ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಯಿ ಪಲ್ಲವಿ ತಿರಸ್ಕರಿಸಿದ, ರಶ್ಮಿಕಾ ಮಂದಣ್ಣ ಸ್ವೀಕರಿಸಿದ ಆ ದೃಶ್ಯ ಯಾವುದು?

Last Updated 11 ಮೇ 2020, 10:15 IST
ಅಕ್ಷರ ಗಾತ್ರ

ಹೈದರಾಬಾದ್‌: ತೆಲುಗು ಸಿನಿಮಾ ರಸಿಕರ ಮನ ಗೆದ್ದಿರುವ ಕನ್ನಡತಿ ರಶ್ಮಿಕಾ ಮಂದಣ್ಣ ಹಾಗೂ ಸಾಯಿ ಪಲ್ಲವಿ ಟಾಲಿವುಡ್‌ ಅಂಗಳದಲ್ಲಿ ಸುದ್ದಿಯಾಗಿದ್ದಾರೆ.

ಲವರ್‌ ಬಾಯ್‌ ಖ್ಯಾತಿಯ ವಿಜಯ್‌ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಡಿಯರ್‌ ಕಾಮ್ರೇಡ್‌ ಸಿನಿಮಾ ಬಾಕ್ಸ್‌ ಆಫೀಸ್‌ ಹಿಟ್‌ ಆಗದಿದ್ದರು ಅಭಿಮಾನಿಗಳಪ್ರಶಂಸೆಗೆ ಪಾತ್ರವಾಗಿತ್ತು. ಇದೇ ಜೋಡಿಯ ಗೀತಾ ಗೋವಿಂದಂ ಸಿನಿಮಾ ಸೂಪರ್‌ ಹಿಟ್ ಆಗಿತ್ತು.

ಡಿಯರ್‌ ಕಾಮ್ರೆಡ್‌ ಚಿತ್ರಕ್ಕೆ ನಾಯಕಿಯಾಗಿ ಸಾಯಿ ಪಲ್ಲವಿಯನ್ನು ಆಯ್ಕೆ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ನಂತರ ಅವರನ್ನು ಸಂಪರ್ಕಿಸಿ ಸ್ಕ್ರಿಪ್ಟ್‌ ಕೂಡ ನೀಡಲಾಗಿತ್ತು. ಚಿತ್ರದಲ್ಲಿ ಚುಂಬನ ದೃಶ್ಯಗಳು ಇರುವುದರಿಂದ ನಟಿಸುವುದಿಲ್ಲ ಎಂದು ಸಾಯಿ ಪಲ್ಲವಿ ತಿರಸ್ಕರಿಸಿದ್ದರು. ಈ ವೇಳೆ ಚಿತ್ರತಂಡ ರಶ್ಮಿಕಾ ಅವರನ್ನು ಸಂಪರ್ಕಿಸಿದಾಗ ಅವರು ಒಪ್ಪಿಕೊಂಡರು ಎಂಬ ಮಾಹಿತಿಯನ್ನು ಚಿತ್ರತಂಡ ಹೊರಗೆಡವಿದೆ.

ಡಿಯರ್‌ ಕಾಮ್ರೆಡ್‌ ಸಿನಿಮಾ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಕನ್ನಡದಲ್ಲೂ ಬಿಡುಗಡೆಯಾಗಿದ್ದು ವಿಶೇಷ. ಮೈತ್ರಿ ಮೂವಿ ಸಂಸ್ಥೆ ಈ ಸಿನಿಮಾವನ್ನು ನಿರ್ಮಾಣ ಮಾಡಿತ್ತು. ಭರತ್ ಕಮ್ಮ ನಿರ್ದೇಶನ ಮಾಡಿದ್ದರು.

ಪ್ರಸ್ತುತ ಸಾಯಿ ಪಲ್ಲವಿ ನಾಗಚೈತನ್ಯ ಜೊತೆ ಲವ್‌ ಸ್ಟೋರಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಾಣಾ ದಗ್ಗುಬಾಟಿ ಅಭಿನಯದ ವಿರಾಟ ಪರ್ವ ಸಿನಿಮಾದಲ್ಲೂ ನಟಿಸಲು ಸಾಯಿ ಪಲ್ಲವಿ ಕಾಲ್‌ ಶೀಟ್‌ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT