ಬುಧವಾರ, ಸೆಪ್ಟೆಂಬರ್ 22, 2021
29 °C

ಸಂಭಾವನೆ ಹೆಚ್ಚಿಸಿಕೊಂಡ ನಟಿ ಸಾಯಿ ಪಲ್ಲವಿ

. Updated:

ಅಕ್ಷರ ಗಾತ್ರ : | |

Prajavani

ನಾನಿ ನಟನೆಯ ತೆಲುಗಿನ ‘ಶ್ಯಾಮ್‌ ಸಿಂಗ ರಾಯ್‌’ ಚಿತ್ರ ಕುತೂಹಲ ಹೆಚ್ಚಿಸಿದೆ. ಸಿತಾರಾ ಎಂಟರ್‌ಟೈನ್‌ಮೆಂಟ್ಸ್‌ನಡಿ ನಿರ್ಮಾಣವಾಗುತ್ತಿರುವ ಇದನ್ನು ನಿರ್ದೇಶಿಸುತ್ತಿರುವುದು ರಾಹುಲ್ ಸಂಕ್ರಿತ್ಯನ್. ಇದರಲ್ಲಿ ಸಾಯಿ ಪಲ್ಲವಿ ನಟಿಸುವುದು ಈಗಾಗಲೇ ಪಕ್ಕಾ ಆಗಿದೆ.

ನಾಗ ಚೈತನ್ಯ ನಟನೆಯ ‘ಲವ್‌ ಸ್ಟೋರಿ’ ಚಿತ್ರಕ್ಕೂ ಸಾಯಿ ಪಲ್ಲವಿಯೇ ನಾಯಕಿ. ರಾನಾ ದಗ್ಗುಬಾಟಿ ನಾಯಕನಾಗಿರುವ ‘ವಿರಾಟ ಪರ್ವಂ’ ಚಿತ್ರಕ್ಕೂ ಅವರೇ ಹೀರೊಯಿನ್‌. ಇದರಲ್ಲಿ ಆಕೆಯದು ನಕ್ಸಲೈಟ್‌ ಪಾತ್ರ. ಈ ನಡುವೆ ಆಕೆಯು ಸಂಭಾವನೆ ಮೊತ್ತ ಹೆಚ್ಚಿಸಿಕೊಂಡಿರುವ ಸುದ್ದಿ ಟಾಲಿವುಡ್‌ ಪಡಸಾಲೆಯಿಂದ ಹೊರಬಿದ್ದಿದೆ.

‘ಶ್ಯಾಮ್‌ ಸಿಂಗ ರಾಯ್’ ಚಿತ್ರದಲ್ಲಿನ ನಟನೆಗಾಗಿ ಆಕೆ ₹ 2 ಕೋಟಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರಂತೆ. ತೆರೆಯ ಮೇಲೆ ಆಕೆಯ ನಟನೆ, ನೃತ್ಯ ಮತ್ತು ಅಭಿಮಾನಿಗಳ ಬಳಗದ ಲೆಕ್ಕಾಚಾರದ ಆಧರಿಸಿದೆಯೇ ನಿರ್ಮಾಪಕರು ಆಕೆಗೆ ಇಷ್ಟು ಮೊತ್ತ ನೀಡಲು ನಿರ್ಧರಿಸಿದ್ದಾರಂತೆ. ಶೀಘ್ರವೇ, ಕಾಲ್‌ಶೀಟ್‌ಗೆ ಆಕೆ ಸಹಿ ಹಾಕಲಿದ್ದು, ನವೆಂಬರ್‌ನಲ್ಲಿ ಇದರ ಶೂಟಿಂಗ್‌ ಶುರುವಾಗುವ ನಿರೀಕ್ಷೆಯಿದೆ.

ಈ ಚಿತ್ರದಲ್ಲಿ ಮೂವರು ನಾಯಕಿಯರು ಇರಲಿದ್ದಾರೆ. ಎರಡನೇ ಹೀರೊಯಿನ್‌ ಆಗಿ ನಟಿಸುವಂತೆ ರಶ್ಮಿಕಾ ಮಂದಣ್ಣ ಜೊತೆಗೆ ಚಿತ್ರತಂಡ ಮಾತುಕತೆ ನಡೆಸಿತ್ತಂತೆ. ಸಾಯಿ ಪಲ್ಲವಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಪರಿಣಾಮ ಪರದೆ ಮೇಲೆ ತನ್ನ ಪಾತ್ರಕ್ಕೆ ಅಷ್ಟೊಂದು ಪ್ರಾಧಾನ್ಯ ಸಿಗುವುದಿಲ್ಲ ಎಂದು ರಶ್ಮಿಕಾ ಈ ಅವಕಾಶವನ್ನು ತಿರಸ್ಕರಿಸಿದ್ದಾರೆ ಎಂಬ ಸುದ್ದಿಯಿದೆ. 

ಶ್ಯಾಮ್‌ ಸಿಂಗ ರಾಯ್‌ ಪಾತ್ರದಲ್ಲಿ ನಾನಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ, ಅವರು ಈ ಪಾತ್ರಕ್ಕಾಗಿ ವಿಶೇಷ ತಯಾರಿ ಕೂಡ ನಡೆಸಿದ್ದಾರೆ. ಕೋಲ್ಕತ್ತದಲ್ಲಿ ಇದರ ಬಹುತೇಕ ಭಾಗದ ಚಿತ್ರೀಕರಣ ನಡೆಸಲು ಚಿತ್ರತಂಡ ನಿರ್ಧರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು