ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗ ಚೆನ್ನಾಗಿ ಕಿಸ್ ಮಾಡ್ತಾನೆ ಎಂದ ರವಿಚಂದ್ರನ್‌!

Last Updated 7 ಮಾರ್ಚ್ 2020, 14:00 IST
ಅಕ್ಷರ ಗಾತ್ರ

ಮಗನ ಸಿನಿಮಾ ಕಾರ್ಯಕ್ರಮಕ್ಕೆ ಹೋಗುತ್ತಿದ್ದೀರಿ. ಹಾಗಾಗಿ, ಹುಷಾರಾಗಿ ಮಾತನಾಡಿ’ ಎಂದು ನಟ ರವಿಚಂದ್ರನ್ ಅವರಿಗೆ ಪತ್ನಿ ಸೂಚಿಸಿದ್ದರು. ಅಷ್ಟೇ ಅಲ್ಲ, ಪತಿಯ ಜೊತೆ ಅವರೂ ಬಂದಿದ್ದರು.

ಹೀಗಿದ್ದರೂ, ರವಿಚಂದ್ರನ್ ಅವರು ‘ನನಗೆ ಮಗನ ಸಿನಿಮಾ, ಅವರ ಸಿನಿಮಾ, ಇವರ ಸಿನಿಮಾ ಎಂಬುದೆಲ್ಲ ಇಲ್ಲ. ಏನಿದ್ದರೂ ಹೇಳುತ್ತೇನೆ’ ಎಂದು ಮಾತಿಗೆ ಕುಳಿತಿದ್ದರು. ಅದು ರವಿಚಂದ್ರನ್ ಪುತ್ರ ಮನುರಂಜನ್ ಅಭಿನಯದ ‘ಪ್ರಾರಂಭ’ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮ.

ಚಿತ್ರದ ಮೂರು ಹಾಡುಗಳನ್ನು ಕೇಳಿಸಿಕೊಂಡ ಕ್ರೇಜಿ ಸ್ಟಾರ್, ‘ಇಷ್ಟು ಹಾಡುಗಳನ್ನು ಕೇಳಿಸಿಕೊಂಡ ನಂತರ, ಈ ಚಿತ್ರದ ಕಥೆಯಲ್ಲಿ ಒಂದು ನೋವು ಇದೆ ಎಂದು ಅನಿಸಿತು. ನೋವು ಇದ್ದರೆ ಮಾತ್ರ ಪ್ರೀತಿ ಚೆಂದ’ ಎಂದು ತಮ್ಮ ಅನಿಸಿಕೆ ಹೇಳಿದರು.

ಚಿತ್ರದ ಒಂದೆರಡು ದೃಶ್ಯಗಳನ್ನು ನೋಡಿ, ‘ನನ್ನ ಮಗ ನನಗಿಂತ ಚೆನ್ನಾಗಿ ಕಿಸ್ ಮಾಡುತ್ತಾನೆ, ನನಗಿಂತ ಚೆನ್ನಾಗಿ ಸಿಗರೇಟ್ ಸೇದುತ್ತಾನೆ. ನಾನು ಇಷ್ಟೊಂದು ಚೆನ್ನಾಗಿ ಮಾಡಿರಲಿಲ್ಲ’ ಎಂದು ಮಗನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

‘ಪ್ರಾರಂಭ’ ಚಿತ್ರವನ್ನು ಮನು ಕಲ್ಯಾಡಿ ನಿರ್ದೇಶಿಸಿದ್ದಾರೆ. ಕೀರ್ತಿ ಅವರು ಈ ಚಿತ್ರದ ನಾಯಕಿ. ‘ಮನು ಬಹಳ ಕಮರ್ಷಿಯಲ್ ಆಗಿ ಸಿನಿಮಾ ಬಗ್ಗೆ ಆಲೋಚಿಸುತ್ತಾರೆ. ಈ ಚಿತ್ರದಲ್ಲಿ‌ ಮನುರಂಜನ್ ಅವರದ್ದು ಕಣ್ಣಲ್ಲೇ ಮಾತನಾಡುವ ಪಾತ್ರ’ ಎಂದು ಮೆಚ್ಚುಗೆ ಸೂಚಿಸಿದರು ‘ಲವ್ ಮಾಕ್ಟೇಲ್’ ಚಿತ್ರದ ನಾಯಕ ಡಾರ್ಲಿಂಗ್ ಕೃಷ್ಣ.

ಚಿತ್ರಕ್ಕೆ ಪ್ರಜ್ವಲ್ ಪೈ ಸಂಗೀತ ನೀಡಿದ್ದಾರೆ. ‘ಚಿತ್ರ ಪರ್ಫೆಕ್ಟ್ ಆಗಿ ಮೂಡಿಬರಲಿ ಎಂದು ಒಂದು ವರ್ಷ ಸಮಯ ತೆಗೆದುಕೊಂಡೆವು. ಕಥೆಯೇ ಈ ಚಿತ್ರದ ವಿಶೇಷ’ ಎಂದು ಮನು ಸಿನಿಮಾ ಬಗ್ಗೆ ಒಂದು ಸಾಲಿನ ವಿವರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT