ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಳಪತಿ’ ವಿಜಯ್‌ ಮೇಲೆ ರಶ್ಮಿಕಾಗೆ ಕ್ರಷ್‌!

Last Updated 17 ಫೆಬ್ರುವರಿ 2020, 11:42 IST
ಅಕ್ಷರ ಗಾತ್ರ

ರಶ್ಮಿಕಾ ಮಂದಣ್ಣ ತೆಲುಗಿನ ಬಹುಬೇಡಿಕೆಯ ನಟಿ. ‘ಆ್ಯಕ್ಷನ್‌ ಪ್ರಿನ್ಸ್‌’ ಮಹೇಶ್‌ಬಾಬು ಜೊತೆಗೆ ನಟಿಸಿದ ‘ಸರಿಲೇರು ನೀಕೆವ್ವರು’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಕಲೆಕ್ಷನ್‌ ಕಂಡ ಬಳಿಕ ಟಾಲಿವುಡ್‌ನಲ್ಲಿ ಆಕೆಯ ಬೇಡಿಕೆ ಮತ್ತಷ್ಟು ಹೆಚ್ಚಿದೆ. ಆಕೆಯ ಬತ್ತಳಿಕೆಯಲ್ಲಿ ಹಲವು ಬಿಗ್‌ ಬಜೆಟ್‌ ಸಿನಿಮಾಗಳಿವೆ. ಈ ನಡುವೆಯೇ ನಟ ನಿತಿನ್‌ ಅವರೊಟ್ಟಿಗೆ ತೆರೆ ಹಂಚಿಕೊಂಡಿರುವ ‘ಭೀಷ್ಮ’ ಸಿನಿಮಾ ಫೆ. 21ರಂದು ಬಿಡುಗಡೆಯಾಗಲಿದೆ. ಇದರ ಪ್ರಚಾರದಲ್ಲಿ ರಶ್ಮಿಕಾ ತೊಡಗಿಕೊಂಡಿದ್ದಾರೆ.

ಇತ್ತೀಚೆಗೆ ಹೈದರಾಬಾದ್‌ನಲ್ಲಿ ಚಿತ್ರತಂಡ ಮಾಧ್ಯಮವರೊಟ್ಟಿಗೆ ಸಂವಾದ ನಡೆಸಿತು. ಆ ವೇಳೆ ರಶ್ಮಿಕಾ ಅವರ ಮುಂದೆ ಪತ್ರಕರ್ತರು ‘ನಿಮಗೆ ಬಾಲ್ಯದಲ್ಲಿ ಯಾರ ಮೇಲೆ ಕ್ರಷ್‌ ಆಗಿತ್ತು. ಜೊತೆಗೆ, ಭವಿಷ್ಯದಲ್ಲಿ ಯಾವ ನಟನೊಟ್ಟಿಗೆ ಕೆಲಸ ಮಾಡುವ ಆಸೆ ಇದೆ’ ಎಂಬ ಪ್ರಶ್ನೆ ಮುಂದಿಟ್ಟರಂತೆ. ಈ ಪ್ರಶ್ನೆಗೆ ಕೊಂಚ ಆಲೋಚಿಸಿಯೇ ರಶ್ಮಿಕಾ ನೀಡಿದ ಉತ್ತರ ಕುತೂಹಲಕಾರಿಯಾಗಿತ್ತು.

ಆಕೆಗೆ ತಮಿಳಿನ ‘ದಳಪತಿ’ ನಟ ವಿಜಯ್‌ ಮೇಲೆ ಕ್ರಷ್‌ ಆಗಿತ್ತಂತೆ. ‘ನಾನು ಬಾಲ್ಯದಿಂದಲೂ ವಿಜಯ್‌ ನಟಿಸಿರುವ ತಮಿಳು ಸಿನಿಮಾಗಳನ್ನು ಹೆಚ್ಚಾಗಿ ನೋಡುತ್ತಿದ್ದೆ. ಬಾಲ್ಯದಲ್ಲಿ ನಾನು ವಿಜಯ್‌ ಸೆಳೆತಕ್ಕೆ ಸಿಲುಕಿದ್ದೆ’ ಎಂದಿದ್ದಾರೆ ರಶ್ಮಿಕಾ.

ಇಲ್ಲಿಯವರೆಗೂ ಅವರು ತಮಿಳಿನ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಆದರೂ, ಕಾಲಿವುಡ್‌ನಲ್ಲಿ ಆಕೆಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಕಾರ್ತಿ ನಟನೆಯ ‘ಸುಲ್ತಾನ್‌’ ಚಿತ್ರದ ಮೂಲಕ ಮೊದಲ ಬಾರಿಗೆ ತಮಿಳಿನಲ್ಲಿಯೂ ಅದೃಷ್ಟ ಪರೀಕ್ಷೆಗೆ ಇಳಿಯಲು ರಶ್ಮಿಕಾ ಸಜ್ಜಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT