ಶುಕ್ರವಾರ, ಸೆಪ್ಟೆಂಬರ್ 17, 2021
26 °C

ಯಶ್​ಗೆ 34ನೇ ಜನ್ಮದಿನದ ಸಂಭ್ರಮ: ಬಿಡುಗಡೆಯಾಯ್ತು ಕೆಜಿಎಫ್‌2 ಚಿತ್ರದ ಪೋಸ್ಟರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಜಿಎಫ್‌ ಸಿನಿಮಾ ಖ್ಯಾತಿಯ ನಟ 'ರಾಕಿಂಗ್​ ಸ್ಟಾರ್​' ಯಶ್​ ಅವರಿಗೆ ಇಂದು (ಜ.8) 34ನೇ ವರ್ಷದ ಜನ್ಮದಿನ ಸಂಭ್ರಮ. ಕೆಜಿಎಫ್‌ 2 ಚಿತ್ರತಂಡ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹೊಸ ಪೋಸ್ಟರ್‌ ಬಿಡುಗಡೆ ಮಾಡಿದ್ದು ಯಶ್‌ ಅಭಿಮಾನಿಗಳು ಸಖತ್‌ ಖುಷಿಯಾಗಿದ್ದಾರೆ.

ಯಶ್‌ಗೆ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಅಭಿಮಾನಿಗಳು ಮತ್ತು ಚಿತ್ರರಂಗ ಗಣ್ಯರು ಶುಭಾಶಯಗಳನ್ನು ಹೇಳುತ್ತಿದ್ದಾರೆ. ಯಶ್‌ ಪತ್ನಿ ಹಾಗೂ ನಟಿ ರಾಧಿಕ ಪುತ್ರಿ ಐರಾ ಜೊತೆ ಸೇರಿ ವಿಶೇಷ ಕೇಕ್‌ ತಯಾರಿಸಿ ಜನ್ಮದಿನದ ಶುಭಾಶಯ ಕೋರಿದ್ದಾರೆ. 

ನಿರ್ದೇಶಕ ಪ್ರಶಾಂತ್‌ ನೀಲ್‌ ಕೆಜಿಎಫ್‌ 2 ಚಿತ್ರದ ಹೊಸ ಪೋಸ್ಟರ್‌ ಅನ್ನು ಟ್ವೀಟ್‌ ಮಾಡುವ ಮೂಲಕ ಜನ್ಮದಿನದ ಶುಭಾಶಯ ಹೇಳಿದ್ದಾರೆ. 

ಕಳೆದ ವರ್ಷ ಅಂಬರೀಶ್​ ನಿಧನರಾದ ಹಿನ್ನೆಲೆಯಲ್ಲಿ ಜನ್ಮದಿನ ಆಚರಿಸಿಕೊಳ್ಳುವುದಿಲ್ಲ ಎಂದು ಯಶ್​ ಹೇಳಿದ್ದರು. ಈ ಬಾರಿ ಅಭಿಮಾನಿಗಳು ಯಶ್‌ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸುತ್ತಿದ್ದಾರೆ. ನಿನ್ನೆ ರಾತ್ರಿ ಯಶ್‌ ಮನೆಯ ಮುಂದೆ ಅಭಿಮಾನಿಗಳು ನೆರೆದಿದ್ದರು. ಆದರೆ ಅಭಿಮಾನಿಗಳನ್ನು ಭೇಟಿ ಮಾಡಲು ಯಶ್‌ ಅವರಿಗೆ ಸಾಧ್ಯವಾಗಲಿಲ್ಲ.  

ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳು ಶುಭಾಶಯಗಳನ್ನು ಹೇಳುತ್ತಿದ್ದಾರೆ. ರಾಜ್ಯದ ಹಲವು ಕಡೆಗಳಲ್ಲಿ ಯಶ್‌ ಅಭಿಮಾನಿಗಳು ಸಾರ್ವಜನಿಕರಿಗೆ ಸಿಹಿ ಸಂಭ್ರಮಿಸುತ್ತಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು