ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯಕ್ಕೆ ಮರಳುವಾಸೆ: ಕಿಚ್ಚನ ಮನದ ಮಾತು

Last Updated 19 ಜೂನ್ 2020, 9:28 IST
ಅಕ್ಷರ ಗಾತ್ರ

‘ಜೀವನವನ್ನು ರಿವೈಂಡ್ ಮಾಡಬಹುದಾದರೆ, ಮತ್ತೆ ನಾನು ನನ್ನ ಬಾಲ್ಯಕ್ಕೆ ಹೋಗಲು ಬಯಸುತ್ತೇನೆ’

ಹೀಗೆ ಹೇಳಿದವರು ಮತ್ಯಾರು ಅಲ್ಲ, ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌.ವಿಶ್ವದ ವಿವಿಧೆಡೆ ನೆಲೆಸಿರುವ ಕನ್ನಡಿಗರು ಒಟ್ಟುಗೂಡಿ ತಮ್ಮ ನೆಚ್ಚಿನ ನಟ ಕಿಚ್ಚ ಸುದೀಪ್ ಅವರನ್ನು ಆನ್‌ಲೈನ್‌ ಮೂಲಕ ಭೇಟಿ ಮಾಡಲು ಆಯೋಜಿಸಿದ್ದವಿಶಿಷ್ಟ ವರ್ಚುವಲ್ ಮೀಟ್‌ನ ‘ನನ್ನ ಪಯಣ’ ಕಾರ್ಯಕ್ರಮದಲ್ಲಿ ಹೇಳಿದ ಮಾತಿಗೆ ಅಭಿಮಾನಿಗಳು ಫುಲ್‌ ಪೀಧಾ ಆಗಿದ್ದಾರೆ.

ಮಾತುಕತೆಯ ವೇಳೆ ‘ತಮ್ಮ ಅಭಿಮಾನಿಗಳೆಲ್ಲರೂ ನನ್ನ ಸ್ನೇಹಿತರು ಮತ್ತು ಕುಟುಂಬದವರಂತೆ’ ಎಂದು ಕಿಚ್ಚ ಮನದ ಮಾತು ಹೊರಹಾಕಿದರು.ಆಪ್ತವಾಗಿ ನಡೆದ ಈ ಸಂವಾದಲ್ಲಿ ಸುದೀಪ್ ತಮ್ಮ ಬದುಕಿನ ಹಲವು ಆಸಕ್ತಿಕರ ಸಂಗತಿಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡರು. ಜತೆಗೆಹಾಡುಗಳನ್ನೂ ಹಾಡುಗಾರಿಗೆ ಮೇಲೆ ತಮಗಿರುವ ಆಸಕ್ತಿಯನ್ನು ವ್ಯಕ್ತಪಡಿಸುವ ಜತೆಗೆ ಅಭಿಮಾನಿಗಳನ್ನು ಖುಷಿಯ ಅಲೆಯಲ್ಲಿ ತೇಲುವಂತೆ ಮಾಡಿದರು.

ಯುಕೆ, ಯೂರೋಪ್, ಯುಎಸ್‍ಎ ಹಾಗೂ ಆಸ್ಟ್ರೇಲಿಯಾ ಸೇರಿ 18 ರಾಷ್ಟ್ರಗಳ ಅಭಿಮಾನಿಗಳು ಪಾಲ್ಗೊಂಡಿದ್ದ ಈ ಮಾತುಕತೆಯು ಚಿರಂಜೀವಿ ಸರ್ಜಾ ಅವರು ಸುದೀಪ್ ಅವರೊಂದಿಗಿನ ಆಪ್ತ ಕ್ಷಣಗಳ ವಿಡಿಯೊ ತುಣುಕಿನ ಪ್ರಸಾರದೊಂದಿಗೆ ಆರಂಭವಾಯಿತು. ವಿಡಿಯೊ ನೋಡುತ್ತಾ ಕ್ಷಣ ಭಾವುಕರಾದ ಸುದೀಪ್ ಕೆಲ ಕ್ಷಣ ಮೌನಕ್ಕೆ ಶರಣಾದರು.

ಅಭಿಮಾನಿಯೊಬ್ಬರು ನೃತ್ಯದ ಬಗ್ಗೆ ಕೇಳಿದ ಪ್ರಶ್ನೆಗೆ ನನಗೂ ನೃತ್ಯಕ್ಕೂ ಒಂದು ರೀತಿಯ ಲವ್ ಆ್ಯಂಡ್ ಹೇಟ್ ರಿಲೇಷನ್ ಶಿಪ್ ಇದೆ. ನಾನು ಆದಷ್ಟೂ ನನ್ನ ಡಾನ್ಸ್ ಸೀನ್‌ಗಳನ್ನು ಆದಷ್ಟು ಬೇಗ ಮುಗಿಸಲು ಪ್ರಯತ್ನಿಸುತ್ತೇನೆ. ನನಗೆ ನೃತ್ಯದ ಬಗ್ಗೆ ಒಲವು ತೀರಾ ಕಡಿಮೆ. ನನಗೆ ಕಂಫರ್ಟ್ ಆಗುವ ನೃತ್ಯ ಸಂಯೋಜಕರನ್ನು ನಾನು ಆಯ್ಕೆ ಮಾಡಿಕೊಳ್ಳುತ್ತೇನೆ. ಅವರು ನನ್ನ ಮಿತಿಗಳನ್ನು ಅರ್ಥ ಮಾಡಿಕೊಂಡು ನನಗೆ ಸುಲಭ ಸ್ಟೆಪ್ಸ್‌ಗಳನ್ನು ಕೊಡುತ್ತಾರೆ ಎಂದು ಮಾತು ವಿಸ್ತರಿಸಿದರು.

‘ಪೈಲ್ವಾನ್’ ಚಿತ್ರದ ಯಶಸ್ಸಿನ ಬಗ್ಗೆ ಮತ್ತು ತಮ್ಮ ದೈನಂದಿನ ವರ್ಕ್ ಔಟ್ ಬಗ್ಗೆಯೂ ಮಾತನಾಡಿದ ಕಿಚ್ಚ, ಪೈಲ್ವಾನ್ ಚಿತ್ರದಲ್ಲಿನ ಗೆಟಪ್‌ಗಳು ಅಭಿಮಾನಿಗಳಿಗೂ ಇಷ್ಟವಾಗಿವೆ. ನನಗೂ ಖುಷಿ ನೀಡಿವೆ. ಹಾಗೆಯೇ ‘ದಬಾಂಗ್ 3’ ಚಿತ್ರದಲ್ಲಿ ಬಾಲಿವುಡ್‌ ನಟ ಸಲ್ಮಾನ್ ಖಾನ್ ಅವರೊಂದಿಗೆ ನಟಿಸಿದ ಅನುಭವ ಎಂದಿಗೂ ಮರೆಯಲಾಗದು. ಇದು ತುಂಬಾನೇ ಸಂತೋಷ ನೀಡಿದ ಚಿತ್ರ ಎನ್ನಲು ಅವರು ಮರೆಯಲಿಲ್ಲ.

‘ನಿಮ್ಮ ಬದುಕಿನ ಯಾವ ಕ್ಷಣವನ್ನು ಮತ್ತೇ ನೀವು ಹಿಂತಿರುಗಿ ನೋಡಲು ಇಚ್ಛಿಸುತ್ತೀರಿ’ ಎಂದುಅಭಿಮಾನಿಯೊಬ್ಬರು ಪ್ರಶ್ನೆ ಕೇಳಿದಾಗ, ಸಣ್ಣ ನಗುವಿನೊಂದಿಗೆ ಉತ್ತರಿಸಿದ ಕಿಚ್ಚ, ‘ಚಿಕ್ಕಂದಿನಲ್ಲಿ ನನ್ನ ಅಪ್ಪ ಅಮ್ಮನ ಜೊತೆ ಇದ್ದಂತಹ ದಿನಗಳನ್ನು ಸದಾ ನೆನೆಯಲು ಇಷ್ಟಪಡುತ್ತೇನೆ’ ಎಂದರು.

ಯುಎಸ್‌ಎ ಮತ್ತು ಕೆನಡಾದಲ್ಲಿನ ಕನ್ನಡಿಗರ ಜೊತೆ ಮಾತುಕತೆ ನಡೆಸಿದ ವೇಳೆ ಕಿಚ್ಚ, ಕನ್ನಡ ಭಾಷೆ ಮತ್ತು ಕನ್ನಡ ಸಿನಿಮಾ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು.

ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕುರಿತ ಪ್ರಶ್ನೆಗೆ, ‘ನಮಗಿರುವ ಹೆಸರು ಅಥವಾ ಸ್ಥಾನ ದುರುಪಯೋಗಪಡಿಸಿಕೊಳ್ಳದೆ, ಒಳ್ಳೆಯ ಕೆಲಸಕ್ಕೆ ಉಪಯೋಗವಾದಾಗ ಅದಕ್ಕೆ ಒಂದು ಅರ್ಥ ದೊರೆಯುತ್ತದೆ. ಒಳ್ಳೆಯ ಪ್ರತಿಭೆಗೆ ತೂಕ ಹಾಕಬಾರದು. ಇಲ್ಲಿ ಸಿನಿಮಾಗಿಂತ ದೊಡ್ಡವರು ಯಾರು ಇಲ್ಲ’ ಎನ್ನುವ ಮಾತು ಸೇರಿಸಿದರು.

ತಮ್ಮಬದುಕಿನ ಹಲವು ಸಿಹಿ ನೆನಪುಗಳನ್ನು ಮೆಲುಕುಹಾಕಿದ ಸುದೀಪ್‌, ತಮ್ಮ ಪತ್ನಿ ಕೊಡಿಸಿದ ಮೊದಲ ಸ್ಕೂಟರ್‌‌ನ ಕಥೆ, ತಮ್ಮ ಮಗಳೊಂದಿಗಿನ ಒಡನಾಟ, ಸಿನಿ ಬದುಕಿನಲ್ಲಿ ಜೊತೆಯಾದ ಆಪ್ತರು ಹೀಗೆ ಹಲವಾರು ಭಾವನಾತ್ಮಕ ವಿಷಯಗಳನ್ನುಮಾತುಕತೆಯುದ್ದಕ್ಕೂ ಅಭಿಮಾನಿಗಳೊಂದಿಗೆ ಹಂಚಿಕೊಂಡು, ಅಭಿಮಾನಿಗಳನ್ನು ಖುಷಿಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT