ನಿಶ್ಚಿತಾರ್ಥ ಬ್ರೇಕಪ್: ದೃಢಪಡಿಸಿದ ರಶ್ಮಿಕಾ ಮಂದಣ್ಣ

7

ನಿಶ್ಚಿತಾರ್ಥ ಬ್ರೇಕಪ್: ದೃಢಪಡಿಸಿದ ರಶ್ಮಿಕಾ ಮಂದಣ್ಣ

Published:
Updated:

ಬೆಂಗಳೂರು: ನಟ ರಕ್ಷಿತ್ ಶೆಟ್ಟಿ ಅವರೊಂದಿಗೆ ಮಾಡಿಕೊಂಡಿದ್ದ ನಿಶ್ಚಿತಾರ್ಥ ಮುರಿದು ಬಿದ್ದಿರುವ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಅಧಿಕೃತವಾಗಿ ದೃಢಪಡಿಸಿದ್ದಾರೆ.

'ಕಿರಿಕ್ ಪಾರ್ಟಿ' ಚಿತ್ರದ ಶೂಟಿಂಗ್ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಚಿತ್ರದ ಯಶಸ್ಸಿನ ಬಳಿಕ ತೆಲುಗಿನಲ್ಲಿ ರಶ್ಮಿಕಾ ಅವರಿಗೆ ಉತ್ತಮ ಅವಕಾಶಗಳು ಲಭಿಸಿದ್ದವು. ಈ ನಡುವೆಯೇ ಇಬ್ಬರ ನಡುವಿನ ಪ್ರೀತಿ ಮುರಿದು ಬಿದ್ದಿತ್ತು.

ಪ್ರೀತಿ, ನಿಶ್ಚಿತಾರ್ಥ ಬ್ರೇಕಪ್ ಆಗಿರುವ ಬಗ್ಗೆ ತೆಲುಗಿನ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ರಶ್ಮಿಕಾ ದೃಢಪಡಿಸಿದ್ದಾರೆ.

'ಕಿರಿಕ್ ಪಾರ್ಟಿ ಸಿನಿಮಾದ ಶೂಟಿಂಗ್ನಲ್ಲಿ ರಕ್ಷಿತ್ ಪರಿಚಯವಾಗಿ ಸ್ನೇಹಿತರಾದೆವು. ಈ ಸ್ನೇಹ ಪ್ರೀತಿಗೆ ತಿರುಗಿತು. ಇದನ್ನು ಅಮ್ಮನಿಗೆ ಹೇಳಿದೆ. ಅವರು ಕೂಡ ನನ್ನ‌ ಪ್ರೀತಿಗೆ ಬೆಂಬಲ ನೀಡಿದರು. ನಿನ್ನ ಇಷ್ಟದಂತೆ ಇರು. ನಾವು ಅಡ್ಡಿಪಡಿಸುವುದಿಲ್ಲ ಎಂದರು. ಎಲ್ಲವೂ ಸರಿಯಾಗಿಯೇ ಇತ್ತು. ಈ ನಡುವೆ ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ತಲೆದೋರಿತು. ಇಬ್ಬರಲ್ಲೂ ಲೋಪದೋಷ ಕಾಣಿಸಿಕೊಂಡಿದ್ದು ನಿಜ. ಹಾಗಾಗಿ, ಮದುವೆಗೆ ಮುನ್ನವೇ ಸಂಬಂಧ ಮುರಿದುಕೊಳ್ಳಲು ನಿರ್ಧರಿಸಿದೆವು. ನಾನು ಈಗ ಸಿನಿಮಾವನ್ನಷ್ಟೇ ಪ್ರೀತಿಸುತ್ತಿದ್ದೇನೆ' ಎಂದು ಹೇಳಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 25

  Happy
 • 8

  Amused
 • 3

  Sad
 • 5

  Frustrated
 • 25

  Angry

Comments:

0 comments

Write the first review for this !