‘ಕಾಂತಾರ–ಒಂದು ದಂತಕಥೆ ಅಧ್ಯಾಯ ಒಂದು’ ಬಳಿಕ ರಿಷಬ್ ಶೆಟ್ಟಿ ಸದ್ಯ ಪ್ರಶಾಂತ್ ವರ್ಮಾ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ‘ಜೈ ಹನುಮಾನ್’ನಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ಇತ್ತೀಚೆಗೆ ರಿಷಬ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ ಒಂದು ಪೋಸ್ಟ್ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

‘ಅಧ್ಯಾಯ ಎರಡು–ಇಲ್ಲಿಂದ ಶುರು’ ಎಂಬ ಪೋಸ್ಟ್ ಸದ್ಯ ಚರ್ಚೆಯಲ್ಲಿದೆ. ಇದು ‘ಕಾಂತಾರ–ಅಧ್ಯಾಯ ಎರಡು’ ಇರಬಹುದೇ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ ಪೋಸ್ಟ್ನಲ್ಲಿ ಮೊದಲೆರಡು ಸರಣಿಯನ್ನು ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್ ಉಲ್ಲೇಖವಿಲ್ಲ. ಬದಲಾಗಿ ರಿಷಬ್ ಅವರ ‘ರಿಷಬ್ ಶೆಟ್ಟಿ ಫಿಲ್ಮ್ಸ್’ನ ಲಾಂಛನ ಹಾಕಲಾಗಿದೆ.

ಇತ್ತೀಚೆಗೆ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ‘ನನ್ನ ನಿರ್ಮಾಣ ಸಂಸ್ಥೆಯಡಿ ‘ಸರ್ಕಾರಿ ಹಿ.ಪ್ರಾ .ಶಾಲೆ ಕಾಸರಗೋಡು’ ಆದ ಮೇಲೆ ನನ್ನದೇ ಸಿನಿಮಾ ಬಂದಿಲ್ಲ. ಬೇರೆಯವರ ಸಿನಿಮಾ ನಿರ್ಮಾಣ ಮಾಡಿದ್ದೆ. ಈ ಸಂಸ್ಥೆಯನ್ನು ಮತ್ತಷ್ಟು ಬೆಳೆಸಬೇಕಾಗಿದೆ. ‘ಜೈ ಹನುಮಾನ್’ನಲ್ಲಿ ‘ರಿಷಬ್ ಶೆಟ್ಟಿ ಫಿಲ್ಮ್ಸ್’ ಕೂಡಾ ನಿರ್ಮಾಣದಲ್ಲಿ ಕೈಜೋಡಿಸಿದೆ. ಈ ಸಂಸ್ಥೆಯ ಬಗ್ಗೆ ನನ್ನೊಳಗೊಂದಿಷ್ಟು ಕನಸುಗಳು ಇವೆ. ಈ ಬಗ್ಗೆ ಕೂತೂಹಲಕಾರಿ ಬೆಳವಣಿಗೆಗಳು ಆಗುತ್ತಿವೆ’ ಎಂದಿದ್ದರು. ಹೀಗಾಗಿ ರಿಷಬ್ ಅವರ ನಿರ್ಮಾಣ ಸಂಸ್ಥೆಯ ಹೊಸ ಅಧ್ಯಾಯ ಇರಬಹುದು ಎನ್ನುವ ಚರ್ಚೆಯೂ ನಡೆಯುತ್ತಿದೆ. ಈ ಬಗ್ಗೆ ರಿಷಬ್ ಅವರು ಪ್ರತಿಕ್ರಿಯೆ ನೀಡಿಲ್ಲ.v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-51-1312322944

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.