ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಚಾರಕ್ಕಾಗಿ ವಿಡಿಯೊ ಬಿಡುಗಡೆ ಮಾಡಿಲ್ಲ: ರಿಷಬ್‌ ಶೆಟ್ಟಿ

Last Updated 2 ಮಾರ್ಚ್ 2021, 15:16 IST
ಅಕ್ಷರ ಗಾತ್ರ

ಬೆಂಗಳೂರು: ಹೀರೋ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಬಾಂಬ್‌ ಸ್ಫೋಟದ ದೃಶ್ಯದಲ್ಲಿ ಬೆನ್ನಿಗೆ ಬೆಂಕಿ ತಗುಲಿದ ಘಟನೆಯ ಬಗ್ಗೆ ವಿವರಣೆ ನೀಡಿರುವ ನಟ ರಿಷಬ್‌, ‘ಇದು ಪಬ್ಲಿಸಿಟಿ ಸ್ಟಂಟ್‌ ಅಲ್ಲ’ ಎಂದಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಮಂಗಳವಾರ ಸಂಜೆ ಲೈವ್‌ ಬಂದಿದ್ದ ಅವರು, ‘ಕಳೆದ ಜುಲೈನಲ್ಲಿ ನಡೆದ ಘಟನೆ ಇದು. ಸಿನಿಮಾ ಬಿಡುಗಡೆಗೆ ಇನ್ನು ನಾಲ್ಕೈದು ದಿನ ಇರುವಾಗ ಪಬ್ಲಿಸಿಟಿ ಸ್ಟಂಟ್‌ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಹೇಳಿರುವುದನ್ನು ಗಮನಿಸಿದ್ದೇನೆ. ನಾವು ಇದನ್ನು ಲೀಕ್‌ ಮಾಡುವುದಿದ್ದರೆ ಟ್ರೇಲರ್‌ ಬಿಡುಗಡೆ ಮುನ್ನವೇ ಮಾಡುತ್ತಿದ್ದೆವು. ಆಗ ಟ್ರೇಲರ್‌ ಇನ್ನೂ ಹೆಚ್ಚು ಹಿಟ್‌ ಆಗುತ್ತಿತ್ತು. ಚಿತ್ರ ಬಿಡುಗಡೆ ಸಂದರ್ಭದಲ್ಲಿ ಚಿತ್ರೀಕರಣದ ದೃಶ್ಯಗಳನ್ನು ಹಂಚುತ್ತೇವೆ. ಈ ಸಂದರ್ಭದಲ್ಲಿ ಈ ದೃಶ್ಯವನ್ನು ಪ್ರಸಾರ ಮಾಡಿದ್ದಾರೆ. ಮಾಹಿತಿ ಇಲ್ಲದೇ ಇದ್ದವರು, ಇದು ಎರಡು ಮೂರು ದಿನಗಳ ಹಿಂದೆ ನಡೆದ ಘಟನೆ ಎಂದರು. ಈ ರೀತಿಯ ಗಿಮಿಕ್‌ ನಮಗೆ ಅಗತ್ಯವಿಲ್ಲ ಸಿನಿಮಾದ ವಿಷಯವೇ ಮಾತನಾಡುತ್ತದೆ’ ಎಂದರು.

‘ಡಿಬಾಸ್‌ ಸಿನಿಮಾ ನೋಡುತ್ತೇನೆ’: ‘ಡಿಬಾಸ್‌ ಸಿನಿಮಾ ‘ರಾಬರ್ಟ್‌’ ಬರುತ್ತಿದೆ. ಎಲ್ಲ ಅಭಿಮಾನಿಗಳು ಕಾಯುತ್ತಿದ್ದಾರೆ. ದೊಡ್ಡ ಬಜೆಟ್‌ನಲ್ಲಿ ಬಂದಿರುವ ಸಿನಿಮಾ ಇದು. ನಾನೂ ಈ ಚಿತ್ರಕ್ಕೆ ಕಾಯುತ್ತಿದ್ದೇನೆ. ಮೊದಲ ದಿನ ಟಿಕೆಟ್‌ ಸಿಕ್ಕಿದರೆ ಪಕ್ಕಾ ಸಿನಿಮಾ ನೋಡುತ್ತೇನೆ. ಇಲ್ಲವಾದಲ್ಲಿ ಟಿಕೆಟ್‌ ಸಿಗುವ ಜಾಗಕ್ಕೆ ಹೋಗಿ ಸಿನಿಮಾ ನೋಡುತ್ತೇನೆ. ರಾಬರ್ಟ್‌ನಲ್ಲಿ ಮೊದಲ ಬಾರಿಗೆ ಡಿಬಾಸ್‌ ಅದ್ಬುತವಾಗಿ ಡ್ಯಾನ್ಸ್‌ ಮಾಡಿದ್ದಾರೆ. ಎಲ್ಲ ಕನ್ನಡ ಸಿನಿಮಾಗಳಿಗೂ ಜನರ ಬೆಂಬಲ ಇರಲಿ. ಅವರು, ಇವರು ಎನ್ನುವ ಮಾತು ಬೇಡ. ಜೊತೆಗೆ ಹೋಗೋಣ, ಜೊತೆಗೆ ಬೆಳೆಯೋಣ’ ಎಂದು ರಿಷಬ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT