ಮುಂಬೈ: ಹಾಲಿವುಡ್ನ ಖ್ಯಾತ ಪಾಪ್ ಗಾಯಕಿ ರಿಹಾನಾ ಅವರು ತಮ್ಮ ಸೌಂದರ್ಯವರ್ಧಕ ಬ್ರಾಂಡ್ 'ಫೆಂಟಿ ಬ್ಯೂಟಿ' ಪ್ರಚಾರಕ್ಕಾಗಿ ಇತ್ತೀಚೆಗೆ ಮುಂಬೈಗೆ ಭೇಟಿ ನೀಡಿದ್ದ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಮುಂಬೈನಲ್ಲಿರುವ ಅಂಬಾನಿ ನಿವಾಸಕ್ಕೆ ಭೇಟಿ ನೀಡಿದ್ಸ ರಿಹಾನಾ ಅವರು ವಿಶೇಷ ಔತಣ ಕೂಟದಲ್ಲಿ ಭಾಗಿಯಾಗಿದ್ದರು. ಇದೇ ವೇಳೆ, ರಿಲಯನ್ಸ್ ರೀಟೇಲ್ನ 'ಟೈರಾ' ಪ್ಲಾಟ್ಫಾರ್ಮ್ ಮತ್ತು ಸೆಫೊರಾ ಮೂಲಕ ಭಾರತದಲ್ಲಿ ತಮ್ಮ 'ಫೆಂಟಿ ಬ್ಯೂಟಿ' ಬ್ರಾಂಡ್ ಅನ್ನು ಅಧಿಕೃತವಾಗಿ ಲಾಂಚ್ ಮಾಡಿದ್ದರು.

ಪಾಪ್ ತಾರೆ ರಿಹಾನಾ ಅವರನ್ನು ಅಂಬಾನಿ ಕುಟುಂಬದ ಸದಸ್ಯರಾದ ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ, ಪುತ್ರ ಅನಂತ್ ಅಂಬಾನಿ, ಸೊಸೆಯರಾದ ಶ್ಲೋಕಾ ಮೆಹ್ರಾ, ರಾಧಿಕಾ ಮರ್ಚೆಂಟ್ ಅವರು ಅದ್ದೂರಿಯಾಗಿ ಬರಮಾಡಿಕೊಂಡಿದ್ದರು.

ಏನಿದು ವಿವಾದ?

ಮುಂಬೈ ಪ್ರವಾಸದ ವೇಳೆ ರಿಹಾನಾ ಹಸುವಿಗೆ ಮೇವು ತಿನ್ನಿಸುವ ಮೂಲಕ 'ಗೋಸೇವೆ' ಮಾಡಿದ್ದರು. ಈ ಫೋಟೊ ನೋಡಿದ ಅನೇಕರು ಶ್ಲಾಘಿಸಿದ್ದರು. ಆ ಬೆನ್ನಲ್ಲೇ ಚಿತ್ರದಲ್ಲಿ ರಿಹಾನಾ ಅವರ ಕೈಯಲ್ಲಿದ್ದ ಬ್ಯಾಗ್ ನೆಟ್ಟಿಗರ ಕಣ್ಣಿಗೆ ಬಿದ್ದಿದೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪರ-ವಿರೋಧದ ಚರ್ಚೆ ಶುರುವಾಗಿದೆ.

ಒಂದೆಡೆ ಗೋಸೇವೆ, ಮತ್ತೊಂದೆಡೆ ಕರುವಿನ ಚರ್ಮ!

ವ್ಯಾಪಕವಾಗಿ ಹರಿದಾಡುತ್ತಿರುವ ಫೋಟೊದಲ್ಲಿ ರಿಹಾನಾ ತಮ್ಮ ಬಲಗೈಯಿಂದ ಹಸುವಿಗೆ ಮೇವು ತಿನ್ನಿಸುತ್ತಿದ್ದಾರೆ. ಎಡಗೈನಲ್ಲಿ ಹಸಿರು ಬಣ್ಣದ 'ಡಿಯೋರ್ (Dior)ಬ್ಯಾಂಡ್ನ ಐಷಾರಾಮಿ ಹ್ಯಾಂಡ್ಬ್ಯಾಗ್ ಅನ್ನು ಹಿಡಿದುಕೊಂಡಿದ್ದಾರೆ.

ವರದಿಗಳ ಪ್ರಕಾರ, ಡಿಯೋರ್ ಹ್ಯಾಂಡ್ಬ್ಯಾಗ್ ಸುಮಾರು ₹4.3 ಲಕ್ಷ ಮೌಲ್ಯದ್ದಾಗಿದೆ. ಈ ಹ್ಯಾಂಡ್ಬ್ಯಾಗ್ ಅನ್ನು ಕರುವಿನ ಚರ್ಮ ಮತ್ತು ಕುರಿಮರಿಯ ಚರ್ಮದಿಂದ ತಯಾರಿಸಲಾಗಿದೆ ಎನ್ನಲಾಗಿದೆ. ಒಂದೆಡೆ ಹಸುವಿಗೆ ಪ್ರೀತಿಯಿಂದ ಮೇವು ಕೊಡುತ್ತಾ, ಮತ್ತೊಂದೆಡೆ ಅದೇ ಪ್ರಾಣಿಯ ಚರ್ಮದಿಂದ ತಯಾರಿಸಿದ ಬ್ಯಾಗ್ ಹಿಡಿದಿರುವುದು ರಿಹಾನಾ ಅವರ 'ದ್ವಂದ್ವ ಮನಸ್ಥಿತಿ' ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ. ಆದರೆ, ಈ ಬ್ಯಾಗ್ ನಿಜವಾಗಿಯೂ ಪ್ರಾಣಿಜನ್ಯ ಚರ್ಮದಿಂದಲೇ ಮಾಡಲ್ಪಟ್ಟಿದೆಯೇ ಎಂಬ ಬಗ್ಗೆ ಅಧಿಕೃತ ಖಚಿತತೆ ಇಲ್ಲದಿರುವುದರಿಂದ, ಕೆಲವರು ಗಾಯಕಿಯ ಬೆಂಬಲಕ್ಕೆ ನಿಂತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.