಿ, ‘ತ್ರಿಪುರ ಸುಂದರಿ’ ಎಂದು ಹೆಸರು ಬದಲಾಯಿಸಿಕೊಳ್ಳುವಂತೆ ಅಭಿಮಾನಿಯೊಬ್ಬರು ಹೇಳಿದ್ದಾರೆ. ಮತ್ತೆ ಕೆಲವರು ಹೆಸರು ಬದಲಾಯಿಸಿಕೊಳ್ಳಬೇಡ. ಮೂಲ ಹೆಸರೇ ಇರಲಿ ಎಂದು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು