ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ‘ಶಿವಮ್ಮ’ ಚಿತ್ರಕ್ಕೆ ಬೂಸಾನ್‌ ಚಲನಚಿತ್ರೋತ್ಸವ ಪ್ರಶಸ್ತಿ

Last Updated 14 ಅಕ್ಟೋಬರ್ 2022, 12:52 IST
ಅಕ್ಷರ ಗಾತ್ರ

ರಿಷಬ್‌ ಶೆಟ್ಟಿ ನಿರ್ಮಿಸಿ, ಜೈಶಂಕರ್‌ ನಿರ್ದೇಶಿಸಿರುವ ಕನ್ನಡದ ಚಲನಚಿತ್ರ ‘ಶಿವಮ್ಮ’ 27ನೇ ಬೂಸಾನ್‌ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಪಡೆದುಕೊಂಡಿದೆ.

ದಕ್ಷಿಣ ಕೋರಿಯಾದ ‘ವೈಲ್ಡ್‌ ರೂಮರ್‌’ ಮತ್ತು ಕನ್ನಡದ ‘ಶಿವಮ್ಮ’ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದುಕೊಂಡಿವೆ.

ಶಿವಮ್ಮ ಜೈಶಂಕರ್‌ ಆರ್ಯರ್‌ ಅವರ ಮೊದಲ ಚಿತ್ರವಾಗಿದ್ದು, ಹಳ್ಳಿಗಾಡಿನ ಮಹಿಳೆಯೊಬ್ಬರು ಕಷ್ಟಪಟ್ಟು ಸಂಪಾದಿಸಿ ಹಣವನ್ನು ನೆಟ್‌ವರ್ಕ್‌ ವಹಿವಾಟಿನಲ್ಲಿ ಹೂಡಿಕೆ ಮಾಡುವ ವಿಭಿನ್ನ ಕಥೆಯಾಗಿದೆ. ರಿಷಬ್‌ ಶೆಟ್ಟಿ ತಮ್ಮ ನಿರ್ಮಾಣ ಸಂಸ್ಥೆಯಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇವರ ನಿರ್ಮಾಣದ ಪೆಡ್ರೋ ಕೂಡ ಹಿಂದಿನ ವರ್ಷ ಈ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿತ್ತು.

ಜೈಶಂಕರ್‌ ಅವರ ಕಥೆಯ ಸಹಜತೆ ಮತ್ತು ಆಳವನ್ನು ತೀರ್ಪುಗಾರರು ಶ್ಲಾಘಿಸಿದ್ದಾರೆ. ‘ಡಾಕ್ಯುಮೆಂಟರಿ ಮತ್ತು ಫಿಕ್ಷನ್‌ ಸಹಜವಾಗಿ ಬೆರೆತಿವೆ. ಜೊತೆಗೆ ಸಿನಿಮಾ ಮೇಕಿಂಗ್‌ ಅನ್ನು ಉತ್ತೇಜಿಸಿದೆ. ಭಾರತದ ಹಳ್ಳಿಯಲ್ಲಿ ನಡೆಯುವ ಕಥೆಯನ್ನು ನಟನೆ ಮತ್ತು ಅತ್ಯದ್ಭುತ ದೃಶ್ಯಗಳಿಂದ ನಿರ್ದೇಶಕರು ಜಾಗತಿಕವಾಗಿಸಿದ್ದಾರೆ’ ಎಂದು ತೀರ್ಪುಗಾರರು ಹೇಳಿದ್ದಾರೆ.

ಭಾರತದಿಂದ ಆಯ್ಕೆಯಾಗಿದ್ದ ಇನ್ನೊಂದು ಚಿತ್ರ ‘ವಿಂಟರ್‌ ವಿತ್‌ ಇನ್‌’ಗೆ ಪ್ರೇಕ್ಷಕ ವಿಭಾಗದ ಪ್ರಶಸ್ತಿ ಲಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT