ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾತ್ರೋರಾತ್ರಿ’ ಒಂದು ರಾತ್ರಿಯ ಕಥನ ಜನವರಿ 14ಕ್ಕೆ ಬಿಡುಗಡೆ

Last Updated 5 ಜನವರಿ 2021, 6:33 IST
ಅಕ್ಷರ ಗಾತ್ರ

ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ನಡೆಯುವ ಘಟನಾವಳಿಗಳ ಸುತ್ತ ಹೆಣೆದ ಕಥೆ ‘ರಾತ್ರೋರಾತ್ರಿ’. ಹಾರರ್‌, ಸಸ್ಪೆನ್ಸ್‌ ಕಥಾಹಂದರವುಳ್ಳ ಚಿತ್ರ ಜನವರಿ 14ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಅಂದಹಾಗೆ ಹೊಸಬರೇ ಸೇರಿಕೊಂಡು ನಿರ್ಮಿಸಿರುವ ಚಿತ್ರ ಇದು.

ಪವನ್‌ಕುಮಾರ್ ನಾಯಕ ಅವರು ಪವನ್ ಚಿತ್ರಾಲಯ ಮೂಲಕ ಬಂಡವಾಳ ಹೂಡಿದ್ದಾರೆ. ಡೀಲ್‌ಮುರಳಿ ಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ರಚಿಕಾ ಹಾಗೂ ಡಯನಾ ನಾಯಕಿಯರು. ತಾಯಿ ಪಾತ್ರದಲ್ಲಿ ಗಂಗಮ್ಮ, ಖಳ ಪಾತ್ರಗಳಲ್ಲಿ ರಾಜ್‌ಕಾಂತ್-ವಿನಯ್‌ಕುಮಾರ್ ವಿ.ನಾಯಕ್, ಮಂತ್ರವಾದಿಯಾಗಿ ದಿವಾಕರ್, ಹಾಸ್ಯಪಾತ್ರದಲ್ಲಿ ಹರೀಶ್ ಇದ್ದಾರೆ. ಬಿಡದಿ, ರಾಮನಗರ, ಮಂಡ್ಯ ಮೈಸೂರು ಹೆದ್ದಾರಿಗಳಲ್ಲಿ ಚಿತ್ರೀಕರಣ ನಡೆದಿದೆ.

ಕಥೆ ಏನು?

ಟೆಂಪೋ ಚಾಲಕನಾಗಿರುವ ನಾಯಕನ ಅಮ್ಮನ ಆರೋಗ್ಯ ಸರಿ ಇರುವುದಿಲ್ಲ. ಇದಕ್ಕಾಗಿ ₹ 50 ಸಾವಿರ ವೆಚ್ಚವಾಗುತ್ತದೆಂದು ಆಸ್ಪತ್ರೆಯಿಂದ ಕರೆ ಬರುತ್ತದೆ. ಯಾರಿಂದಲೂ ಸಹಾಯವಾಗದೆ ದೇವರ ಮೊರೆ ಹೋಗುತ್ತಾನೆ. ಆ ಹೊತ್ತಿನಲ್ಲಿ ಪರಿಚಯದವನೊಬ್ಬ ಬಂದು ಒಂದು ಶವವನ್ನು ಹೇಳಿದ ಸ್ಥಳಕ್ಕೆ ಸಾಗಿಸಿದರೆ ನೀನು ಕೇಳುವ ಹಣ ನೀಡುವುದಾಗಿ ತಿಳಿಸುತ್ತಾನೆ. ಅದರಂತೆ ಶವ ತೆಗೆದುಕೊಂಡು ಹೋಗಲು ಮುಂದಾದಾಗ ಶವವು ವಾಹನಕ್ಕೆ ತೊಂದರೆ ಕೊಡುತ್ತದೆ. ಅದು ಏಕೆ, ಆಕೆ ಯಾರು? ಆಕೆಯ ಸಾವಿಗೆ ಕಾರಣವೇನು? ಎಂಬುದು ಸನ್ನಿವೇಶಗಳ ಮೂಲಕ ಚಿತ್ರ ತೆರೆದುಕೊಳ್ಳುತ್ತದೆ.

ಟೆಕ್ಕಿ ಶ್ರೀಧರ್‌ ನರಸಿಂಹನ್ ಅಮ್ಮನ ಕುರಿತ ಹಾಡಿಗೆ ಸಾಹಿತ್ಯ, ಸಂಗೀತ ಸಂಯೋಜಿಸಿ ಹಾಡಿದ್ದಾರೆ. ಛಾಯಾಗ್ರಹಣ ಕಿರಣ್‌ಗಜ, ಸಂಕಲನ ಸೋಲೋಮನ್, ಸಾಹಸ ಆಕ್ಷನ್‌ಮೂರ್ತಿ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT