ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡಿಸ್ಕೊ ರಾಜಾ’ಗೆ ರವಿತೇಜ ಗಾನ

Last Updated 22 ಜನವರಿ 2020, 19:45 IST
ಅಕ್ಷರ ಗಾತ್ರ

ಈಗಾಗಲೇ ನಟನೆಯಿಂದ ಮನೆಮಾತಾಗಿರುವ ಟಾಲಿವುಡ್‌ ಸ್ಟಾರ್‌ ರವಿತೇಜ ಗಾಯಕರಾಗಿ ಮೋಡಿ ಮಾಡಲು ಸಿದ್ಧರಾಗಿದ್ದಾರೆ.ವಿ. ಆನಂದ್‌ ಆ್ಯಕ್ಷನ್‌ ಕಟ್‌ ಹೇಳಿರುವ ‘ಡಿಸ್ಕೊ ರಾಜಾ’ ಚಿತ್ರದಲ್ಲಿ ‘ರಮ್‌ ಪಮ್‌ ಬಮ್’ ಹಾಡಿಗೆ ಧ್ವನಿಯಾಗಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಬಪ್ಪಿ ಲಹರಿ ಮತ್ತು ಶ್ರೀಕೃಷ್ಣ ಕೂಡ ರವಿತೇಜ ಜತೆ ಹಾಡಿಗೆ ಧ್ವನಿಗೂಡಿಸಿದ್ದಾರೆ.

‘ಡಿಸ್ಕೊ ರಾಜಾ’ ವಿಜ್ಞಾನದ ಕೌತುಕ ವಿಷಯಗಳ ಸುತ್ತ ಹೆಣೆಯಲಾದ ಕಾಲ್ಪನಿಕ ಚಿತ್ರ ಎಂದು ಹೇಳಲಾಗುತ್ತಿದೆ. ಹಾಡು ಈಗಾಗಲೇ ಟಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ. ಹಾಡಿನ ವಿಡಿಯೊ ಬಿಡುಗಡೆಯಾದ ಕೆಲವೇ ದಿನಗಳಲ್ಲಿ 13 ಲಕ್ಷ ಜನರು ಇದನ್ನು ವೀಕ್ಷಿಸಿದ್ದಾರೆ. ಈ ಹಾಡು ತುಂಬಾ ಮಜವಾಗಿದೆ.

ರವಿತೇಜ ಹಾಡು ಹಾಡುತ್ತಿರುವುದು ಇದೇ ಮೊದಲೇನಲ್ಲ. ಈ ಮೊದಲು ಪವರ್‌ ಮತ್ತು ಬಲುಪು ಚಿತ್ರಗಳಲ್ಲಿ ಹಾಡುವ ಮೂಲಕ ರವಿತೇಜ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಟಾಲಿವುಡ್‌ನಲ್ಲಿ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ‘ಡಿಸ್ಕೊ ರಾಜಾ’ ಇದೇ ಜ.24ರಂದು ತೆರೆ ಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT