ಶನಿವಾರ, ಆಗಸ್ಟ್ 17, 2019
27 °C

‘ಸಡಕ್‌ 2’ನಲ್ಲಿ ಜೀಷು ಸೇನ್‌

Published:
Updated:

‘ಮಣೀಕರ್ಣಿಕಾ– ದ ಕ್ವೀನ್‌ ಆಫ್‌ ಝಾನ್ಸಿ’ ಸಿನಿಮಾದಲ್ಲಿ ಕಂಗನಾ ರನೋಟ್‌ ಪತಿ ಪಾತ್ರ ನಿರ್ವಹಿಸಿದ್ದ ನಟ ಜೀಷು ಸೇನ್‌ಗುಪ್ತಾ ಅವರು ‘ಸಡಕ್‌ 2’ನಲ್ಲಿ ಆಲಿಯಾ ಭಟ್‌ ತಂದೆಯಾಗಿ ಅಭಿನಯಿಸುತ್ತಿದ್ದಾರೆ.

‘ಸಡಕ್‌ 2’ ಚಿತ್ರವನ್ನು ಮಹೇಶ್‌ ಭಟ್‌ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಊಟಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ಬಗ್ಗೆ ಜೀಷು ಸೇನ್‌ಗುಪ್ತಾ ಮಾತನಾಡಿದ್ದು, ‘ಆಲಿಯಾ ಅವರ ನಟನಾ ಪ್ರೀತಿಯನ್ನು ವರ್ಣಿಸಲು ಅಸಾಧ್ಯ. ಆಕೆ ಮನಸ್ಸಿಟ್ಟು ಕೆಲಸ ಮಾಡುತ್ತಾಳೆ. ಭಾರತೀಯ ಚಿತ್ರರಂಗದಲ್ಲಿ ಅತ್ಯುತ್ತಮ ನಟಿಯರಲ್ಲಿ ಆಲಿಯಾ ಕೂಡ ಒಬ್ಬರು’ ಎಂದು ಹೊಗಳಿದ್ದರು. 

ಜೀಷು ಅವರು ಈಗಾಗಲೇ ಅನೇಕ ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. 2005ರಲ್ಲಿ ‘ನೇತಾಜಿ ಸುಭಾಷ್‌ ಚಂದ್ರ ಬೋಸ್‌– ದಿ ಫಾರ್‌ಗಟನ್‌ ಹೀರೊ’ ಸಿನಿಮಾ ಮೂಲಕ ಬಾಲಿವುಡ್‌ ಪ್ರವೇಶಿಸಿದ್ದರು. 2012ರಲ್ಲಿ ಅನುರಾಗ್‌ ಬಸು ಅವರ ‘ಬರ್ಫಿ’, ರಾಣಿ ಮುಖರ್ಜಿ ಅಭಿನಯದ ‘ಮರ್ದಾನಿ’, ದೀಪಿಕಾ ಪಡುಕೋಣೆಯ ‘ಪೀಕು’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಎಲ್ಲಾ ಸಿನಿಮಾಗಳಲ್ಲೂ ಅವರ ನಟನೆಗೆ ಪ್ರಶಂಸೆ ವ್ಯಕ್ತವಾಗಿದೆ. 

ಎರಡು ದಶಕಗಳ ನಂತರ ಮಹೇಶ್‌ ಭಟ್‌ ‘ಸಡಕ್‌ 2’ ಮೂಲಕ ನಿರ್ದೇಶನಕ್ಕೆ ವಾಪಸ್ಸಾಗಿದ್ದಾರೆ. ಈ ಚಿತ್ರದಲ್ಲಿ ಸಂಜಯ್‌ ದತ್‌, ಪೂಜಾ ಭಟ್‌, ಗುಲ್ಶನ್‌ ಗ್ರೋವರ್‌, ಆದಿತ್ಯ ರಾಯ್‌ ಕಪೂರ್‌ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. 28 ವರ್ಷಗಳ ನಂತರ ಪೂಜಾ ಭಟ್‌, ಸಂಜಯ್‌ ಜೊತೆ ಈ ಚಿತ್ರದಲ್ಲಿ ನಟಿಸುತ್ತಿರುವುದು ವಿಶೇಷ. ‘ಸಡಕ್‌’ ಚಿತ್ರದಲ್ಲಿ ಈ ಜೋಡಿ ನಟಿಸಿದ್ದರು. ಇದೇ ಮೊದಲ ಬಾರಿಗೆ ಅಕ್ಕತಂಗಿಯರಾದ ಪೂಜಾ ಹಾಗೂ ಆಲಿಯಾ ಒಂದೇ ಚಿತ್ರದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ. 

Post Comments (+)