ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರು ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ನಡುವೆಯೇ ರಶ್ಮಿಕಾ ಅವರ ತಾಯಿ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು. ಆ ಆಡಿಯೊವನ್ನು ಕೂಡಲೆ ಅಳಿಸಿಹಾಕುವಂತೆ ರಶ್ಮಿಕಾ ಸೂಚನೆ ನೀಡಿದ್ದಾರೆ.

ಈ ಆಡಿಯೊ ಕುರಿತು ನಟಿ ರಶ್ಮಿಕಾ ಮಂದಣ್ಣ ಸಾಮಾಜಿಕ ಮಾಧ್ಯಮದ ಇನ್ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕುವ ಮೂಲಕ ಎಚ್ಚರಿಕೆ ನೀಡಿದ್ದಾರೆ. ಪೋಸ್ಟ್ನ ಕೊನೆಯಲ್ಲಿ ಕನ್ನಡದಲ್ಲೇ ಎಚ್ಚರಿಕೆ ನೀಡಿರುವ ಅವರು ತಮ್ಮ ಖಾಸಗಿ ಜೀವನವನ್ನು ಅಪಪ್ರಚಾರ ಮಾಡಿದವರು, ಕಳೆದ 24 ಗಂಟೆಯಿಂದ ಆಡಿಯೋ ಹಂಚಿಕೊಂಡವರು ಅದನ್ನು ಕೂಡಲೆ ಅಳಿಸಿ ಹಾಕುವಂತೆ ತಿಳಿಸಿದ್ದಾರೆ.

ಕಳೆದ 8 ವರ್ಷಗಳಿಂದ ಕೆಲವರು ನನ್ನನ್ನು ಬೆಂಬಲಿಸಿದರೆ, ಮಾಧ್ಯಮದ ಒಂದು ವರ್ಗವಾಗಿರುವ ಸಾಮಾಜಿಕ ಮಾಧ್ಯಮದ ಕೆಲವು ವ್ಯಕ್ತಿಗಳು ನನ್ನ ವಿರುದ್ಧ ಸುಳ್ಳು ಮಾಹಿತಿ ಹಂಚಿಕೊಂಡು ಕಿರುಕುಳ ನೀಡಿದ್ದಾರೆ. ನನ್ನ ಮೇಲೆ ನಿರಂತರವಾಗಿ ದಾಳಿ ಮಾಡಿದ್ದಾರೆ.

ನಾನು ಹೇಳಿದ ಮಾತುಗಳನ್ನು ಸಂದರ್ಭಕ್ಕೆ ತಕ್ಕಂತೆ ಬಳಸದೆ, ತಿರುಚಲಾಗಿದೆ. ನಾನು ಆಡದ ಮಾತುಗಳನ್ನು ಸುಳ್ಳು ಕಥೆಗಳನ್ನಾಗಿ ಸೃಷ್ಟಿ ಮಾಡಿದ್ದಾರೆ. ಕೇವಲ ಹೆಚ್ಚು ವೀಕ್ಷಣೆ ಪಡೆಯುವ ಉದ್ದೇಶದಿಂದ ನನ್ನ ವಿರುದ್ಧ ಸುಳ್ಳು ಸಂದೇಶ ಹರಡಲಾಗಿದೆ. ಸಾರ್ವಜನಿಕ ಜೀವನದಲ್ಲಿ ಇರುವುದರಿಂದ ನಾನು ತಾಳ್ಮೆಯಿಂದ, ಮೌನದಿಂದ ಇದ್ದೆ.

ಕಳೆದ 24 ಗಂಟೆಗಳಿಂದ ನಡೆದಿರುವ ಘಟನೆಗಳು ಯಾವುದೂ ಸಾಮಾನ್ಯ ಎನಿಸುತ್ತಿಲ್ಲ. ಸುಮಾರು 8 ವರ್ಷಗಳ ಹಿಂದೆ ನಡೆದ ಖಾಸಗಿ ಸಂಭಾಷಣೆಯನ್ನು, ಸಂಬಂಧಪಟ್ಟವರ ಅನುಮತಿ ಇಲ್ಲದೆ, ಅವರ ಅರಿವಿಗೆ ಬಾರದೆ ಬಿಡುಗಡೆ ಮಾಡಲಾಗಿದೆ. ಆ ಸಂಭಾಷಣೆಯಿಂದ ಮತ್ತೊಂದು ವಿವಾದವನ್ನು ಸೃಷ್ಟಿಸಲು ಬಳಸಿಕೊಳ್ಳಲಾಗಿದೆ.

ಇಲ್ಲಿವರೆಗೆ ನನಗೆ ತುಂಬಾ ಜನ ಪ್ರೀತಿಯಿಂದ ಬೆಂಬಲ ನೀಡಿದ್ದೀರಿ. ಅವರೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ಎಂದಿದ್ದಾರೆ.

ಈ ಸಂದೇಶದ ಹೊರತಾಗಿಯೂ ನನ್ನ ವಿರುದ್ಧದ ಅಪಪ್ರಚಾರದ ಆಡಿಯೊ ಹಾಗೂ ವರದಿಗಳನ್ನು ಡಿಲೀಟ್ ಮಾಡದೇ ಇದ್ದರೆ, ಸಾಮಾಜಿಕ ಜಾಲತಾಣದ ಇನ್ಫ್ಲೂಯನ್ಸರ್ಗಳು, ಡಿಜಿಟಲ್ ಮಾಧ್ಯಮ ಹಾಗೂ ಮಾಧ್ಯಮ ಸಂಸ್ಥೆಗಳ ವಿರುದ್ಧ ಕಾನೂನು ಮಾನನಷ್ಟ ಮೊಖದ್ದಮೆ ಅಥವಾ ಖಾಸಗಿ ಜೀವನದ ಉಲ್ಲಂಘನೆಯ ದೂರು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

‘ಒಂದ್ ಮಾತು ಈ ಸಮಯದಲ್ಲಿ ಹೇಳಲೇಬೇಕು ಅನ್ನಿಸಿದೆ. ಬೇಕಂತ ನಮ್ಮ ಖಾಸಗಿ ಜೀವನದ ಬಗ್ಗೆ ಬೈಕೊಂಡ್ ಮಾತನಾಡೋ ಜನ, ಒಂದ್ ಅರ್ಥ ಮಾಡ್ಕೊಬೇಕು - ಅವರೆಲ್ಲ ನನ್ನ ಜೀವನ ಹೇಗಿರಬೇಕು ಅಂತ ನಿರ್ಧಾರ ಮಾಡಕ್ಕಾಗತ್ತಾ? ನಮ್ ಜೀವನ ನಮ್ಗಲ್ವಾ? ನಮ್ ನಿರ್ಧಾರ ನಾವೇ ತೊಗೋಬೇಕು ಮತ್ತೆ ತೊಗೋತೀವಿ ಕೂಡ’ ಎಂದು ನೇರ ನುಡಿಗಳಿಂದ ರಶ್ಮಿಕಾ ಮಂದಣ್ಣ ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.