ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ಸುಲಿದ ‘ರಾಬರ್ಟ್‌’ ನಾಯಕಿ

Last Updated 25 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಬಿಡುಗಡೆ ಹೊಸ್ತಿಲಲ್ಲಿರುವ ‘ರಾಬರ್ಟ್’ ಚಿತ್ರದ ನಾಯಕಿ ಆಶಾ ಭಟ್ ಅಡಿಕೆ ಸುಲಿಯುವ ಮೂಲಕ ಮಲೆನಾಡಿಗರ ಗಮನ ಸೆಳೆದಿದ್ದಾರೆ!

ಶಿರಸಿ ತಾಲ್ಲೂಕಿನ ಸಾಲ್ಕಣಿ ಸಮೀಪದ ಹಕ್ರೆಮನೆಯಲ್ಲಿರುವ ತಮ್ಮ ಅಜ್ಜಿ ಮನೆಗೆ ಆಶಾ ಭಟ್ ಬಂದಿದ್ದಾರೆ. ಅಲ್ಲಿ ತಾವು ಅಡಿಕೆ ಸುಲಿಯುತ್ತಿರುವ ದೃಶ್ಯವನ್ನು ಇನ್‍ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ‘ಅಜ್ಜಿಮನೆಯಲ್ಲಿ ಅಡಿಕೆ ಸುಲಿಯುವ ಮಜಾನೇ ಬೇರೆ’ ಎಂಬ ಅಡಿ ಬರಹವನ್ನೂ ಹಾಕಿದ್ದಾರೆ.

ಅಜ್ಜಿ ಮನೆ ಪಕ್ಕದ ಗದ್ದೆಯಲ್ಲಿ ಓಡಾಡಿದ ವಿಡಿಯೊವನ್ನೂ ಪೋಸ್ಟ್ ಮಾಡಿದ್ದರು. ಈ ದೃಶ್ಯಗಳು ವೈರಲ್ ಆಗುತ್ತಿವೆ. ಬಹುನಿರೀಕ್ಷಿತ ಚಿತ್ರದ ಬೆಡಗಿ ಹಳ್ಳಿ ಜೀವನದಲ್ಲಿ ಖುಷಿ ಕಂಡಿದ್ದಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಮೂಲತಃ ಭದ್ರಾವತಿಯವರಾದ ಆಶಾ ಹಲವು ವರ್ಷಗಳ ಬಳಿಕ ಅಜ್ಜಿಮನೆಗೆ ಬಂದಿದ್ದಾರೆ. ಜಂಗ್ಲಿ ಚಿತ್ರದಲ್ಲಿ ದುನಿಯಾ ವಿಜಯ್ ಜತೆ ನಟಿಸಿದ್ದ ಅವರು, ಈಗ ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರದ ನಾಯಕಿ. ಶೂಟಿಂಗ್ ಮುಗಿಸಿ ರಜಾ ಅವಧಿ ಕಳೆಯಲು ಅಜ್ಜಿಮನೆಗೆ ಭೇಟಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT