ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್‌–2: ಕೊನೆಯ ಹಂತದ ಶೂಟಿಂಗ್‌ಗೆ ಹೈದರಾಬಾದ್ ತೆರಳಿದ ಯಶ್‌

Last Updated 27 ನವೆಂಬರ್ 2020, 5:58 IST
ಅಕ್ಷರ ಗಾತ್ರ

ರಾಕಿಂಗ್ ಸ್ಟಾರ್ ಯಶ್‌ ‘ಕೆಜಿಎಫ್– ಭಾಗ 2’ರ ಅಂತಿಮ ಹಂತದ ಶೂಟಿಂಗ್‌ಗಾಗಿ ನಿನ್ನೆ ಹೈದರಾಬಾದ್ ತೆರಳಿದ್ದಾರೆ. ಸಿನಿಮಾ ನಿರ್ಮಾಣ ಅಂತಿಮ ಹಂತ ತಲುಪಿದ್ದು ಡಿಸೆಂಬರ್ 2ನೇ ವಾರದಲ್ಲಿ ಶೂಟಿಂಗ್ ಪೂರ್ಣಗೊಳಿಸುವ ಯೋಜನೆಯಲ್ಲಿದೆ ಚಿತ್ರತಂಡ.

ಕೋವಿಡ್‌–19 ಲಾಕ್‌ಡೌನ್‌ ಕಾರಣದಿಂದ ಶೂಟಿಂಗ್‌ ಅರ್ಧಕ್ಕೆ ನಿಂತಿದ್ದು, ಆಗಸ್ಟ್‌ ಕೊನೆಯ ವಾರದಿಂದ ಪುನಃ ಶೂಟಿಂಗ್‌ ಆರಂಭವಾಗಿತ್ತು. ನಿರ್ದೇಶಕ ಪ್ರಶಾಂತ್ ನೀಲ್‌ ನಟ ಪ್ರಕಾಶ್ ರಾಜ್ ಅವರನ್ನು ತಮ್ಮ ಸೆಟ್‌ಗೆ ಸೇರಿಸಿಕೊಳ್ಳುವ ಮೂಲಕ ಬೆಂಗಳೂರಿನಲ್ಲಿ ಶೂಟಿಂಗ್‌ ಆರಂಭಿಸಿದ್ದರು. ಅಕ್ಟೋಬರ್‌ ತಿಂಗಳಿನಲ್ಲಿ ಯಶ್ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು.

ಬಾಲಿವುಡ್‌ ನಟ ಸಂಜಯ್ ದತ್‌ ಕೂಡ ಸದ್ಯದಲ್ಲೇ ಶೂಟಿಂಗ್ ಆರಂಭಿಸಲಿದ್ದಾರೆ. ಡಿಸೆಂಬರ್‌ನಲ್ಲಿ ಹೈದರಾಬಾದ್‌ನ ಶೂಟಿಂಗ್‌ನಲ್ಲಿ ಸೆಟ್ ಸೇರಲಿದ್ದಾರೆ ಸಂಜಯ್‌. ಚಿತ್ರದ ಕ್ಲೈಮಾಕ್ಸ್ ಹಂತದ ಶೂಟಿಂಗ್‌ನಲ್ಲಿ ಭಾಗವಹಿಸಲಿದ್ದಾರೆ ಬಾಲಿವುಡ್‌ ನಟ. ಅನಾರೋಗ್ಯದ ಕಾರಣದಿಂದ ಈ ನಟ ಶೂಟಿಂಗ್‌ನಿಂದ ಬ್ರೇಕ್‌ ತೆಗೆದುಕೊಂಡಿದ್ದರು.

ಸಿನಿಮಾದಲ್ಲಿ ಯಶ್ ರಾಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಸಂಜಯ್ ಅಧೀರನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT