ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗುತ ದೂರ ದೂರ

Last Updated 2 ಮೇ 2019, 19:30 IST
ಅಕ್ಷರ ಗಾತ್ರ

ಯುವಕ ಮತ್ತು ಹುಡುಗನೊಬ್ಬ ಯಾವುದೋ ಒಂದು ಕಾರಣಕ್ಕಾಗಿ ಮನೆ ಬಿಟ್ಟು ಹೋಗುತ್ತಾರೆ. ಇಬ್ಬರು ತಪ್ಪಿಸಿಕೊಂಡು, ಕೊನೆಗೆ ಒಟ್ಟಿಗೆ ಸೇರುತ್ತಾರೆ. ಒಬ್ಬೊಬ್ಬರನ್ನು ಭೇಟಿ ಮಾಡಿ ಸಹಾಯ ತೆಗೆದುಕೊಂಡು, ಅವರದೊಂದು ಗುರಿ ಇರುತ್ತದೆ. ಆ ಗುರಿಗೆ ಚಿತ್ರದ ಶೀರ್ಷಿಕೆ ಅನ್ವಯವಾಗುತ್ತದೆಯಂತೆ. ಆ ಗುರಿ ಏನು, ಅವರು ಆ ಗುರಿ ತಲುಪುತ್ತಾರಾ ಎನ್ನುವುದನ್ನು ತಿಳಿಯಲು ‘ಸಾಗುತ ದೂರ ದೂರ’ಸಿನಿಮಾ ನೋಡಬೇಕಂತೆ. ಈ ಸಿನಿಮಾಕ್ಕೆ ನಿರ್ದೇಶಕ ರವಿತೇಜ ಮೊದಲ ಬಾರಿಗೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.

ಸಿನಿಮಾದ ಟ್ರೈಲರ್ ಅನ್ನುರಾಕಿಂಗ್ ಸ್ಟಾರ್ ಯಶ್ ನಗರದಲ್ಲಿ ಬಿಡುಗಡೆ ಮಾಡಿ, ಚಿತ್ರ ತಂಡಕ್ಕೆ ಶುಭ ಹಾರೈಸಿದರು. ‘ಗೆಳೆಯ ರವಿತೇಜ ಇಷ್ಟು ವರ್ಷ ಆದ ಮೇಲೆ ನಿರ್ದೇಶನ ಮಾಡಿದ್ದಾನೆ.ಆತನ ಹೊಸ ರೀತಿಯ ಪ್ರಯತ್ನ ಸಫಲವಾಗಲಿ.ಇಲ್ಲಿಗೆ ಬರುವ ಮೊದಲು ಟ್ರೇಲರ್‌ನ ತುಣುಕುಗಳನ್ನು ವೀಕ್ಷಿಸಿದೆ. ತುಂಬಾ ಖುಷಿ ಕೊಟ್ಟಿತು. ಕದ್ರಿಮಣಿಕಾಂತ್ ಸಂಗೀತ ಚಿತ್ರರಸಿಕರಿಗೆಇಷ್ಟವಾಗಲಿದ್ದು, ಕದ್ರಿ ಅವರಸಂಗೀತ ಸಂಯೋಜನೆ ಈ ಚಿತ್ರಕ್ಕೆ ಪ್ಲಸ್ ಪಾಯಿಂಟ್. ಸಿನಿಮಾ ನೋಡಲು ಕಾಯುತ್ತಿದ್ದೇನೆ’ ಎಂದರು ‘ರಾಕಿ ಭಾಯ್‌‘ ಯಶ್‌.

ಯಶ್‍ಗೆ ನಿರ್ಮಾಪಕ ಅನಿಲ್‍ಪೂಜಾರಿ ಅವರು ಬೆಳ್ಳಿ ಕಿರೀಟ ತೊಡಿಸಿ ಸನ್ಮಾನಿಸಿದರು. ಯಶ್‌ ಅಭಿಮಾನಿಯೊಬ್ಬರುಕಲಂಗಡಿಹಣ್ಣಿನಲ್ಲಿ ರೂಪಿಸಿರುವಯಶ್ ಪ್ರತಿಕೃತಿಯನ್ನು ಇದೇ ಸಂದರ್ಭ ಯಶ್‌ಗೆ ಉಡುಗೊರೆಯಾಗಿ ನೀಡಿದರು.

ರಾಜಧಾನಿ ಶೂಟಿಂಗ್ ಸಂದರ್ಭದಲ್ಲಿ ಕಷ್ಟಬಂದಾಗ ಸಹಾಯ ಮಾಡಿದ್ದ ಯಶ್ ಗುಣವನ್ನು ಸ್ಮರಿಸಿದ ನಿರ್ದೇಶಕ ರವಿತೇಜ, ‘ ಯಶ್‌ಶಿಫಾರಸ್ಸಿನಿಂದಲೇ ಮೊದಲ ಬಾರಿ ವಿಮಾನದಲ್ಲಿ ಪ್ರಯಾಣಿಸಿದ್ದೆ.ಕನ್ನಡ ಚಿತ್ರರಂಗ ಭಾರತದ ಮಟ್ಟಿಗೆ ಬೆಳೆಯಬೇಕೆಂದು ಆ ದಿನದಂದೇ ಆಸೆ ಪಟ್ಟಿದ್ದರು. ಆದರೆ ಕೆಜಿಎಫ್ ಮೂಲಕ ಚಂದನವನವು ವಿಶ್ವವ್ಯಾಪ್ತಿ ಹರಡಿದೆ’ ಎಂದು ಬಣ್ಣಿಸಿದರು.

‘ರಾಮ ಹುಟ್ಟಿದಾಗ ರಾವಣನು ಹುಟ್ಟಿದ್ದ. ಕೃಷ್ಣ ಹುಟ್ಟಿದಾಗ ಕಂಸನು ಜನ್ಮತಾಳಿದ್ದ. ಇವರಿಗೆ ಹೆತ್ತೋಳು ಒಬ್ಬಳೆ ತಾಯಿ. ಒಳ್ಳೇದು ಕೆಟ್ಟದ್ದು ತಾಯಿ ಇಡುವ ಹೆಸರಿನಲ್ಲಿ ಇರೋಲ್ಲ. ನಾವು ತುಳಿಯೋ ಹಾದಿಯಲ್ಲಿ ಇರುತ್ತದೆ..... ಸಂಭಾಷಣೆಗೆ ಕಂಚಿನ ಕಂಠದ ವಸಿಷ್ಠ ಸಿಂಹ ಧ್ವನಿ ನೀಡಿದ್ದಾರೆ.

ಚಿಕ್ಕಮಗಳೂರು, ಮಂಗಳೂರು, ಬೆಂಗಳೂರು, ಶ್ರೀರಂಗಪಟ್ಟಣ ಮತ್ತು ಮೈಸೂರು ಭಾಗದಲ್ಲಿರುವ ಒಟ್ಟಾರೆ ಇನ್ನೂರು ಹಳ್ಳಿಗಳಲ್ಲಿ ಚಿತ್ರೀಕರಣ ನಡೆಸಲಾಗಿದೆಯಂತೆ. ಚಿತ್ರವು ಸದ್ಯದಲ್ಲೆ ಸೆನ್ಸಾರ್‌ ಮಂಡಳಿಯ ಅನುಮತಿಗೆ ಹೋಗಲಿದ್ದು,, ಮುಂದಿನ ತಿಂಗಳು ತೆರೆಕಾಣುವ ಸಾಧ್ಯತೆ ಇದೆ.

ಅಪೇಕ್ಷಾ ಪುರೋಹಿತ್‍ ಬೆಲವೆಣ್ಣು ಪಾತ್ರದಲ್ಲಿ, ಗೌಡರ ಮಗಳಾಗಿ ದಂತ ವೈದ್ಯೆ ಜಾನ್ವಿ ಜ್ಯೋತಿ, ಪೋಲೀಸ್ ಅಧಿಕಾರಿಯಾಗಿ ಕುಮಾರ್‌ ನವೀನ್, ಯುವಕನಾಗಿ ಮಹೇಶ್‍ ಸಿದ್ದುಮುಖ್ಯ ಭೂಮಿಕೆಯಲ್ಲಿದ್ದಾರೆ. ಛಾಯಾಗ್ರಾಹಕ ಅಭಿ ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT