ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ನಟಿ, ನ್ಯಾಷನಲ್ ಕ್ರಶ್' ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಇನ್ಸ್ಟಾಗ್ರಾಮ್ ಅನುಯಾಯಿಗಳ ಸಂಖ್ಯೆಯಲ್ಲಿ ತಮ್ಮ ಪತಿ ಹಾಗೂ ನಟ ವಿಜಯ್ ದೇವರಕೊಂಡ ಅವರನ್ನು ಹಿಂದಿಕ್ಕಿದ್ದಾರೆ.

'ಗೀತಾ ಗೋವಿಂದಂ' ಮತ್ತು 'ಡಿಯರ್ ಕಾಮ್ರೇಡ್' ನಂತಹ ಹಿಟ್ ಚಿತ್ರಗಳ ಮೂಲಕ ಈ ಜೋಡಿ ಪ್ರೇಕ್ಷಕರ ಮನ ಗೆದ್ದಿತ್ತು. ಇತ್ತೀಚೆಗೆಷ್ಟೇ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರ ಮದುವೆ ವಿಡಿಯೊ ಮತ್ತು ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಹರಿದಾಡಿದ್ದವು. ಆದರೆ, ಇದೀಗ ಸಾಮಾಜಿಕ ಜಾಲತಾಣದ ಜನಪ್ರಿಯತೆಯಲ್ಲಿ ರಶ್ಮಿಕಾ ಈಗ ವಿಜಯ್ಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.
.ಆಟೊ ಚಾಲಕರನ್ನು ಗುರಿಯಾಗಿಸಿ ಡಕಾಯಿತಿ ನಡೆಸುತ್ತಿದ್ದ ನಾಲ್ವರ ಸೆರೆ.ಭಾರತೀಯರೇ ಹೆಚ್ಚಿರುವ ಇಸ್ರೇಲ್ನ ‘ಲಿಟಲ್ ಇಂಡಿಯಾ’ ಮೇಲೆ ಇರಾನ್ ಕ್ಷಿಪಣಿ ದಾಳಿ.
ರಶ್ಮಿಕಾ ಮಂದಣ್ಣ ಪ್ರಸ್ತುತ ಇನ್ಸ್ಟಾಗ್ರಾಮ್ನಲ್ಲಿ 5.1 ಕೋಟಿಗೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ರಶ್ಮಿಕಾ ಅಭಿನಯಿಸುವ ಮತ್ತು ಆಯ್ದುಕೊಳ್ಳುವ ಚಿತ್ರಗಳು ಯಶಸ್ಸು ಕಾಣುತ್ತಿವೆ. ಇದರಿಂದಲೂ ಆಕೆಯ ಕ್ರೇಜ್ ಹೆಚ್ಚುತ್ತಿದೆ. ಕೇವಲ ಚಿತ್ರಗಳಿಂದ ಮಾತ್ರವಲ್ಲದೆ, ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ರಶ್ಮಿಕಾ ತಮ್ಮ ಎಕ್ಸ್ಪ್ರೇಷನ್ನಿಂದಲೇ ಗಮನ ಸೆಳೆದಿದ್ದಾರೆ.

ರಶ್ಮಿಕಾ ಅವರು ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದು, ಪುಷ್ಪ ಚಿತ್ರದ ನಟನೆಯಿಂದಾಗಿ ಎಷ್ಟರ ಮಟ್ಟಿಗೆ ಕ್ರೇಜ್ ಹುಟ್ಟುಕೊಳ್ಳಲು ಕಾರಣ. ಕೇವಲ ದಕ್ಷಿಣ ಭಾರತ ಮಾತ್ರವಲ್ಲದೆ, ಇಡೀ ಭಾರತದಾದ್ಯಂತ ರಶ್ಮಿಕಾ ಅವರಿಗೆ ಅಭಿಮಾನಿ ಬಳಗ ಸೃಷ್ಟಿಯಾಗಿದೆ.
.ಅಮಿತ್ ಶಾ ಭೇಟಿಯಾದ ಎಚ್ಡಿಕೆ: ಬಿಜೆಪಿ ನಾಯಕರ ಏಕಪಕ್ಷೀಯ ತೀರ್ಮಾನಗಳಿಗೆ ಆಕ್ಷೇಪ.ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಅಂತಿಮ.24 ಗಂಟೆಯೊಳಗೆ ಆಡಿಯೊ ಡಿಲೀಟ್ ಮಾಡಿ: ರಶ್ಮಿಕಾ ಮಂದಣ್ಣ ಖಡಕ್ ಎಚ್ಚರಿಕೆ.ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆಗೆ ತೆರಳಿದ ಕನ್ನಡದ ತಾರೆಯರು.
ರಶ್ಮಿಕಾರ ಸ್ಟೈಲ್ ಯುವತಿಯರನ್ನು ಆಕರ್ಷಿಸಿರಬಹುದು. ಇದೂ ಸಹ ಅವರ ಇನ್ಸ್ಟಾಗ್ರಾಮ್ನಲ್ಲಿ ಹೆಚ್ಚಿನ ಅನುಯಾಯಿಗಳನ್ನು ಪಡೆಯಲು ಕಾರಣವಾಗಿರಬಹುದು.

ನಟ ವಿಜಯ್ ದೇವರಕೊಂಡ ಅವರು ಇನ್ಸ್ಟಾಗ್ರಾಮ್ನಲ್ಲಿ ಸುಮಾರು 2.3ಕೋಟಿಗೂ ಅಧಿಕ ಫಾಲೋವರ್ಸ್ ಹೊಂದಿದ್ದು, ರಶ್ಮಿಕಾ ಅವರಿಗಿಂತ ಸಾಕಷ್ಟು ಹಿಂದೆ ಉಳಿದಿದ್ದಾರೆ.

ಈ ಜೋಡಿಯು ತೆರೆಯ ಮೇಲೆ ಮಾತ್ರವಲ್ಲದೆ, ತೆರೆಯ ಹಿಂದೆಯೂ ಸದಾ ಸುದ್ದಿಯಲ್ಲಿರುತ್ತಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಅವರು 'ರೌಡಿ' ಸ್ಟಾರ್ ವಿಜಯ್ ಅವರನ್ನು ಮೀರಿಸಿರುವುದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.