ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಾನದಾರಿಯಲ್ಲಿ’ ರುಕ್ಮಿಣಿ ವಸಂತ್‌

Last Updated 18 ಏಪ್ರಿಲ್ 2022, 12:19 IST
ಅಕ್ಷರ ಗಾತ್ರ

‘ಬೀರ್‌ಬಲ್‌’ ಬೆಡಗಿಯಾಗಿ ಚಂದನವನ ಪ್ರವೇಶಿಸಿದ್ದ ನಟಿ ರುಕ್ಮಿಣಿ ವಸಂತ್ ಇದೀಗ ‘ಲೀಲ’ ಎಂಬ ಪಾತ್ರದ ಮುಖೇನ ಗೋಲ್ಡನ್‌ ಸ್ಟಾರ್‌ ಗಣೇಶ್‌ಗೆ ಜೋಡಿಯಾಗಿ ‘ಬಾನದಾರಿಯಲ್ಲಿ’ ಪಯಣ ಆರಂಭಿಸಲಿದ್ದಾರೆ.

ಸದ್ಯಕ್ಕೆ ನಟ ರಕ್ಷಿತ್‌ ಶೆಟ್ಟಿ ನಟನೆಯ, ಹೇಮಂತ್‌ ಎಂ. ರಾವ್‌ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ರುಕ್ಮಿಣಿ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಎರಡು ಶೇಡ್‌ಗಳಲ್ಲಿ ರಕ್ಷಿತ್‌ ಅವರು ಕಾಣಿಸಿಕೊಳ್ಳುತ್ತಿದ್ದು, ಮೊದಲನೇ ಹಂತದ ಚಿತ್ರೀಕರಣದ ಬಳಿಕ ರಕ್ಷಿತ್‌ ಅವರು ತೂಕ ಹೆಚ್ಚಿಸಿಕೊಳ್ಳಲು ಗ್ಯಾಪ್‌ ತೆಗೆದುಕೊಂಡಿದ್ದಾರೆ. ಹೀಗಾಗಿ ಎರಡನೇ ಹಂತದ ಚಿತ್ರೀಕರಣ ಆರಂಭಕ್ಕೂ ಮುನ್ನದ ಬಿಡುವಿನ ವೇಳೆ ರುಕ್ಮಿಣಿ ಅವರಿಗೆ ಹೊಸ ಚಿತ್ರದ ಆಫರ್‌ ಬಂದಿದೆ. ‘ಬಾನದಾರಿಯಲ್ಲಿ’ ವಾಟರ್‌ ಸ್ಪೋರ್ಟ್ಸ್‌ ಕ್ರೀಡಾಪಟುವಾಗಿ ರುಕ್ಮಿಣಿ ಅವರು ಕಾಣಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ಹೊಸ ಕೌಶಲವನ್ನೂ ರುಕ್ಮಿಣಿ ಕಲಿಯುತ್ತಿದ್ದಾರೆ.

‘ಮುಂಗಾರು ಮಳೆ’ ಸಿನಿಮಾಗೆ ಕಥೆ ಬರೆದಿದ್ದ ಪ್ರೀತಮ್‌ ಗುಬ್ಬಿ, ‘ಮಳೆಯಲಿ ಜೊತೆಯಲಿ’, ‘ದಿಲ್‌ ರಂಗೀಲಾ’ ಹಾಗೂ ‘99’ ಸಿನಿಮಾದಲ್ಲಿ ಗಣೇಶ್‌ಗೆ ಆ್ಯಕ್ಷನ್‌ ಕಟ್‌ ಹೇಳಿದ್ದರು. ತಮಿಳಿನ ‘96’ ಸಿನಿಮಾದ ರಿಮೇಕ್‌ ಆಗಿದ್ದ ‘99’ ಹೆಚ್ಚು ಸದ್ದು ಮಾಡಿರಲಿಲ್ಲ. ಮೇನಲ್ಲಿ ‘ಬಾನದಾರಿಯಲ್ಲಿ’ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT