ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗನನ್ನು ‘ಹೀರೋ’ ಮಾಡಿದ ರಿಷಬ್‌ ಶೆಟ್ಟಿ!

Last Updated 7 ಏಪ್ರಿಲ್ 2021, 7:15 IST
ಅಕ್ಷರ ಗಾತ್ರ

ಬೆಂಗಳೂರು: ಈ ಪುಟಾಣಿಗೆ ಇನ್ನೂ ಎರಡು ವರ್ಷ. ಆಗಲೇ ಅಪ್ಪನನ್ನೂ ಮೀರಿಸುವ ಆ್ಯಕ್ಟಿಂಗ್‌, ಸ್ಟೈಲ್‌ ಕರಗತವಾದಂತಿದೆ. ಹೀಗಿರುವಾಗ ಮಗನನ್ನು ಚಿತ್ರರಂಗಕ್ಕೆ ಪರಿಚಯಿಸಲು ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಸಿದ್ಧತೆ ಆರಂಭಿಸಿದಂತಿದೆ.

ತಮ್ಮ ಮಗ ರಣ್ವಿತ್‌, ಜನ್ಮದಿನದ ಹಿನ್ನೆಲೆಯಲ್ಲಿ ರಿಷಬ್‌ ಶೆಟ್ಟಿ ವಿಡಿಯೊವೊಂದನ್ನು ಟ್ವೀಟ್‌ನಲ್ಲಿ ಅಪ್‌ಲೋಡ್‌ ಮಾಡಿದ್ದು, ನೂರಾರು ಟ್ವಿಟಿಗರು ಹೊಸ ‘ಹೀರೋ’ಗೆ ಶುಭಾಶಯ ಕೋರಿದ್ದಾರೆ. ‘ಮಕ್ಕಳು ಗೊಂಬೆಗೆ ಬಟ್ಟೆ ತೊಡಿಸಿ ಆಟ ಆಡಿದ್ರೆ, ಗೊಂಬೆಯಂತೆ ಮುದ್ದಾದ ಮಗುವಿಗೆ ಚಂದದ ಬಟ್ಟೆ ತೊಡಿಸಿ ಆಡಿ ಆನಂದಿಸೋದು ‘ದೊಡ್ಡವರ ಮಕ್ಕಳಾಟ’. ಇವತ್ತು ನಮ್ಮ ಬಂಗಾರಿಗೆ ಎರಡು ತುಂಬಿದೆ. ಈ ಸಂಭ್ರಮದಲ್ಲಿ ನಾನು ಪ್ರಗತಿ ಆಡಿದ ಮಕ್ಕಳಾಟವನ್ನ ನಿಮ್ಮೊಡನೆ ಹಂಚಿಕೊಳ್ತಿದ್ದೇವೆ. ನಮ್ಮನೆಯ ಹೀರೋಗೆ ನಿಮ್ಮ ಹಾರೈಕೆಗಳಿರಲಿ’ ಎಂದು ಟ್ವೀಟ್‌ನಲ್ಲಿ ರಿಷಬ್‌ ಕೋರಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ರಿಷಬ್‌ ನಟನೆಯ ‘ಹೀರೋ’ ಚಿತ್ರದ ಹಿನ್ನೆಲೆಸಂಗೀತವನ್ನೇ ಈ ವಿಡಿಯೊಗೆ ಹಾಕಲಾಗಿದ್ದು, ಮಕ್ಕಳು ಆಡುವ ಕಾರಿಗೆ ಸೂಟು, ಬೂಟು ಧರಿಸಿ ಬಂದುರಣ್ವಿತ್‌ ಕೂರುವ ಹಾಗೂ ಅದನ್ನು ಡ್ರೈವ್‌ ಮಾಡುವ ದೃಶ್ಯವಿದೆ. ‘ಪುಟಾಣಿ ಡಿಟೆಕ್ವಿವ್‌’, ‘ಛೋಟಾ ಶೆಟ್ರೆ’ ಹೀಗೆ ಹಲವು ಹೆಸರುಗಳನ್ನು ಟ್ವಿಟಿಗರು ರಣ್ವಿತ್‌ಗೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT