ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡಿಗ’ದ ರವಿಚಂದ್ರನ್ ಲುಕ್‌!

Last Updated 8 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಚಂದನವನದ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮುಂದಿನ ‘ಕನ್ನಡಿಗ’ ಚಿತ್ರದ ನೋಟ ಬಹಿರಂಗಗೊಂಡಿದೆ. ಅಲ್ಲದೇ ಅವರ ಈ ಹೊಸ ನೋಟ ಅಭಿಮಾನಿಗಳಲ್ಲಿ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚುವಂತೆ ಮಾಡಿರುವುದು ಸುಳ್ಳಲ್ಲ. ಬಿ.ಎಂ.ಗಿರಿರಾಜ್ ನಿರ್ದೇಶನದ ಈ ಸಿನಿಮಾದ ಶೂಟಿಂಗ್ ಇತ್ತೀಚೆಗೆ ಆರಂಭವಾಗಿತ್ತು. ಸಿನಿಮಾದಲ್ಲಿ ರವಿಚಂದ್ರನ್ ಹೊಸ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಗುಣಭದ್ರ ಎಂಬ ಪಾತ್ರ ಕ್ರೇಜಿಸ್ಟಾರ್ ಅವರದ್ದು.

ಬಿಳಿ ಪಂಚೆ, ಶರ್ಟ್‌, ಗಿರಿಜಾ ಮೀಸೆ ಹಾಗೂ ತಲೆಯ ಮೇಲೆ ಮುಂಡಾಸು ಧರಿಸಿರುವ ರವಿಚಂದ್ರನ್ ಅವರ ಈ ಲುಕ್ ಅಭಿಮಾನಿಗಳ ಮನ ಗೆದ್ದಿದೆ. ಐತಿಹಾಸಿಕ ಕಥಾ ಹಿನ್ನೆಲೆ ಹೊಂದಿರುವ ಸಿನಿಮಾದ ಶೂಟಿಂಗ್ ಚಿಕ್ಕಮಗಳೂರಿನಲ್ಲಿ ನಡೆಯುತ್ತಿದೆ. ಅವರ ವಿಶೇಷ ನೋಟದ ಫೋಟೊ ವೈರಲ್ ಆಗಿದ್ದು ತುಂಬಾನೇ ಸದ್ದು ಮಾಡುತ್ತಿದೆ.

ಖ್ಯಾತ ನಟ ಟಾಮ್ ಅಲ್ಟರ್ ಅವರ ಮಗ ಜೆಮಿ ಅಲ್ಟರ್ ಈ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಮೊದಲ ಬಾರಿ ಕಾಣಿಸಿಕೊಳ್ಳಲಿದ್ದಾರೆ. ಅವರು ರೆವರೆಂಡ್‌ ಫರ್ಡಿನಾಂಡ್ ಕಿಟೆಲ್ ಅವರ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಕನ್ನಡ–ಇಂಗ್ಲಿಷ್ ಶಬ್ದಕೋಶವನ್ನು ಹೊರತಂದ ಫರ್ಡಿನಾಂಡ್ ಕಿಟೆಲ್ ಅವರ ಕುರಿತಾದ ಸಿನಿಮಾ ಇದಾಗಿದೆ. ಇದರಲ್ಲಿ ಪಾವನಾ ರವಿಚಂದ್ರನ್ ಜೊತೆ ನಾಯಕಿಯಾಗಿ ನಟಿಸಲಿದ್ದಾರೆ. ಜಯಶ್ರೀ, ಬಾಲಾಜಿ ಮನೋಹರ್‌ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಕೆಜಿಎಫ್ ಖ್ಯಾತಿಯ ರವಿ ಬಸ್ರೂರ್ ಸಂಗೀತ ನಿರ್ದೇಶನ ಸಿನಿಮಾಕ್ಕಿದೆ.

‘ನಾನು ಈ ರೀತಿಯ ಪಾತ್ರವನ್ನು ಹಿಂದೆಂದೂ ಮಾಡಿಲ್ಲ’ ಎಂದು ರವಿಚಂದ್ರನ್ ಸಂದರ್ಶನವೊಂದರಲ್ಲಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT